ಮುಳುಬಾಗಿಲು: ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೂ ಸಹ ಬರದ ಕುರಿತು ಸರ್ಕಾರಕ್ಕೆ ಯಾವುದೇ ಚಿಂತನೆ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.ಕುರುಡುಮಲೆ ಶ್ರೀ ವಿನಾಯಕನ ದೇವಾಲಯದಲ್ಲಿ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಮಳೆ ಇಲ್ಲ, ಬೆಳೆ ಇಲ್ಲ, ಕೆರೆ ಕಟ್ಟೆಯಲ್ಲಿ ನೀರಿಲ್ಲ, ಜಲಾಶಯಗಳಲ್ಲಿ ನೀರಿಲ್ಲ, ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಬೇಸರ ಹೊರ ಹಾಕಿದ್ರು. ಆದ್ರೆ ರಾಜ್ಯ ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ರೀತಿಯ ಚಿಂತನೆ ಮಾಡುತ್ತಿಲ್ಲ, ಇನ್ನು ಬರದ ಕುರಿತು ರಾಜ್ಯ ಸರ್ಕಾರ ಇಂದು ಸಭೆಯನ್ನು ಕರೆದಿದ್ದು, ರೈತರ ಕಣ್ಣೀರು ಒರೆಸುವ, ನೆಮ್ಮದಿಯಾಗಿ ಬದಕುವ ವ್ಯವಸ್ಥೆ ಈ ಸರ್ಕಾರ ಮಾಡಿಲ್ಲ ಎಂದ್ರು. ಮಳೆ ಸಮರ್ಪಕವಾಗಿ ಆಗದ ಕಾರಣ ಕುಡಿಯುವ ನೀರಿಗೆ ಹಾಹಾಕಾರ ರಾಜ್ಯದಲ್ಲಿ ಆರಂಭವಾಗಿದ್ದು, ಈ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ, ವಿರೋದ ಪಕ್ಷವಾಗಿರುವ ಬಿಜೆಪಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದ್ದು, ಇದರ ವಿರುದ್ದ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಬೇಕಾಗಿದೆ ಎಂದ್ರು. ಬಿಡದಿ ಟೌನ್ ಶಿಪ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ಬಿಡದಿ ಬಗ್ಗೆ ವಿಜಯೇಂದ್ರ ಪಾದಯಾತ್ರೆ ಮಾಡಲಿದ್ದಾರೆ, ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ರಾಜ್ಯದಲ್ಲಿ ಇವತ್ತು ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದರೆ, ಆಡಳಿತ ಬದಲಾವಣೆಗೆ ರಾಜ್ಯದ ಜನರು ಹತೊರೆಯುತ್ತಿದ್ದಾರೆ.
ವಿಜಯೇಂದ್ರ ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ, ವಿನಾಯಕನ ಆರ್ಶೀವಾದದಿಂದ ಜನರಿಗೆ ಒಳ್ಳೆಯದಾಗಲೆಂದು ಕುಟುಂಬ ಸಮೇತ ಕುರುಡುಮಲೆಗೆ ಆಗಮಿಸಿ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಹೇಳಿದರು. ಇನ್ನು ಬೆಂಗಳೂರಿನಿಂದ ಮಗಳು ಪದ್ಮಾವತಿ ಮತ್ತು ಮೊಮಕ್ಕಳ ಜೊತೆ ಆಗಮಿಸಿದ ಯಡಿಯೂರಪ್ಪ ಕುರುಡಮಲೆ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.ಮಾಜಿ ಶಾಸಕರುಗಳಾದ ವೈ ಸಂಪAಗಿ. ಬಿಪಿ ವೆಂಕಟ ಮುನಿಯಪ್ಪ. ಕೋಲಾರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ವಿ ಮಹೇಶ್. ಶ್ರೀನಿವಾಸಪುರ ಘಟಕದ ಅಧ್ಯಕ್ಷ ಚಂದ್ರಶೇಖರ್. ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಮೈಸೂರು ಸುರೇಶ್. ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮೈ ಶಂಕರ್. ಕಲ್ಲುಪಲ್ಲಿ ಮೋಹನ್. ಶೈಲಜ. ಅನುಸಿಯ. ಎಸ್ ಐ ಆರ್ ಬಿಎಲ್ಎ1 ನಂಗಲಿ ವಿಶ್ವನಾಥ್ ರೆಡ್ಡಿ. ಹೇಮಂತ್ ರೆಡ್ಡಿ. ಮೋಹನ್. ಪ್ರಕಾಶ್ ರೆಡ್ಡಿ. ಕಪಾಲಿ ಶಂಕರ್. ಕಿಶೋರ್ ಮತ್ತಿತರ ರಾಜರಿದ್ದರು.
ಸರ್ಕಾರ ರೈತರ ಕಣ್ಣೀರು ಒರೆಸಲಿ ಕುರುಡುಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ



