ಕೆಜಿಎಫ್: ಮಾಜಿ ಶಾಸಕ ವೈ. ಸಂಪAಗಿ ಅವರಿಗೆ ಕೆಜಿಎಫ್ ಕ್ಷೇತ್ರದ ಜನಪ್ರಿಯ ಶಾಸಕಿ ರೂಪಕಲಾ ಶಶಿಧರ್ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡರು ತೀವ್ರ ವಾಗ್ದಾಳಿ ನಡೆಸಿದ್ದಾರೆ.ಗ್ರಾಮದ ಸಮೀಪದ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಶೆಟ್ಟಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಮಾಜಿ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ದುರ್ಗಾ ಪ್ರಸಾದ್, ಮಾಜಿ ಶಾಸಕ ವೈ. ಸಂಪಂಗಿ ಅವರೇ, ನಾವು ಸಹ ಈ ಹಿಂದೆ ನಿಮ್ಮ ಜೊತೆಗಿದ್ದವರೇ ಆದರೆ ನೀವು ಇತ್ತೀಚೆಗೆ ಕೆಲವರ ತಪ್ಪು ಹಾದಿಹಿಡಿಸುವ ಮಾತುಗಳನ್ನು ಕೇಳಿಕೊಂಡು ಶಾಸಕರ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿರುವುದು ಸರಿಯಲ್ಲ ಕ್ಷೇತ್ರದ ಹಿರಿಯ ಮುಖಂಡರಾದ ಬ್ಯಾಲಹಳ್ಳಿ ಗೋವಿಂದಗೌಡ ಅವರ ಮಾರ್ಗದರ್ಶನದಲ್ಲಿ ಕೆಜಿಎಫ್ ಕ್ಷೇತ್ರವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಅವರು ಸೋತ ಸಂದರ್ಭದಲ್ಲೂ ರೂಪಕಲಾ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಮಾಡಿ ಬಡವರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದಾರೆ ಇನ್ನು ಮುಂದಾದರೂ ಶಾಸಕರಿಗೆ ಇಲ್ಲಸಲ್ಲದ ಆರೋಪಗಳ ಮೂಲಕ ಅವಮಾನ ಮಾಡುವುದನ್ನು ನಿಲ್ಲಿಸದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.ಒತ್ತುವರಿ ಸಾಬೀತಾದರೆ ರಾಜೀನಾಮೆಗೆ ಸಿದ್ಧ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮಸಂದ್ರ ನಾಗರಾಜ್ ಮಾತನಾಡಿ, ಸರ್ಕಾರದ ಗುಂಡುತೋಪು ಹಾಗೂ ಇನಾಂತಿ ಜಾಗವನ್ನು ಒತ್ತುವರಿ ಮಾಡಿಕೊಂಡು ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣ ಮಾಡಲು ಮುಂದಾದಾಗ ಸ್ವತಃ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಭೇಟಿ ನೀಡಿ ತಡೆ ನೀಡಿದ್ದು ಯಾರು ಎಂಬುದನ್ನು ಜನ ಮರೆತಿಲ್ಲ ಎಕರೆಗಟ್ಟಲೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ನೀವೇ ಹೊರತು ನಮ್ಮ ಶಾಸಕರಲ್ಲ ನಮ್ಮ ಶಾಸಕರು ಒಂದು ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದರೂ ತಕ್ಷಣವೇ ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಸವಾಲು ಹಾಕಿದರು. ನಕಲಿ ದಾಖಲೆಗಳ ಸೃಷ್ಟಿ ತನಿಖೆಯಾಗಲಿ: ಮುಖಂಡ ವೇಗಸಂದ್ರ ವೆಂಕಟಚಲಪತಿ ಮಾತನಾಡಿ, ಈ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದ ಅವಧಿಯಲ್ಲಿ ದರಕಾಸ್ತು ಸಮಿತಿಯ ಸದಸ್ಯರ ಅನುಮತಿಯೇ ಇಲ್ಲದೆ, ಶಾಸಕರು ಹಾಗೂ ತಹಶೀಲ್ದಾರರು ಸೇರಿ ಶಾಸಕರ ಹಿಂಬಾಲಕರಿಗೆ ಜಮೀನು ಮಂಜೂರು ಮಾಡಲು ನಕಲಿ
ದಾಖಲೆಗಳನ್ನು ಸೃಷ್ಟಿಸಿದ್ದಾರೆ ಮಾಜಿ ಶಾಸಕರು ಇತರರ ಮೇಲೆ ಆರೋಪ ಮಾಡುವ ಮೊದಲು ತಮ್ಮ ಅವಧಿಯಲ್ಲಿ ನಡೆದ ಈ ನಕಲಿ ದಾಖಲೆಗಳ ಹಗರಣದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.ಗ್ರಾನೈಟ್ ಕಳ್ಳತನದ ಆರೋಪ ಹಾಸ್ಯಾಸ್ಪದ: ಸುಮಾರು 25 ಎಕರೆ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲು ಶಾಸಕರು ಮತ್ತು ಸಮಿತಿಯ ಪದಾಧಿಕಾರಿಗಳು ಎಷ್ಟು ಶ್ರಮ ವಹಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಆದರೆ ಮಾಜಿ ಶಾಸಕರು ರಾಜಕೀಯ ದ್ವೇಷದಿಂದ ಇಲ್ಲಿ ಗ್ರಾನೈಟ್ ಕಲ್ಲುಗಳ ಕಳ್ಳತನವಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಅವರೇ ಖುದ್ದಾಗಿ ಸ್ಥಳಕ್ಕೆ ಬಂದು ಪರಿಶೀಲಿಸಿದರೆ ಅಲ್ಲಿ ಯಾವ ಕಲ್ಲುಗಳಿವೆ ಎಂಬ ಸತ್ಯ ಗೊತ್ತಾಗುತ್ತದೆ ಎಂದು ಎಪಿಎಂಸಿ ನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.ಉಚಿತ ಕೊಳವೆ ಬಾವಿ ಭಾಗ್ಯ: ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿನೋದ್ ಕಾರ್ತಿಕ್ ಮಾತನಾಡಿ, ಬಿಜೆಪಿ ಶಾಸಕರ ಅವಧಿಯಲ್ಲಿ ಪ್ರತಿಯೊಂದು ಕೊಳವೆ ಬಾವಿ ಕೊರೆಯಲು ಇಂತಿಷ್ಟು ಎಂದು ರೈತರಿಂದ ಲಂಚ ಪಡೆಯಲಾಗುತ್ತಿತ್ತು ಆದರೆ ರೂಪಕಲಾ ಶಶಿಧರ್ ಅವರು ಶಾಸಕರಾದ ಮೇಲೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರೈತರಿಂದ ಒಂದು ಪೈಸೆಯನ್ನೂ ಪಡೆಯದೆ ಉಚಿತವಾಗಿ ಕೊಳವೆ ಬಾವಿಗಳನ್ನು ಕೊರೆಸಿಕೊಡುತ್ತಿದ್ದಾರೆ ಈ ಅಭಿವೃದ್ಧಿ ಸಹಿಸದೆ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಎಂಬಿಎ ಕೃಷ್ಣಪ್ಪ, ಮುನೇಗೌಡ, ಶ್ರೀನಿವಾಸ್, ಕೇಶವ ರೆಡ್ಡಿ, ನಾಗೇಂದ್ರ, ಬುಜ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವೈ.ಸಂಪಂಗಿ ರವರಿಗೆ ಶಾಸಕಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಕಾಂಗ್ರೆಸ್ ಮುಖಂಡರ ಆಕ್ರೋಶ



