ಮಹದೇವಪುರ: ಮಧುಮೇಹ ರೋಗಿಗಳಿಗೆ ಸೂಕ್ತವಾದ ಆಹಾರ ಆಯ್ಕೆ ಕೊರತೆಯಿರುವ ಹಿನ್ನೆಲೆಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ವಿಶೇಷ ಅಕ್ಕಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ಭಾವನ ರೈಸ್ ಕಂಪನಿಯ ಚೇರ್ಮನ್ ಸುಧೀರ್ ತಿಳಿಸಿದ್ದಾರೆ.
ಕ್ಷೇತ್ರದ ಹಳೆಹಳ್ಳಿ ಗ್ರಾಮದಲ್ಲಿ ನೂತನ ವಾಗಿ ಆರಂಭಗೊAಡಿರುವ ರಾಯಲ್ ಭಾವನ ರೈಸ್ ಕಂಪನಿ ಉದ್ಘಾಟನೆ ಯನ್ನು
ಸಂಸ್ಥೆಯ ಚೇರ್ಮನ್ ಹಾಗೂ ಫೌಂಡರ್ ಸುದೀಪ್ ಉದ್ಘಾಟಿಸಿದರು. ಇಂದಿನ ದಿನಗಳಲ್ಲಿ
ಮಧುಮೇಹಿಗಳಿಗಾಗಿ ಸ್ಪಷ್ಟವಾಗಿ ಸೂಕ್ತವಾದ ಆಹಾರ ಲಭ್ಯವಿಲ್ಲ. ಸಾಮಾನ್ಯವಾಗಿ ಮಿಲ್ಲೆಟ್ಸ್, ಬ್ರೌನ್ ರೈಸ್ ಅಥವಾ ಇತರೆ ದಾನ್ಯಗಳು ಬಳಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ಶುಗರ್ ಪೇಷೆಂಟ್ಸೆ ಅನುಕೂಲವಾಗುವ ವಿಶೇಷ ಅಕ್ಕಿಯ ಅವಶ್ಯಕತೆ ಇದ್ದುದರಿಂದ ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗಿದೆ, ಎಂದು ಅವರು ವಿವರಿಸಿದರು.
ಈ ಅಕ್ಕಿಯ ಅಭಿವೃದ್ಧಿಗೆ ಸರ್ಕಾರಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸುಮಾರು ಏಳು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದು, ಗ್ಲೈಸೆಮಿಕ್ ಇಂಡೆಕ್ಸ್, ಗ್ಲೂಕೋಸ್ ಮಟ್ಟ ಮತ್ತು ಕಾರ್ಬೊಹೈಡ್ರೇಟ್ ಪ್ರಮಾಣ ಕಡಿಮೆ ಇರುವಂತೆ ಕ್ರಾಸ್ಬಿಡ್ ತಂತ್ರಜ್ಞಾನ ಬಳಸಲಾಗಿದೆ ಎಂದು ಹೇಳಿದರು.
ಈ ಅಕ್ಕಿಯ ಗ್ಲೈಸೆಮಿಕ್ ಇಂಡೆಕ್ಸ್ ಕೇವಲ 51.5 ಆಗಿದ್ದು, ಮಧುಮೇಹಿಗಳ ದೈನಂದಿನ ಬಳಕೆಗೆ ಅನುಕೂಲಕರವಾಗಿದೆ, ಎಂದು ಅವರು ತಿಳಿಸಿದರು.
ಟ್ಯೂಟ್ ಆಫ್ ರೈಸ್ ರಿಸರ್ಚ್ ಹಾಗೂ ಅಂತರರಾಷ್ಟ್ರೀಯ ಪೋಷಕಾಂಶ ಜರ್ನಲ್ಗಳ ಮಾರ್ಗದರ್ಶನದಲ್ಲಿ 84 ಮಂದಿ ಮಧುಮೇಹ ರೋಗಿಗಳ ಮೇಲೆ ಪರೀಕ್ಷೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಪರೀಕ್ಷಾ ಫಲಿತಾಂಶಗಳಲ್ಲಿ ಈ ಅಕ್ಕಿ ಇತರೆ ಆಹಾರಗಳಿಗಿಂತ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು, ಶುಗರ್ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ ಎಂಬುದು ದೃಢಪಟ್ಟಿದೆ. ನಿಯಮಿತವಾಗಿ ಬಳಸಿದರೆ ರಕ್ತದಲ್ಲಿನ ಶುಗರ್ ಮಟ್ಟ ನಿಯಂತ್ರಣದಲ್ಲಿ ಇರಲು ಸಹಾಯವಾಗುತ್ತದೆ, ಎಂದು ಅವರು ಹೇಳಿದರು.
ಕರ್ನಾಟಕದ ವಿತರಕರಾದ ಪಿರೋಜ್ ಖಾನ್ ಮಾತನಾಡಿ ಸೋಶಿಯಲ್ ಮೀಡಿಯಾದಲ್ಲಿ ಈ ಅಕ್ಕಿ ಬಗ್ಗೆ ತಿಳಿದುಕೊಂಡ ನಂತರ ಅದರ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ, ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಗೆ ಭೇಟಿ ನೀಡಿ ಖಚಿತಪಡಿಸಿಕೊಂಡು, ತಮ್ಮ ತಾಯಿ ಮಧುಮೇಹ ರೋಗಿಯಾಗಿರುವುದರಿಂದ ಮೊದಲು ಅಮ್ಮ ಅಕ್ಕಿ ಯನ್ನು ನಿರಂತರ ತಿಂದು ಪರಿಶೀಲಿಸಿದಾಗ ಉತ್ತಮ ಫಲಿತಾಂಶ ಕಂಡುಬAದಿದೆ ಎಂದರು.
ನಾಲ್ಕು ತಿಂಗಳ ಅಧ್ಯಯನದ ಬಳಿಕ ಬೆಂಗಳೂರಿನಲ್ಲಿ ಡೀಲರ್ಶಿಪ್ ಪಡೆದು ರಾಯಲ್ ಭಾವನಾ ರೈಸ್ ಕಂಪನಿ ಅಂಗಡಿ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಈ ಅಕ್ಕಿ ನಿಯಮಿತವಾಗಿ ಬಳಸಿದರೆ ಶುಗರ್ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ ಎಂದು ಅವರು ಹೇಳಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಗ್ರಾಹಕರಿಗೆ ಸ್ಯಾಂಪಲ್ ಮೂಲಕ ಪರಿಚಯ ಮಾಡಲಾಗುತ್ತಿದೆ, ಎಂದು ಹೇಳಿದರು.
ಇಂದಿನ ಜೀವನಶೈಲಿಯಲ್ಲಿ ಶಾರೀರಿಕ ಶ್ರಮ ಕಡಿಮೆಯಾಗಿರುವುದರಿಂದ ಮಧುಮೇಹ
ಹೆಚ್ಚುತ್ತಿದೆ. ಪ್ರತಿದಿನ ಕನಿಷ್ಠ 20 ನಿಮಿಷ ನಡೆ, ಆರೋಗ್ಯಕರ ಆಹಾರ ಹಾಗೂ ಕಡಿಮೆ ಗ್ಲೈಸೆಮಿಕ್ ಆಹಾರ ಪದ್ಧತಿ ಅನುಸರಿಸುವುದು ಮುಖ್ಯ. ಮಧುಮೇಹ ರೋಗಿಗಳು ಇಂತಹ ಆಹಾರಗಳನ್ನು ಬಳಸಿಕೊಳ್ಳಬೇಕು, ಎಂದು ಮನವಿ ಮಾಡಿದರು.
ಮಧುಮೇಹ ರೋಗಿಗಳಿಗೆ ಸೂಕ್ತವಾದ ಆಹಾರ ಆಯ್ಕೆ ಕೊರತೆಯಿರುವ ಹಿನ್ನೆಲೆಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ವಿಶೇಷ ಅಕ್ಕಿ ಮಾರುಕಟ್ಟೆಗೆ ಪರಿಚಯ



