ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ್ಯಾದ್ಯಂತ ಪ್ರವಾಸ ಕೈಗೊಂಡಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಯುವ ಮುಖಂಡ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ರಘು ಚಂದನ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದು, ಮೊದಲು ಕ್ಷೇತ್ರದ ತುಂಬಾ ಪ್ರವಾಸ ಕೈಗೊಂಡು. ನಮ್ಮ ಪಕ್ಷದ ಕಾರ್ಯ ಕರ್ತರ..ಮುಖಂಡರು ಅಭಿಪ್ರಾಯವನ್ನು ಹಾಗೂ ವಾಸ್ತವತೆಯನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ.
ಯಾರು ಏನೇ ಹೇಳಿದರೂ ಕೊನೆಗೆ ಪಕ್ಷದ ಐಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಹಾಗೂ ನನಗೆ ಪಕ್ಷ ಟಿಕೆಟ್ ಕೊಡುತ್ತದೆ ಎನ್ನುವ ಭರವಸೆ ಇದೆ. ಈ ಬಾರಿ ನಾನು ಅಷ್ಟೇ ಅಲ್ಲ. ನಮ್ಮ ಬಿಜೆಪಿ ಪಕ್ಷದ ಪ್ರತಿಯೊಬ್ಬ ಮುಖಂಡರ ಹಾಗೂ ಕಾರ್ಯಕರ್ತರ ಏಲ್ಲಾರದು ಒಂದೇ ಅಭಿಮತ ಅದು ಮೋದಿ ಯವರು ಪ್ರಧಾನಿ ಆಗಬೇಕು ಎನ್ನುವುದು ದೇಶಕ್ಕಾಗಿ ಅವರು ಮಾಡಿದ ಒಳ್ಳೆಯ ಕಾರ್ಯಗಳೇ ಅವರಿಗೆ ಶ್ರೀ ರಕ್ಷೆ ಎಂದರು.
ಈ ಸಂದರ್ಭದಲ್ಲಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷ ಡಾ. ಪಿ. ಎಂ.ಮಂಜುನಾಥ್, ಪಕ್ಷದ ಮುಖಂಡರು ಆದ ಚಂದ್ರಶೇಕರ್ ಗೌಡ, ನಾಗಸಮುದ್ರ ನಾಗರಾಜ್, ಪ್ರದಾನ ಕಾರ್ಯದರ್ಶಿ ಪ್ರಭಾಕರ್ ರಾಮಾಂಜಿ ಹಾಗೂ ಬಿಜೆಪಿ ಪಕ್ಷದ ಮುಖಂಡರೂ, ಕಾರ್ಯಕರ್ತರು ಉಪಸ್ಥಿತಿ ಇದ್ದರು.