ಬೇಲೂರು: ವೈಕುಂಠ ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಶಾಸಕ ಹೆಚ್. ಕೆ. ಸುರೇಶ್ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರು ಕಾಮಗಾರಿಯ ಬಗ್ಗೆ ಅಪಸ್ವರದ ಎತ್ತಿದ ಸಂದರ್ಭದಲ್ಲಿ ಶಾಸಕ ಸುರೇಶ್ ಗುತ್ತಿಗೆದಾರರ ವಿರುದ್ಧ ಇವರ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ಶಿಲ್ಪಕಲೆಗಳ ತವರು ಬೇಲೂರು ಪಟ್ಟಣದ ಚನ್ನಕೇಶವಸ್ವಾಮಿ ಉತ್ಸವ ಬೀದಿ ಮತ್ತು ದಾಸಶ್ರೇಷ್ಟ ವೈಕುಂಠ ದಾಸರು ಜನ್ಮತಾಳಿದ ವೈಕುಂಠ ಬೀದಿಗೆ ಇತ್ತೀಚಿನ ದಿನದಂದು ಶಾಸಕ ಹೆಚ್.ಕೆ.ಸುರೇಶ್ ಪರಿಶ್ರಮದಿಂದ ರಸ್ತೆ ಕಾಮಗಾರಿ ನಡೆಸಲು ಚಾಲನೆ ನೀಡಲಾಗಿದ್ದು ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ.ಕಾಮಗಾರಿ ಗುಣಮಟ್ಟವನ್ನು ಶಾಸಕ ಹೆಚ್.ಕೆ.ಸುರೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ರವಿ ಮತ್ತು ಯತೀಶ್ ಸೇರಿದಂತೆ ಇನ್ನೂ ಮುಂತಾದವರು ಗುತ್ತಿಗೆದಾರರ ಮತ್ತು ಇಂಜಿನಿಯರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವೈಕುಂಠ ಬೀದಿಯ ರವಿ ಹಾಗೂ ಯತೀಶ ಮಾತನಾಡಿ ಶಾಸಕರು ತಮ್ಮ ಪರಿಶ್ರಮದಿಂದ ವೈಕುಂಠ ಬೀದಿಗೆ ಕಾಮಗಾರಿ ನಡೆಸಲು ಅನುದಾನವನ್ನು ತಂದಿದ್ದಾರೆ ಆದರೆ ಇಲ್ಲಿನ ಗುತ್ತಿಗೆದಾರ ಮತ್ತು ಇಂಜಿನಿಯರ್ ಅವರು ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಿಲ್ಲ ಯಾರದೊ ಮಾತನ್ನು ಕೇಳಿಕೊಂಡು ಇರುವ ರಸ್ತೆಯನ್ನು ತಳಕ್ಕೆ ಇಳಿಸಿದ್ದಾರೆ ಇದರಿಂದ ವಾಹನಗಳು ಚಲಿಸಲು ಮತ್ತು ಜನರು ತಿರುಗಾಡಲು ಇವರ ತೊಂದರೆಯಾಗುತ್ತದೆ ಈ ಬಗ್ಗೆ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಪ್ರಶ್ನೆ ಮಾಡಿದರೆ ಉಡಾಪೆಯಿಂದ ವರ್ತಿಸುತ್ತಾರೆ. ನಮ್ಮ ಮನೆಯ ಮುಂದೆ ವಾಹನ ನಿಲುಗಡೆಯನ್ನು ಎಲ್ಲಿ ನಿಲ್ಲಿಸುವುದು ಈ ರೀತಿ ಅವೈಜ್ಞಾನಿಕ ಕಾಮಗಾರಿಯನ್ನು ಮಾಡಿದ್ದಾರೆ ತಕ್ಷಣವೇ ಇದನ್ನು ಸರಿಪಡಿಸಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಎಚ್ ಕೆ ಸುರೇಶ್ ಬೇಲೂರು ವಿಶ್ವ ವಿಖ್ಯಾತಿಯಾದಂತಹ ಪಟ್ಟಣ ಸುಮಾರು 900 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ವಿಶೇಷವಾಗಿ ಇಲ್ಲಿನ ಚನ್ನಕೇಶವ ಸ್ವಾಮಿ ಹಾಗೂ ವೈಕುಂಠ ಬೀದಿಯ ನಾಲ್ಕು ಮೂಲೆ ಸೇರಿ ಒಟ್ಟು ಎಂಟು ಬೀದಿಯಲ್ಲಿ ಉತ್ಸವ ನಡೆಸಲು ವೈಕುಂಠ ಬೀದಿ ತನ್ನದೆಯಾದ ಪ್ರಾಮುಖ್ಯತೆಯನ್ನು ಹೊಂದಿದೆ ಅಲ್ಲದೆ ವೈಕುಂಠ ದಾಸರು ಜನ್ಮ ತಾಳಿ ಕನ್ನಡ ಸಾಹಿತ್ಯಕ್ಕೆ ಅಪರೂಪವಾದಂತಹ ಕೀರ್ತನೆಗಳನ್ನು ನೀಡಿದಂತಹ ಬೀದಿಗೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸರ್ಕಾರದಿಂದ ಅನುದಾನವನ್ನು ತಂದಿರುವೆ ಆದರೆ ಇಂಜಿನಿಯರ್ ಮತ್ತು ಗುತ್ತಿಗೆದಾರರಿಂದ ಕೆಲವೆಡೆ ಕಾಮಗಾರಿ ವ್ಯತ್ಯಾಸವಾಗಿದೆ ಈ ಬಗ್ಗೆ ನಾನು ಗುತ್ತಿಗೆದಾರರು ಹಾಗೂ ಇಂಜಿನಿಯರಿಗೆ ತರಾಟೆ ತೆಗೆದುಕೊಂಡಿದ್ದು ಕೂಡಲೇ ಕಾಮಗಾರಿಯ ಗುಣಮಟ್ಟದ ಜೊತೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ನಡೆಸಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಬಸವರಾಜು ಶಿವ್ಗಾವಿ, ಇಂಜಿನಿಯರ್ ಮೋಹನ್, ಮುಖಂಡರಾದ ಹೆಚ್.ಎಂ.ದಯಾನAದ, ಸಿ.ಎಸ್.ಪ್ರಕಾಶ, ನಾಗೇಶ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
ಬೇಲೂರು ನಗರದ ವೈಕುಂಠ ಬೀದಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ಹೆಚ್.ಕೆ.ಸುರೇಶ್



