ಕನಕಪುರ ಮಾನ್ಯ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಸಂಗಮ – ಮೇಕೆದಾಟು ಬಳಿಯಿಂದ ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿ ಅಧಿಕಾರಕ್ಕೆ ಬಂದ ನಂತರ ಮಾತು ತಪ್ಪಿದ್ದಾರೆ ಎಂದು ರೈತ ಸಂಘದ ಮುಖಂಡ ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಿ ಡಬ್ಲು÷್ಯ ಆರ್ ಸಿ ಆದೇಶದ ಮೇರೆಗೆ ಕೆ ಆರ್ ಎಸ್ ನಿಂದ ತಮಿಳುನಾಡಿಗೆ 15 ದಿನ 3.5 ಕ್ಯುಸೆಕ್ಸೆ ನೀರು ಬಿಡುವ ಆದೇಶದ ವಿರುದ್ಧ ಸಿ ಡಬ್ಲು÷್ಯ ಎಂ ಎ ಮೇಲ್ಮನವಿ ವಜಾ ಆದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆ ಮಾಡಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಡಿ ಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಚನ್ನಬಸಪ್ಪ ಸರ್ಕಲ್ ನಲ್ಲಿ ತಮಿಳು ನಾಡು ಸರ್ಕಾರಕ್ಕೆ ಧಿಕ್ಕಾರ ಕೂಗಿದರು.
ರಾಜ್ಯ ರೈತಸಂಘದ ಮುಖಂಡ ಕುಮಾರಸ್ವಾಮಿ ಈ ವೇಳೆ ಮಾತನಾಡಿ ಕಳೆದ ವಾರ ಸಿ ಡಬ್ಲು÷್ಯ ಆರ್ ಸಿ ಸಭೆ ಯಲ್ಲಿ ಕರ್ನಾಟಕದ ಕೆ ಆರ್ ಎಸ್ ಜಲಾಶಯದಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 3.5 ಟಿ ಎಂ ಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಅವೈಜ್ಞಾನಿಕ ಆದೇಶ ಹೊರಡಿಸಿ ಕರ್ನಾಟಕದ ರೈತರ ಬೆನ್ನಿಗೆ ಚೂರಿ ಹಾಕಿದಂತೆ ಆಗಿದೆ ಇದು ಮತ್ತೊಮ್ಮೆ ಕರ್ನಾಟಕಕ್ಕೆ ಆದ ಅನ್ಯಾಯವಾಗಿದೆ ಇಂದು ಕೆ ಆರ್ ಎಸ್ ಜಲಾಶಯ ದಲ್ಲಿ ಕೇವಲ 35 ಟಿ ಎಂ ಸಿ ಮಾತ್ರ ನೀರಿದ್ದು ಮಂಡ್ಯ, ಮೈಸೂರು, ಚಾಮರಾಜನಗರ ದಲ್ಲಿ ನೂರಾರು ಕೆರೆಗಳು ಬತ್ತಿವೆ. ರಾಮನಗರ, ಕನಕಪುರ ಭಾಗದಲ್ಲಿ ಕೊಳವೆ ಬಾವಿಗಳು 1200 ಅಡಿಗೆ ಹೋದರೂ ನೀರಿಲ್ಲ,ರಾಗಿ, ಜೋಳ, ತೆಂಗು, ಹೈನುಗಾರಿಕೆ ಎಲ್ಲವೂ ಬರದಿಂದ ನಾಶವಾಗುತ್ತಿದೆ. ಈ ಸಂದರ್ಭದಲ್ಲಿ ಹೊರ ರಾಜ್ಯಕ್ಕೆ ನೀರು ಬಿಡುವುದು ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದರು.
ಕಾವೇರಿ ನ್ಯಾಯಾಧಿಕರಣ ತೀರ್ಪಿನಲ್ಲಿ “ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಕೊರತೆ ಇದ್ದರೆ ನೀರು ಬಿಡಲು ಕಡ್ಡಾಯವಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಹ ಸಿ ಡಬ್ಲು÷್ಯ ಆರ್ ಸಿ ಇದನ್ನು ಸಂಪೂರ್ಣವಾಗಿ ಮರೆತಿದೆ., ತಮಿಳುನಾಡು ನಮ್ಮ ಪಾಲಿನ ನೀರನ್ನು ಡ್ಯಾಮ್ಗಳಲ್ಲಿ ಶೇಖರಿಸಿ, ಉದ್ಯಮಕ್ಕೆ ಮಾರಾಟ ಮಾಡುತ್ತಿದೆ. ಅವರಿಗೆ ನೀರಿನ ಕೊರತೆ ಇಲ್ಲ, ಆದರೆ ನಾಟಕ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳೇ, ಇದು ನಿಮ್ಮ ಸ್ವಕ್ಷೇತ್ರ ಕನಕಪುರದ ವಿಷಯ. ನಿಮ್ಮ ಮತದಾರರಾದ ರೈತರ ಬದುಕು ಪ್ರಶ್ನೆ ಯಾಗಿದೆ,ನೀವು ಮೌನವಾಗಲು ಸಾಧ್ಯವೇ? ಆದ್ದರಿಂದ ಕರ್ನಾಟಕ ರಾಜ್ಯ ರೈತ ಸಂಘವು ತಮ್ಮನ್ನು ಈ ಮೂಲಕ ಆಗ್ರಹಿಸುವುದೇನೆಂದರೆ ಯಾವುದೇ ಕಾರಣಕ್ಕೂ ಏಖS ನಿಂದ ತಮಿಳುನಾಡಿಗೆ ಒಂದು ಹನಿ ನೀರನ್ನು ಬಿಡದೇ ಸಿ ಡಬ್ಲು÷್ಯ ಆರ್ ಸಿ ಆದೇಶವನ್ನು ತಿರಸ್ಕರಿಸುವುದರ ಜೊತೆಗೆ ತಕ್ಷಣ ಸುಪ್ರೀಂಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಬೇಕು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ, ಕರ್ನಾಟಕದ ಬರ ಪರಿಸ್ಥಿತಿ ವಿವರಿಸಿ, ನೀರು ಬಿಡದಂತೆ ಒತ್ತಡ ಹೇರಬೇಕು,ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಸರ್ವಪಕ್ಷ ಸಭೆ ಕರೆದು ಏಕಮತದ ನಿರ್ಣಯ ಮಾಡುವಂತೆ ಆಗ್ರಹ ಮಾಡಿದರು.
ರೈತ ಸಂಘದ ಸಂಚಾಲಕರಾದ ಚೀಲೂರು ಮುನಿರಾಜು ಮಾತನಾಡಿ ಕನಕಪುರದ ರೈತರು, ಮಹಿಳೆಯರು ತಲೆ ಮೇಲೆ ಖಾಲಿ ಕೊಡ, ಹಿಡಿದು ಮೆರವಣಿಗೆಯನ್ನು ಮಾಡಿ “ನಮಗೆ ಕುಡಿಯಲು ನೀರಿಲ್ಲ, ನಿಮಗೆ ಕೊಡಲು ನೀರಿಲ್ಲ” ಎಂದು ಘೋಷಣೆ ಕೂಗಿದ್ದಾರೆ,ಚನ್ನಬಸಪ್ಪ ಸರ್ಕಲ್ ಬಳಿ 1 ಗಂಟೆಗಳ ಕಾಲ ರಸ್ತೆ ತಡೆಯನ್ನು ನಡೆಸಿ ಸರ್ಕಾರಕ್ಕೆ ನಮ್ಮ ನೋವು ತಲುಪಿಸುತ್ತಿದ್ದೇವೆ, ಮುಖ್ಯಮಂತ್ರಿ ಗಳೇ, ನೀವು ನಮ್ಮ ನಾಯಕರು. ನಿಮ್ಮ ಕ್ಷೇತ್ರದ ರೈತನ ಕಣ್ಣೀರು ಒರೆಸುವುದು ನಿಮ್ಮ ಮೊದಲ ಕರ್ತವ್ಯ,ನೀವು ನೀರು ಬಿಡುವ ಮಾತನಾಡಿದರೆ ಮುಂದಿನ ದಿನಗಳಲ್ಲಿ “ಕಾವೇರಿ ಉಳಿಸಿ ಕರ್ನಾಟಕ ಉಳಿಸಿ” ಎಂದು ಬೆಂಗಳೂರುಚಲೋ ಮಾಡುವುದು ಅನಿವಾರ್ಯವಾಗುತ್ತದೆ.ಸರ್ಕಾರ ರೈತರ ಪರ ನಿಂತು, ದೇಶದ ಕಾನೂನನ್ನು ಎದುರಿಸಿ ರೈತರನ್ನು ರಕ್ಷಿಸಬೇಕು,ಇಲ್ಲದಿದ್ದರೆ ರಾಜ್ಯದ ಜನ ಎಂದಿಗೂನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು .
ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಯುವಶಕ್ತಿ ಶ್ರೀನಿವಾಸ್ ಕನ್ನಡ ಭಾಸ್ಕರ್ ಕೂ ಗಿ ಗಿರಿಯಪ್ಪ ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು . ಸ್ಟುಡಿಯೋ ಚಂದ್ರು ಗಬ್ಬಾಡಿ ಕಾಡೇಗೌಡ, ರಾಮಣ್ಣ ಸ್ವಾಮಿ ಹೆಚ್ ಎಂ ಗಿರೀಶ್ ಕುಶಿ ಕುಮಾರ್ ಚೀರಣಕುಪ್ಪೆ ರಾಜೇಶ್ ಅಪ್ಪಾಜಿ ರೈತ ಸಂಘದ ಶಿವರಾಜು ರವಿಚಂದ್ರ ಕುಮಾರ್ ಶಶಿಕುಮಾರ್ ಲೋಕಿ ದಿಲೀಪ ಮುಂತಾದವರು ಭಾಗವಾಯಿಸಿದ್ದರು . ಡೆಪ್ಯೂಟಿ ತಹಸೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆ



