ಬೆಂಗಳೂರು: ಬೆಂಗಳೂರು ಉತ್ತರ ಪಾಲಿಕೆಯ ಸ್ವಚ್ಛ ಭಾರತ ಅಭಿಯಾನದಡಿ ನಗರದ 100 ಬ್ಲಾಕ್ ಸ್ಪಾಟ್ನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದ್ದು, ಸ್ಥಳೀಯರು ಅದೇ ಜಾಗದಲ್ಲಿ ಕಬಡ್ಡಿ ಆಡಿ ಸಂಭ್ರಮಿಸಿದ್ದಾರೆ.ಥಣಿಸಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಭಾಗವಹಿಸಿದ್ದರು. ಸ್ವಚ್ಛಗೊಳಿಸಿದ ಜಾಗದಲ್ಲಿ ಸಚಿವರು ಸ್ವತಃ ಗೋಡೆಗೆ ಪೇಂಟಿAಗ್ ಮಾಡಿ, ಗಿಡಗಳನ್ನು ನೆಡುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.ಜೂ. 15ರಿಂದ ಬೆಂಗಳೂರು ಉತ್ತರ ಪಾಲಿಕೆ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿತ್ತು. ಈಗಾಗಲೇ 100 ಕ್ಕೂ ಹೆಚ್ಚು ಕಸದ ತಾಣಗಳನ್ನು ಸ್ವಚ್ಛಗೊಳಿಸಲಾಗಿದೆ. ಹಲವು ಕಡೆ ಕಸದ ರಾಶಿ ಇದ್ದ ಸ್ಥಳಗಳನ್ನು ಮಕ್ಕಳ ಆಟದ ಮೈದಾನಗಳಾಗಿ ರೂಪಿಸಲಾಗಿದೆ.



