ಕಾಮನ್ವೆಲ್ತ್ ಗೇಮ್ಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಬಾಕ್ಸರ್ಗಳಾದ ಜೇಡುಮಣಿ ಸಿಂಗ್ ಮತ್ತು ಪ್ರೀತಿ ಪವಾರ್ ಭರ್ಜರಿ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಸೇನೆಯ ಬಾಕ್ಸರ್ ಜಾದುಮಣಿ ಸಿಂಗ್ ಅವರು ಪಾಕಿಸ್ತಾನದ ಸುಮಾಮಾ ರೆಹಮಾನ್ ವಿರುದ್ಧ 5-0 ಅಂತರದ ಏಕಪಕ್ಷೀಯ ಜಯ ಸಾಧಿಸಿದರು. ಪ್ರೇಕ್ಷಕರ ಜಯಘೋಷಗಳ ನಡುವೆ ಅತ್ಯುತ್ತಮ ರಿಂಗ್ ಕ್ರಾಫ್ಟ್ ಹಾಗೂ ವೇಗದ ಪಂಚ್ಗಳ ಮೂಲಕ ಎದುರಾಳಿಯನ್ನು ಮಣಿಸಿದ ಜಾದುಮಣಿ, ತಮ್ಮ ಈ ಗೆಲುವನ್ನು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಕಾರ್ಗಿಲ್ ಯುದ್ಧದ ವೀರ ಯೋಧರಿಗೆ ಸಮರ್ಪಿಸಿ ದೇಶಕ್ಕೆ ಚಿನ್ನದ ಪದಕ ಗೆಲ್ಲುವ ಇಷ್ಟವನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ (54 ಕೆಜಿ ವಿಭಾಗ) ಮಲಾವಿಯ ಡೆಬೋರಾ ಎಂಟೆAಜೆ ವಿರುದ್ಧದ ಪಂದ್ಯದಲ್ಲಿ ಎರಡನೇ ರೌಂಡ್ನಲ್ಲೇ ‘ರೆಫರಿ ಸ್ಟಾಪ್ ಕಂಟೆಸ್ಟ್’ (ಖSಅ) ಆಧಾರದ ಮೇಲೆ ಭರ್ಜರಿ ಗೆಲುವು ದಾಖಲಿಸಿದರು. ಈ ಇಬ್ಬರೂ ಬಾಕ್ಸರ್ಗಳು ಈಗ ಪದಕ ಖಾತ್ರಿಪಡಿಸಿಕೊಳ್ಳಲು ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ. ಆದಾಗ್ಯೂ, 65 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಮತ್ತೊಬ್ಬ ಭಾರತೀಯ ಬಾಕ್ಸರ್ ಆದಿತ್ಯ ಪ್ರತಾಪ್,
ಉಗಾಂಡಾದ ನುಹು ಬ್ಯಾಟೆ ವಿರುದ್ಧ 2-3 ಅಂತರದಿAದ ಸೋಲನುಭವಿಸಿ ಪಂದ್ಯಾವಳಿಯಿAದ ಹೊರಬಿದ್ದಿದ್ದಾರೆ.
ಬಾಕ್ಸಿಂಗ್ನಲ್ಲಿ ಪಾಕಿಸ್ತಾನ ವಿರುದ್ಧ ಜಡುಮಣಿ ಸಿಂಗ್ಗೆ ಗೆಲುವು!



