ಫಿಫಾ ವಿಶ್ವಕಪ್ನ 23ನೇ ಸೀಸನ್ಗೆ ಅದ್ಧೂರಿ ಚಾಲನೆ ದೊರೆತಿದೆ. ಮೆಕ್ಸಿಕೋದ ಪ್ರತಿಷ್ಠಿತ ಎಸ್ಟಾಡಿಯೋ ಅಝಟೆಕಾ ಕ್ರೀಡಾಂಗಣದಲ್ಲಿ ನಡೆದ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯವು ಇದೀಗ ಇತಿಹಾಸ ಪುಟ ಸೇರಿದೆ. ಆದರೆ ಇದು ಆಟದಿಂದಲ್ಲ. ಬದಲಾಗಿ ರೆಡ್ ಕಾರ್ಡ್ನಿಂದಾಗಿ..!
ಇತಿಹಾಸ ಬರೆದ ಉದ್ಘಾಟನಾ ಪಂದ್ಯ!
ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ಸೌತ್ ಆಫ್ರಿಕಾವನ್ನು 2-0 ಗೋಲುಗಳಿಂದ ಮಣಿಸಿತು. ಆದರೆ, ಎಸ್ಟಾಡಿಯೋ ಅಝಟೆಕಾ ಕ್ರೀಡಾಂಗಣದಲ್ಲಿ ನಡೆದ ಈ ಹಣಾಹಣಿ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಹಾಗೂ ಕಠಿಣ ಪಂದ್ಯವಾಗಿ ದಾಖಲಾಗಿದೆ. ಇದಕ್ಕೆ ಮುಖ್ಯ ಕಾರಣ ಮೂವರು ಆಟಗಾರರು ರೆಡ್ ಕಾರ್ಡ್ ಪಡೆದಿರುವುದು.
ಈ ಪಂದ್ಯದಲ್ಲಿ ರೆಫರಿಯಾಗಿ ಕಾಣಿಸಿಕೊಂಡ ಬ್ರೆಝಿಲ್?ನ ವಿಲ್ಟನ್ ಪೆರೇರಾ ಸಂಪಾಯೊ ಅವರು ದ್ವಿತೀಯಾರ್ಧದಲ್ಲಿ ಒಟ್ಟು 3 ನೇರ ರೆಡ್ ಕಾರ್ಡ್ಗಳನ್ನು ಪ್ರದರ್ಶಿಸಿ ಇತಿಹಾಸ ನಿರ್ಮಿಸಿದರು. ಅಂದರೆ ವಿಶ್ವಕಪ್ ಇತಿಹಾಸದಲ್ಲಿ ಉದ್ಘಾಟನಾ ಪಂದ್ಯವೊAದರಲ್ಲೇ ಮೂವರು ಆಟಗಾರರು ಮೈದಾನದಿಂದ ಹೊರಹಾಕಲ್ಪಟ್ಟಿರುವುದು ಇದೇ ಮೊದಲು.
ಕಟ್ಟುನಿಟ್ಟಾದ ಫಿಫಾ ನಿಯಮಗಳ ಪ್ರಭಾವ!
ಈ ಬಾರಿಯ ಫಿಫಾ ವಿಶ್ವಕಪ್ನಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಂತಾರಾಷ್ಟ್ರೀಯ ಫುಟ್ಬಾಲ್ ಅಸೋಸಿಯೇಷನ್ ಮಂಡಳಿ ಜಾರಿಗೆ ತಂದಿರುವ ಹೊಸ ಶಿಸ್ತಿನ ನಿಯಮಗಳೇ 3 ರೆಡ್ ಕಾರ್ಡ್ ಸಿಗಲು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬಾಯಿ ಮುಚ್ಚಿಕೊಂಡರೆ ರೆಡ್ ಕಾರ್ಡ್: ಮೈದಾನದಲ್ಲಿ ಆಟಗಾರರು ಗಲಾಟೆ ಅಥವಾ ವಾಗ್ವಾದದ ಸಮಯದಲ್ಲಿ ಎದುರಾಳಿ ಅಥವಾ ರೆಫರಿಯನ್ನು ನಿಂದಿಸುವುದನ್ನು ಬಚ್ಚಿಡಲು ತಮ್ಮ ಬಾಯಿಯನ್ನು ಕೈ ಅಥವಾ ಜೆರ್ಸಿಯಿಂದ ಮುಚ್ಚಿಕೊಂಡರೆ ನೇರವಾಗಿ ರೆಡ್ ಕಾರ್ಡ್ ನೀಡುವ ನಿಯಮ ತರಲಾಗಿದೆ.
ಪ್ರತಿಭಟನೆಗೆ ಶಿಕ್ಷೆ: ತೀರ್ಪುಗಾರರ ನಿರ್ಧಾರವನ್ನು ಪ್ರತಿಭಟಿಸಿ ಅಶಿಸ್ತು ತೋರಿದರೆ ಅಥವಾ ಮೈದಾನ ಬಿಟ್ಟು ಹೊರನಡೆದರೆ ಕಠಿಣ ಕಾರ್ಡ್ ಶಿಕ್ಷೆ ಕಾಯಂ ಆಗಿದೆ.
ಹೊಸ ನಿಯಮಗಳ ಹೈಡ್ರಾಮಾ! ಒಂದೇ ದಿನ 3 ರೆಡ್ ಕಾರ್ಡ್?..!



