ಚಿಕ್ಕಮಗಳೂರು: ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬAಧ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಂಎಲ್ಸಿ ಸಿ.ಟಿ ರವಿಯವರು ಪೊಲೀಸರ ನೋಟಿಸ್ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ಕೇಳಿದ್ದಾರೆ.ಈ ಬಗ್ಗೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣದಲ್ಲಿ ನೋಟಿಸ್ ಕಡ್ಡಾಯ. ಪೊಲೀಸರ ನೋಟಿಸ್ಗೆ ಸಮಾಜಾಯಿಷಿ ನೀಡಲು 7 ದಿನಗಳ ಕಾಲಾವಕಾಶ ಇರುತ್ತಿತ್ತು. ಈಗ ಪೊಲೀಸರು ನೀಡಿರುವ ಸಮಯ ನಿಸ್ಸಂದೇಹವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ. ನಾನು ಹಾಲಿ ಪರಿಷತ್ ಸದಸ್ಯ ಆಗಿರುವುದರಿಂದ ಪಕ್ಷದ ಬೇರೆ ಜವಾಬ್ದಾರಿಗಳಿವೆ. ರಾಯಚೂರು-ಕೊಪ್ಪಳ ಜಿಲ್ಲೆಗೆ ಬರ ಪರೀಶಿಲನೆಗೆ ತೆರಳಬೇಕಿದೆ. ಜು.29 ಹಾಗೂ 30ರಂದು ಪಕ್ಷದ ತುರ್ತು ಕೆಲಸಗಳಿಗೆ ತೆರಳಬೇಕಿದೆ.



