ಬೆಂಗಳೂರು: ಆಡಳಿತ ಪ್ರತಿಪಕ್ಷಗಳ ವಾಕ್ ಸಮರದ ನಡುವೆ ಇಂದಿನಿಂದ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ಆರಂಭಗೊಂಡಿದೆ. ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಸಮಗ್ರವಾಗಿ ಚರ್ಚಿಸಲು ಅಧಿವೇಶನ ಕರೆಯಲಾಗಿದೆ. ಮೂರು ದಿನಗಳ ಕಾಲ ಈ ಅಧಿವೇಶನ ನಡೆಸಲು ಸಮಯ ನಿಗಧಿಯಾಗಿದೆ. ಇಂದು ಬೆಳಿಗ್ಗೆ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದAತೆ ವಂದೇ ಮಾತರಂ ಗೀತೆ ಹಾಡುವ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆಕ್ಷೇಪ ಮತ್ತು ಪ್ರತ್ಯಾಕ್ಷೇಪ ನಡೆಯಿತು.
ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿಸಲು ಪ್ರತಿಪಕ್ಷ ಬಿಜೆಪಿಯವರು ಪಟ್ಟು ಹಿಡಿದರೆ ಕಾಂಗ್ರೆಸ್ ಪಕ್ಷದ ಸದಸ್ಯರು ಸರ್ಕಾರ ಹೊರಡಿಸಿರುವ ಆದೇಶದಂತೆ ಎರಡು ಚರಣ ಮಾತ್ರ ಆಡಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ದೇಶ ವಿರೋಧಿಗಳು ಎಂದು ಬಿಜೆಪಿಯವರು ಮೂದಲಿಸಿದಾಗ ಕಾಂಗ್ರೆಸ್‌ನವರು ಅದಕ್ಕೆ ಪ್ರತಿಯಾಗಿ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು.
ನಂತರ ಎರಡು ಚರಣಗಳ ವಂದೇ ಮಾತರಂ ಗೀತೆಯೊಂದಿಗೆ ಸದನ ಕಲಾಪ ಆರಂಭಗೊಂಡಿತು. ಒಂದು ಹಂತದಲ್ಲಿ ಮುಖ್ಯಮಂತ್ರಿಯವರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿದರು. ನಂತರ ಸಂವಿಧಾನ ಪ್ರತಿ ಪ್ರಶ್ನಾವಳಿಯೊಂದಿಗೆ ಕಲಾಪ ಆರಂಭಗೊಂಡಿತು. ಆರಂಭದಲ್ಲಿ ಸಂತಾಪ ಸೂಚನೆಯೊಂದಿಗೆ ನಂತರ ಬರ ಹಾಗೂ ಕಸ್ತೂರಿ ರಂಗನ್ ವರದಿ ಚರ್ಚೆ ಸಂಬಂಧ ವಿಷಯಗಳು ಪ್ರಸ್ತಾಪವಾಗಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ.ಪರಮೇಶ್ವರ್ ಅವರು ಕಸ್ತೂರಿ ರಂಗನ್ ವರದಿಯ ವಿಷಯವನ್ನು ಪ್ರಸ್ತಾಪಿಸಿ ವರದಿಯ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿ ವಿಷಯವನ್ನು ವಿವರಿಸಿದರು.
ಎದ್ದು ನಿಂತು ಗದ್ದಲ ಆರಂಭಿಸಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಕಸ್ತೂರಿ ರಂಗನ್ ವರದಿಗೆ ಪರವಾಗಿದ್ದಾರೆಯೋ ಅಥವಾ ವಿರೋಧವಾಗಿದ್ದಾರೆಯೋ ಎಂಬ ಗೊಂದಲ ಉಂಟಾಯಿತು. ಗದ್ದಲದ ನಡುವೆ ವಸತಿ, ಭೂ ಸೌಕರ್ಯ, ಅಭಿವೃದ್ಧಿ, ಪರಿಸರ ಸಮತೋಲನ, ಎಲ್ಲವನ್ನು ಒಟ್ಟಾರೆಯಾಗಿ ತೆಗೆದುಕೊಂಡು ಹೋಗಬೇಕಾಗಿದೆ ಹಾಗಾಗಿ ಡಾ. ಕೆ ಕಸ್ತೂರಿ ರಂಗನ್ ಅವರ ವರದಿಯನ್ನು ಸರ್ಕಾರ ಈಗಾಗಲೇ ಅನೇಕ ಬಾರಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಯಾವುದೇ ಚರ್ಚೆಗೆ ಆಸ್ಪದ ನೀಡದ ವಿರೋಧ ಪಕ್ಷ ಸದಸ್ಯರು ಸದನದ ಬಾವಿ ಒಳಗೆ ಇಳಿದು ಕೂಗಾಟ ಚೀರಾಟ ಆರಂಬಿಸಿದರು. ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸಿದ ಕಾಂಗ್ರೆಸ್ ನಡೆಯನ್ನು ವಿರೋಧಿಸಿದರು. ಇದು ಇಂಡಿಯಾ ಕಾಂಗ್ರೆಸ್ಸೋ, ಇಟಲಿ ಕಾಂಗ್ರೆಸ್ಸೋ ಎಂದು ಕೂಗಿದರು.
ಮಾನ್ಯ ಸಭಾಪತಿಗಳನ್ನು ಪ್ರಶ್ನಿಸುತ್ತ, ತಾವು ಪೀಠದಲ್ಲಿ ಕುಳಿತ ದಿನದಿಂದಲೂ ಇದೇ ರೀತಿ ಮುಂದುವರೆಯುತ್ತಿದೆ. ಸದುದ್ದೇಶಕ್ಕಾಗಿ ಕರೆದಿರುವ ವಿಶೇಷ ಅಧಿವೇಶನದಲ್ಲಿ ನಾವು ಸದಾ ಕಾಲ ಚರ್ಚೆಗೆ ಸಿದ್ದ, ಆದರೆ ರಾಷ್ಟçಗೀತೆಗೆ ವಂದೇ ಮಾತರಂ ಗೀತೆಗೆ ಅವಮಾನ ಮಾಡಿರುವ ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ವಿರೋಧಿಸುತ್ತಾ ಕಲಾಪಕ್ಕೆ ಅಡ್ಡಿಪಡಿಸಿದರು.
ಮಾನ್ಯ ಸಭಾಪತಿಗಳು 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.
ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ವಿಪಕ್ಷದವರು ಘೋಷಣೆ ಕೂಗುತ್ತಲೇ ಇದ್ದರು. ಇತ್ತ ವಿಧಾನಸಭೆ ಕಲಾಪದಲ್ಲೂ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದರು.