ಬೆಂಗಳೂರು: 7 ತಿಂಗಳ ಹಸುಗೂಸಿನ ಮುಂದೆಯೇ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿಂದು ನಡೆದಿದೆ.
ಸಾನಿಕ ಗೌಡ ಆತ್ಮಹತ್ಯೆಗೆ ಶರಣಾದ ದುರ್ದೆÊವಿ ಎಂದು ತಿಳಿದುಬಂದಿದೆ. ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಈ ಒಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತವರು ಮನೆ ಕೋಣೆಯಲ್ಲಿ ಸಾನಿಕ ನೇಣು ಬಿಗಿದುಕೊಂಡು ಶರಣಾಗಿದ್ದಾಳೆ. ಪರಪ್ಪನ ಅಗ್ರಹಾರದ ರಾಯಸಂದ್ರ ಮನೆಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.ಕಳೆದ ಒಂದುವರೆ ವರ್ಷದ ಹಿಂದೆ ಶರಣಗೌಡನ ಜೊತೆಗೆ ಸಾನಿಕ ಮದುವೆ ಆಗಿರುತ್ತದೆ ಆದರೆ ಕಳೆದ ಕೆಲವು ತಿಂಗಳ ಹಿಂದೆ ಸಾನಿಕಾಗೆ ಪತಿಯ ಅಕ್ರಮ ಸಂಬAಧ ಗಮನಕ್ಕೆ ಬರುತ್ತದೆ. ಇದರಿಂದ ಮನನೊಂದು ಸಾನಿಕ ಕಳೆದ ರಾತ್ರಿ 3 ಗಂಟೆಗೆ ಪತಿಗೆ ವಿಡಿಯೋ ಕಾಲ್ ಮಾಡಿ ತನ್ನ 7 ತಿಂಗಳ ಹಸುಗೂಸಿನ ಮುಂದೆಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣು



