ಬೆಂಗಳೂರು : ಮಂಗಳೂರಿನ ಉದ್ಯಮಿಗೆ ಕಾಂಗ್ರೆಸ್ ಮುಖಂಡ ಒಬ್ಬ ಹನಿ ಟ್ರ್ಯಾಪ್ ಮಾಡಿರುವ ಪ್ರಕರಣ ಬಳಕೆಗೆ ಬಂದಿದೆ. ಅಶ್ಲೀಲ ವಿಡಿಯೋ ಬಳಸಿ ಕೋಟಿ ಕೋಟಿ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಉದ್ಯಮೀಯಿಂದ ಬರೋಬ್ಬರಿ 2 ಕೋಟಿ 77 ಲಕ್ಷ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನಿಜಾಂ ಹಾಗು ಜಿತೇಶ್ ಎಂಬುವವರು ಉದ್ಯಮಿಯನ್ನ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿರುತ್ತಾನೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡ ಎರಡು ಕೋಟಿ 77 ಲಕ್ಷ ಹಣ ವಸೂಲಿ ಮಾಡಿದ್ದಾನೆ, ಇದೀಗ ಊರ್ವ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ
2024ರಲ್ಲಿಯೇ ಉದ್ಯಮಿಯ ಅಶ್ಲೀಲ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಜಿತೇಶ್ ಬ್ಲಾಕ್ ಮೇಲ್ ಮಾಡಿದ್ದಾನೇ. 35 ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೇ. ಮರ್ಯಾದೆಗೆ ಹೆದರಿ ಚೆಕ್ ಮೂಲಕ
ಜಿತೇಶ್ಗೆ ಉದ್ಯಮಿ ಹಣ ನೀಡಿದ್ದಾನೆ ಮತ್ತೆ ಮತ್ತೆ ಹಣ ಕೇಳಿದಾಗ ಕಾಂಗ್ರೆಸ್ ಮುಖಂಡ ನಿಜಾಮ್ಗೆ ಉದ್ಯಮಿ ಮಾಹಿತಿ ಕೊಡುತ್ತಾರೆ.
ಮಂಗಳೂರು ಉದ್ಯಮಿಗೆ ಹನಿಟ್ರ್ಯಾಪ್ , 2 ಕೋಟಿ ರೂ. ಹಣ ವಸೂಲಿ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಬಂಧನ



