ಬೆಂಗಳೂರು: ಬಡವರ ಹೊಟ್ಟೆ ತುಂಬಿಸಬೇಕಾದ ಅಕ್ಕಿ, @DKShivakumar ಸರ್ಕಾರದ ಆಡಳಿತದಲ್ಲಿ ಕಳ್ಳಸಂತೆಕೋರರ ಪಾಲಾಗುತ್ತಿದೆ. ಜನರ ಹಸಿವಿನ ಹೆಸರಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ನಾಯಕರು, ಬಡವರ ತಟ್ಟೆಗೆ ಸೇರಬೇಕಾದ “ಅನ್ನಭಾಗ್ಯ”ದ ಅಕ್ಕಿಯನ್ನು ಖಾಸಗಿ ಗೋದಾಮುಗಳಿಗೆ ಅಕ್ರಮವಾಗಿ ಸಾಗಿಸಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಈ ಸಂಬAಧ ಟ್ವಿಟ್ ಮಾಡಿರುವ ಅವರು, ಲೋಕಾಯುಕ್ತ ದಾಳಿಯಿಂದ @Iಓಅಏಚಿಡಿಟಿಚಿಣಚಿಞಚಿ ಸರ್ಕಾರದ ಮತ್ತೊಂದು ಮಹಾ ಹಗರಣ ಈಗ ಜಗಜ್ಜಾಹೀರಾಗಿದೆ: ಟನ್ ಗಟ್ಟಲೆ ಅಕ್ಕಿ ಕಳವು: ಬೆಂಗಳೂರಿನ ವಿವಿಧೆಡೆ ಆಹಾರ ನಿಗಮದ ಗೋದಾಮುಗಳಿಂದಲೇ ನೂರಾರು ಕ್ವಿಂಟಲ್ ಅನ್ನಭಾಗ್ಯದ ಅಕ್ಕಿ, ರಾಗಿ ಖಾಸಗಿ ಗೋದಾಮುಗಳಿಗೆ ಅಕ್ರಮವಾಗಿ ಸರಬರಾಜು! ಲೆಕ್ಕವಿಲ್ಲದ 860 ಚೀಲಗಳು: ಶಾಂತಿನಗರದ ನಿಗಮದ ಗೋದಾಮಿನಲ್ಲೇ ದಾಖಲೆ ಇಲ್ಲದ ನೂರಾರು ಚೀಲ ಅಕ್ಕಿ ಪತ್ತೆ! ಗೋದಾಮುಗಳಲ್ಲಿ ಸಿಸಿಟಿವಿ ಇಲ್ಲ, ಸುರಕ್ಷತೆಯೂ ಇಲ್ಲ – ಇದೆಲ್ಲವೂ ವ್ಯವಸ್ಥಿತ ಲೂಟಿಗೆ ಸರ್ಕಾರವೇ ಮಾಡಿಕೊಟ್ಟ ದಾರಿಯಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಅನ್ನಭಾಗ್ಯಕ್ಕೂ ಕಾಂಗ್ರೆಸ್ “ಕೈ”ಗಳು ಕನ್ನ!



