ಯುವಬಲ ಜಾಗೃತಿ ಪರಿಷತ್ತಿನ ಅಧ್ಯಕ್ಷರು, ಸಮಾಜ ಸೇವಕರಾದ ಕುಮಾರಿ ಪ್ರಾಚಿಗೌಡರು ತಮ್ಮ ಯುವಬಲ ಜಾಗೃತಿ ಪರಿಷತ್ತಿನ ವತಿಯಿಂದ ಕರ್ನಾಟಕದ ಹಲವಾರು ಶಾಲೆ-ಕಾಲೇಜುಗಳಲ್ಲಿ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಇಂತಹ ದುಶ್ಚಟಗಳಿಂದ ದೂರ ಉಳಿಯುವ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದರು.
ಇವರ ಹಲವಾರು ಸಮಾಜ ಸೇವಾ ಹಾಗೂ ನಾಯಕತ್ವ ಗುಣಗಳು ಯುವ ಜನಕ್ಕೆ ಸ್ಪೂರ್ತಿಯ ಸಲೆಯಾಗಿದ್ದು, ಇಂತಹ ಔದಾರ್ಯ ಗುಣಗಳನ್ನು ಗಮನಿಸಿದ ಇಂಡೋನೇಷ್ಯಾ ಸರ್ಕಾರದ ಪ್ರಥಮ ಪ್ರಜೆ ರಾಜವಂಶಸ್ಥ ರಾಜ್ಯಪಾಲದ ರಾಯಲ್ ಹೈನೆಸ್ ಡಾ ಗುಸ್ತಿ ನ್ಯುರಾ ಆರ್ಯ ವೇದಕರ್ಣ ಮಹೇಂದ್ರದತ್ತ ವೇದಸ್ತೇರಪುತ್ರ ಇವರು ತಮ್ಮ ರಾಜ್ಯಪಾಲರ ಕಛೇರಿಗೆ ಪ್ರಾಚಿಗೌಡರನ್ನು ಕರೆಸಿ.
ಅಂತರಾಷ್ಟ್ರೀಯ ನಾಯಕತ್ವ ಪ್ರಶಸ್ತಿ ಫಲಕ ಹಾಗೂ ಲಕ್ಷ್ಮೀ ಲೇಪನದ ಚಿನ್ನದ ನಾಣ್ಯವನ್ನು ನೀಡುವ ಮೂಲಕ ಯುವ ಪ್ರತಿಭೆಗೆ ಗೌರವಿಸಿ ನಿಮ್ಮ ಸಮಾಜ ಸೇವಾ ಕಾರ್ಯಗಳು ಹೀಗೆಯೇ ಮುಂದುವರಿಯಲಿ ಎಂದು ಪ್ರಶಂಸೆ ಮಾಡಿದರು.ತಮ್ಮ ಜೀವನವನ್ನೇ ಸಮಾಜ ಸೇವೆಗಾಗಿ ಮೀಸಲು ಇಟ್ಟ ಕುಮಾರಿ ಪ್ರಾಚಿ ಗೌಡರಿಗೆ ಯುವ ಬಲ ಜಾಗೃತಿ ಪರಿಷತ್ತಿನ ಸದಸ್ಯರು ಹಾಗೂ ಅಪಾರ ಅಭಿಮಾನಿ ವರ್ಗದವರು ಶುಭ ಹಾರೈಸಿದ್ದಾರೆ.