ತಕ್ಷಣದಿಂದಲೇ ಜಾರಿಗೆ ಬರುವಂತೆ, ನ್ಯೂಜಿಲ್ಯಾಂಡ್ ತಂಡದ ಆಧಾರ ಸ್ಥಂಭದAತಿದ್ದ ಕೇನ್ ವಿಲಿಯಮ್ಸನ್, ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆAಡ್ ಮತ್ತು ನ್ಯೂಜಿಲ್ಯಾಂಡ್ ಸರಣಿಯ ಮಧ್ಯೆಯೇ ನಿವೃತ್ತಿ ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಲಿಯಮ್ಸನ್ ನಿರ್ಧಾರ, ಕ್ರಿಕೆಟ್ ಜಗತ್ತನ್ನು ಶಾಕ್ಗೆ ತಳ್ಳಿದೆ. 16 ವರ್ಷಗಳ ಅದ್ಭುತ ಕ್ರಿಕೆಟ್ ಜೀವನಕ್ಕೆ ಕೇನ್ ವಿಲಿಯಮ್ಸನ್ ವಿದಾಯ ಘೋಷಿಸಿದ್ದಾರೆ.
ಕ್ರಿಕೆಟಿನ ಎಲ್ಲಾ ಮಾದರಿಯ 378 ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್, ಇಂಗ್ಲೆAಡ್ ವಿರುದ್ದದ ಸರಣಿಯ ಮಧ್ಯೆಯೇ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದಾರೆ. 35 ವರ್ಷದ ವಿಲಿಯಮ್ಸನ್, ಲಾರ್ಡ್್ಸ ಮೈದಾನದಲ್ಲಿ ನಡೆದ ಇಂಗ್ಲೆAಡ್ ವಿರುದ್ದದ ಮೊದಲ ಟೆಸ್ಟಿನ ಮೊದಲ ಇನ್ನೀಂಗ್ಸ್ನಲ್ಲಿ ಸೊನ್ನೆ, ಎರಡನೇ ಇನ್ನಿಂಗ್ಸ್?ನಲ್ಲಿ ಹದಿನೆಂಟು ರನ್ ಗಳಿಸಿದ್ದರು. ಈ ಪಂದ್ಯವನ್ನು, ಕಿವೀಸ್ ಸೋತಿತ್ತು. ಸರಣಿಯ ಮಧ್ಯೆಯೇ ಇವರ ರಿಟೈರ್ಮೆಂಟ್, ಅಚ್ಚರಿಗೆ ಕಾರಣವಾಗಿದೆ.
ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್್ಸ ಮೈದಾನದಲ್ಲಿ ವಿಲಿಯಮ್ಸನ್ ಕೊನೆಯ ಪಂದ್ಯವನ್ನು ಆಡುವ ಮೂಲಕ, ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. 2015 – 2024ರವರೆಗೆ ಇವರು, ಐಪಿಎಲ್ ನಲ್ಲೂ ಆಡಿದ್ದರು. ಹಾಲೀ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ Strategic Advisor ಆಗಿ ಕೆಲಸ ನಿರ್ವಹಿಸಿದ್ದರು. 2024ರಲ್ಲಿ ಕೇವಲ ಎರಡು ಪಂದ್ಯವನ್ನು ಮಾತ್ರ ಇವರು ಆಡಿದ್ದರು.
ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಗೆ ಬರೆದ ರಿಟೈರ್ಮೆಂಟ್ ಪತ್ರದಲ್ಲಿ, “ನಾನು ನಿವೃತ್ತಿ ಹೊಂದುವ ಬಗ್ಗೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ. ಕೆಲವು ದಿನಗಳಿಂದ ಸರಣಿಯ ಮಧ್ಯೆಯೇ ನಿವೃತ್ತಿ ಹೊಂದುವುದು ಸರಿಯಾದ ಸಮಯ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ.ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನನ್ನ ತಂಡಕ್ಕೆ ಬಲವಾದ ಉತ್ಸಾಹವನ್ನು ತುಂಬಿದ್ದೇನೆ. ಈಗ ಕಡಿಮೆ ಶ್ರಮದೊಂದಿಗೆ ಆಟವನ್ನು ಮುಂದುವರಿಸುವುದು ಸರಿಯಲ್ಲ ಎನ್ನುವ ಹಂತಕ್ಕೆ ಬಂದಿದ್ದೇನೆ. ನನ್ನ ಸ್ವಂತ ಇಚ್ಚೆಯಿಂದ ನಿವೃತ್ತಿ ಹೊಂದುತ್ತಿದ್ದೇನೆ” ಎಂದು ಕೇನ್ ವಿಲಿಯಮ್ಸನ್, ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇನ್ ವಿಲಿಯಮ್ಸನ್ ಯಾವಾಗಲೂ ಮೊದಲು ತಂಡಕ್ಕೆ ಆದ್ಯತೆಯನ್ನು ನೀಡುತ್ತಿದ್ದರು. ಅವರ ನಿವೃತ್ತಿಯ ನಿರ್ಧಾರ ನನಗಂತೂ ಶಾಕ್ ನೀಡಿದೆ. ಅವರೊಬ್ಬರು ಅದ್ಭುತ ಆಟಗಾರ, ಅತ್ಯುತ್ತಮ ನಾಯಕರಾಗಿದ್ದರು. ಅವರು, ಕ್ರಿಕೆಟ್ ಕ್ರೀಡೆಯ ಅತ್ಯಂತ ಶ್ರೇಷ್ಠ ರಾಯಭಾರಿ ಎಂದು ನ್ಯೂಜಿಲ್ಯಾಂಡ್ ತಂಡದ ಕೋಚ್, ರಾಬ್ ವಾಲ್ಟರ್ ಅಭಿಪ್ರಾಯ ಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕೇನ್ ವಿಲಿಯಮ್ಸನ್ ನಿವೃತ್ತಿ ಘೋಷಣೆ



