ಚಿಂತಾಮಣಿ: ದೇವಾಲಯಗಳ ನಾಡು ಪುರಾಣ ಪ್ರಸಿದ್ದ ಸುಕ್ಷೇತ್ರ ಕೈವಾರದ ಸದ್ಗುರು ಯೋಗಿ ನಾರೇಯಣ ಮಠದಲ್ಲಿ ನಿರಂತರ 72 ಗಂಟೆಗಳ ಕಾಲ ನಡೆದ ಗುರುಪೂಜೆ ಸಂಗೀತೋತ್ಸವ ಗುರುವಾರ ಬೆಳಗಿನ ಜಾವ ಸಂಪನ್ನಗೊAಡಿತು. ಮೂರು ದಿನಗಳಿಂದ ಜೇನು ನೊಣದಂತೆ ಶ್ರೀ ಮಠದಲ್ಲಿ ಭಕ್ತರು ಮುತ್ತಿಕೊಂಡಿದ್ದರು. ಕೈವಾರದ ಮುಖ್ಯ ರಸ್ತೆ ಹಾಗೂ ಮಠದ ಆವರಣದಲ್ಲಿ ಮೂರು ದಿನ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಭಕ್ತ ಸಾಗರವೇ ಹರಿದು ಬಂತು. ಕೊನೆಯ ದಿನ ಕಾಲು ಸಂಧಿಸದಷ್ಟು ಜನರು ತುಂಬಿಕೊಂಡಿದ್ದರು. ವಿವಿಧ ರಾಜ್ಯಗಳಿಂದ ಮುಂಗಾರು ಮಳೆಯ ಪ್ರವಾಹದಂತೆ ಆಗಮಿಸಿದ ಭಕ್ತರು ಶುಕ್ರವಾರ ಬೆಳಿಗ್ಗೆ ಗುರುಪೂಜೆ ಮುಗಿಸಿ ಭಾರವಾದ ಮನಸ್ಸಿನಿಂದಲೇ ಗಂಟು ಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಸ್ವಗ್ರಾಮಗಳಿಗೆ ಪ್ರಯಾಣ ಬೆಳೆಸಿದರು. ಕಾರ್ಯಕ್ರಮ ತುಂಬಾ ಚನ್ನಾಗಿ ಇತ್ತು ಮುಂದಿನ ವರ್ಷದ ಗುರುಪೂಜೆ ತಪ್ಪದೆ ಮತ್ತೆ ಬರೋಣ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದರು. ಹೋಗುವಾಗ ಬೆಂಡು ಬೆತ್ತಸು, ಬುರುಗು ಪ್ರಸಾದ ಕವರಗಳನ್ನನು ಕೈಯಲ್ಲಿ ಹಿಡಿದು ಹೆಜ್ಜೆ ಹಾಕುವ ದೃಶ್ಯ ಸಾಮಾನ್ಯವಾಗಿತ್ತು. ಅದರ ಜೊತೆಗೆ ಮಕ್ಕಳ ಆಟಿಕೆ ವಸ್ತುಗಳನ್ನು ಖರೀದಿಸಿ ಕೈಯಲ್ಲಿ ಹಿಡಿದು ಸಂಗೀತದ ಗುಂಗಿನಲ್ಲಿಯೇ ಮನೆ ಕಡೆ ಮುಖ ಮಾಡಿದರು. ಮೂರು ದಿನ ನಡೆದ ಸಂಗೀತೋತ್ಸವದಲ್ಲಿ ಸುಮಾರು 2 ರಿಂದ 2.5 ಲಕ್ಷ ಜನ ಭಾಗವಹಿಸಿದ್ದಾರೆಂದು ಅಂದಾಜಿಸಲಾಗಿದೆ. ನಾಡಿನ ಅಂತರಾರಾಷ್ಟ್ರೀಯ ಖ್ಯಾತಿಯ ಹೆಸರಾಂತ ಸಂಗೀತ ವಿದ್ವಾಂಸರು ನಡೆಸಿಕೊಟ್ಟ ಸಂಗೀತ ಕಛೇರಿಗಳು, ಹರಿಕಥೆ, ಭರತನಾಟ್ಯ, ಬರ್ರ್ ಕಥೆ, ಸಂಗೀತ ವಾದ್ಯಗಳ ನಿನಾದ, ಕೋಲಾಟ, ಚಕ್ಕ ಭಜನೆ ಜನರನ್ನು ಮಂತ್ರಮುಗ್ದವಾಗಿಸಿದ್ದವು. 5000 ಭಜನಾ ತಂಡಗಳು ಭಜನೆ ಕೀರ್ತನೆಗಳನ್ನು ಹಾಡಿ ತಮ್ಮ ಸೇವೆಯನ್ನು ಸಲ್ಲಿಸಿದರು. ಸಂಗೀತ ಮುಗಿದರು ಅದರ ನಾದ ಕೈವಾರ ಜನತೆಯ ಕಿವಿಯಲ್ಲಿ ಸಂಗೀತದ ಝೆ0ಕಾರ ಗುಂಯ್ಯಿ ಗುಟ್ಟುತ್ತಿದೆ. ಬಂದ ಭಕ್ತರಿಗೆಲ್ಲ ಮೂರು ಹೊತ್ತು ಚಿತ್ರಾನ್ನ, ಪೊಂಗಲ್, ಅನ್ನ ಸಾಂಬಾರ್, ಮೊಸರನ್ನ, ಉಪ್ಪಿಟ್ಟು ರುಚಿಕಟ್ಟಾದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನ ಲಕ್ಷಾಂತರ ಭಕ್ತರು ಆಗಮಿಸಿದ್ದರು ಎಳ್ಳಷ್ಟೂ ತೊಂದರೆ ಆಗದೆ ಇರುವುದು ಸದ್ಗುರು ತಾತಾಯ್ಯನವರ ಪವಾಡವೇ ಸರಿ. ಕಾರ್ಯಕ್ರಮ ಇಷ್ಟೊಂದು ಸುಸೂತ್ರವಾಗಿ ನಡೆಸಲು ಶ್ರೀ ಮಠದ ಆಡಳಿತ ಮಂಡಳಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.ಕೈವಾರ ತಾತಯ್ಯನವರ ಮಠದ ಆವರಣ ಬಿಕೋ ಎನ್ನುತ್ತಿರುವುದು. ಗುರು ಪೂಜಾ ಸಂಗೀತೋತ್ಸವಕ್ಕೆ ಹಾಕಿದ ಶಾಮಿಯಾನ ಮತ್ತು ಕಟೌಟಗಳನ್ನು ತೆರುವು ಗೊಳಿಸುತ್ತಿರುವುದು.ಗುರು ಪೂಜಾ ಸಂಗೀತೋತ್ಸವವನ್ನು ಮುಗಿಸಿಕೊಂಡು ಊರಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿರುವ ಭಕ್ತರು.



