ಬೆಂಗಳೂರು: ಆಸ್ತಿ ಲಪಟಾಯಿಸುವ ಸಂಬಂಧ 70 ವರ್ಷದ ಅಜ್ಜಿಯನ್ನು ಅಪಹರಿಸಿ ವಾಹನದಲ್ಲಿ ಸುತ್ತಾಡಿಸಿ ಬಿಟ್ಟು ಹೋಗಿರುವ ಘಟನೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸುಮಾರು 70 ವರ್ಷದ ಅಣ್ಣಮ್ಮ ಅಜ್ಜಿಯನ್ನು ಸಾಕು ಮಗಳಾದ ಸುಮಿತ್ರ ಮತ್ತು ಮುನಿರಾಜು ಎಂಬುವರು ಹಣದಾಸಿಗಾಗಿ ಅಪಹರಿಸಿ ಪೊಲೀಸರ ಅತಿಥಿಯಾಗಿರುತ್ತಾರೆ.
ನಿನ್ನೆ ಮಧ್ಯಾಹ್ನ ಈ ಅಜ್ಜಿಯನ್ನು ಅಪಹರಿಸಿರುವ ಈ ದಂಪತಿಗಳು ಕಣ್ಣಿಗೆ ಬಟ್ಟೆ ಕಟ್ಟಿ ಆರ್ ಎಂ ಸಿ ಯಾರ್ಡ್ ಸುತ್ತಮುತ್ತ ಸುತ್ತಾಡಿಸಿ ಕೊನೆಗೆ ಎಪಿಎಂಸಿ ಬಳಿ ಬಂದು ಕಣ್ಣಿಗೆ ಬಟ್ಟೆ ಬಿಚ್ಚುವ ಸಮಯದಲ್ಲಿ ಅಳಿಯ ಮುನಿರಾಜು ಮುಖಕ್ಕೆ ಧರಿಸಿದ್ದ ಮಾಸ್ಕ್ ಕಳಚಿದರಿಂದ ಮುನಿರಾಜು ಭಯಭೀತರಾಗಿ ಅಜ್ಜಿಯನ್ನು ಬಿಟ್ಟು ಪರಾರಿಯಾಗಿರುತ್ತಾನೆ.
ದಾರಿಹೊಕ್ಕರು ಈ ಅಜ್ಜಿ ಅಳುತ್ತಿರುವುದನ್ನು ಗಮನಿಸಿ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಗೆ ಕರೆತಂದು ದೂರು ದಾಖಲು ಮಾಡಿಸಿರುತ್ತಾರೆ.ಈ ಮಧ್ಯದಲ್ಲಿ ಅಜ್ಜಿ ಮನೆಗೆ ಸುಮಿತ್ರ ಹಾಗೂ ಮುನಿರಾಜುರವರು ಹೋಗಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುತ್ತಾರೆ.
ಈ ಅಜ್ಜಿಗೆ ಐವತ್ತು ಸಾವಿರ ಬಾಡಿಗೆ ಬರುತ್ತಿದೆ ಎಂದು ಏನಾದರೂ ಮಾಡಿ ಲಪಟಾಯಿಸಬೇಕೆಂದು ಮತ್ತು ಆಸ್ತಿಯನ್ನು ಬರೆಸಿಕೊಳ್ಳುವ ಉದ್ದೇಶದಿಂದ ಈ ನಾಟಕ ಮಾಡಿರುತ್ತಾರೆ ಎಂದು ಆರ್ಎಂಸಿ ಯಾರ್ಡ್ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಅವರು ತಿಳಿಸಿರುತ್ತಾರೆ.
ಈ ಸಂಬಂಧ ಆರ್ಎಂಸಿ ಯಾರ್ಡ್ ಪೊಲಿಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿರುತ್ತದೆ.