LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News | Entertainment News

ಒರಟ ಶ್ರೀ ನಿರ್ದೇಶನದ ಶಬರಿ ಚಿತ್ರದ ಟ್ರೈಲರ್ ಲರ್ ಲಾಂಚ್


ನಿರ್ದೇಶಕ ರವಿ ಶ್ರೀವತ್ಸ , ನಟ ಒರಟ ಪ್ರಶಾಂತ್,  ಕೋಟೆ ಪ್ರಭಾಕರ್ ಚಿತ್ರದ ಟ್ರೆöÊಲರ್ ಬಿಡುಗಡೆಗೆ ಸಾಥ್
ಸ್ಯಾಂಡಲ್ ವುಡ್ ನಲ್ಲಿ  ಮನಮಿಡಿಯುವಂತಹ ಸಾಂಸಾರಿಕ, ಕೌಟುಂಬಿಕ ಚಿತ್ರಗಳು ಪ್ರೇಕ್ಷಕರ ಗಮನವನ್ನು  ಸೆಳೆದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆ ನಿಟ್ಟಿನಲ್ಲಿ  ಮತ್ತೊಂದು ಫ್ಯಾಮಿಲಿ ಎಂರ್ಟಟೈನರ್ ಚಿತ್ರ ಬರಲು ಸಜ್ಜಾಗಿದೆ. ಈ ಹಿಂದೆ `ಒರಟ’ , `ಕೋರ’ ದಂಥಾ  ಸಿನಿಮಾಗಳನ್ನ ಪ್ರೇಕ್ಷಕರಿಗೆ ನೀಡುವ  ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಒರಟ ಶ್ರೀ ಈಗ ಬಹು ನಿರೀಕ್ಷಿತ `ಶಬರಿ’ ಚಿತ್ರವನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಈ ಚಿತ್ರದ ಟ್ರೆöÊಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ರವಿ ಶ್ರೀವತ್ಸ , ನಟ ಒರಟ ಪ್ರಶಾಂತ್ , ಉದ್ಯಮಿ ಪ್ರಶಾಂತ್ ಚಕ್ರವರ್ತಿ, ನಟರಾದ ಪ್ರವೀಣ್ , ಕೋಟೆ ಪ್ರಭಾಕರ್ ಹಾಗೂ ನಟಿ ಭೂಮಿಕಾ ಹಾಜರಿದ್ದು ಚಿತ್ರದ ನಿರ್ದೇಶಕ ಒರಟ ಶ್ರೀ ಹಾಗೂ ಚಿತ್ರ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿ ತಂಡಕ್ಕೆ ಶುಭವನ್ನು ಹಾರೈಸಿದರು. ಭಾರವಿ ಫಿಲಂಸ್ ಬ್ಯಾನರಿನಡಿಯಲ್ಲಿ ರಮೇಶ್.ಬಿ,  ಬದ್ರಿ ಮತ್ತು ವಿಷ್ಣುಕಾಂತ್. ಎ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಕುಟುಂಬ ಸಮೇತ ಕುಳಿತು ನೋಡಬಹುದಾದಂತಹ ಸಂಸಾರಿಕ ಚಿತ್ರವಾಗಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ಹರಸಿ ಎಂದು ಈ ಚಿತ್ರದ ಮೂವರು ನಿರ್ಮಾಪಕರು  ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡಿರು.  
ಈ ಚಿತ್ರದ ನಿರ್ದೇಶಕ  ಒರಟ ಶ್ರೀ ಮಾತನಾಡುತ್ತಾ ನಮ್ಮ ಚಿತ್ರದ ‘ ತಂದಾನಿ ತಾನೋ..’ ಹಾಡು ಲಹರಿ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಗೊಂಡು  ಎಲ್ಲೆಡೆ ಬಾರಿ ವೈರಲ್ ಆಗಿದ್ದು , ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಂದು ನಮ್ಮ ಚಿತ್ರದ ಟ್ರೆöÊಲರ್  ಬಿಡುಗಡೆಯನ್ನ ನಮ್ಮ ಗುರುಗಳು , ಸ್ನೇಹಿತರು ಬಂದು ಬಿಡುಗಡೆಗೊಳಿಸಿದ್ದು ಬಹಳ ಖುಷಿ ತಂದಿದೆ. ನಮ್ಮ ಚಿತ್ರದಲ್ಲಿ ತಂದೆ ಮಗಳ ಬಾಂಧವ್ಯ ಜೊತೆಗೆ ಜೀಪ್ ಕೂಡ ಒಂದು ಪ್ರಮುಖ ಪಾತ್ರವಾಗಿ ಕಾಣಿಸುತ್ತದೆ. ಅಂದುಕೊಂಡಂತಹ ಸಮಯದಲ್ಲೇ ಬಜೆಟ್ ಪ್ಲಾನ್ ಮಾಡಿಕೊಂಡು ಚಿತ್ರವನ್ನು ಮುಗಿಸಿದ್ದೇನೆ.ಸಸ್ಪೆನ್ಸ್ , ಥ್ರಿಲ್ಲರ್, ಮಿಸ್ಟ್ರಿ ಸೇರಿದಂತೆ ಅನೇಕ ಅಂಶಗಳಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್  ಆಗಿದೆ. ನಮ್ಮ ಚಿತ್ರದ ನಾಯಕ  ನಟ ಸಮರ್ಥ್ ಬಹಳಷ್ಟು ಶ್ರಮ ಹಾಕಿದ್ದಾರೆ. ಅದೇ ರೀತಿ ನಟಿ ಕೃತಿಕಾ ಗೌಡ ಉತ್ತಮವಾಗಿ ಅಭಿನಯಿಸಿದ್ದು , ಪ್ರಮುಖವಾಗಿ ರಾಣಿ ಧಾರವಾಹಿಯ  ಖ್ಯಾತಿ ಬಾಲ ನಟಿ ಧನ್ವಿ ಸೊಗಸಾಗಿ ಅಭಿನಯಿಸಿದ್ದಾಳೆ. ತಾಂತ್ರಿಕವಾಗಿ ನಮ್ಮ ತಂಡದಲ್ಲಿ ಬಹಳಷ್ಟು ಯುವ ಪ್ರತಿಭೆಗಳ ಸಾತ್ ನನಗೆ ಸಿಕ್ಕಿದೆ. ನಮ್ಮ ಚಿತ್ರ ರಾಜ್ಯಾದ್ಯಂತ ಇದೆ ಅಕ್ಟೋಬರ್ 23 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.
ನಾಯಕ ನಟ ಸಮರ್ಥ್ ಮಾತನಾಡುತ್ತಾ ನನ್ನ ಮೊದಲ ಚಿತ್ರದಲ್ಲಿ ಒಂದು ಉತ್ತಮ ಪಾತ್ರವನ್ನು ನಿರ್ವಹಿಸಿದ್ದೇನೆ. ಇದು ನನಗೆ ಸದಾ ನೆನಪಿನಲ್ಲಿ ಉಳಿಯುವಂತಹ ಚಿತ್ರವಾಗಲಿದೆ. ನಿರ್ದೇಶಕರು ಹೇಳಿಕೊಟ್ಟಂತೆ ನಾನು ಅಭಿನಯಿಸಿದ್ದೇನೆ. ಇನ್ನು ಸಹಕಲಾವಿದರು ಕೂಡ ನನಗೆ ಉತ್ತಮ ಸಪೋರ್ಟ್ ನೀಡಿದ್ದಾರೆ. ನಮ್ಮ ತಂದೆ ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಒಂದು  ಉತ್ತಮ ಚಿತ್ರ ಪ್ರೇಕ್ಷಕರಿಗೆ ನೀಡಲು ಮುಂದಾಗಿದ್ದೇವೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದರು.
ಇನ್ನು ನಾಯಕಿ ಕೃತಿಕಾ ಗೌಡ  ಮಾತನಾಡುತ್ತಾ ನನ್ನ ಕಿರಾತಕ ಎಂಬ ಶಾರ್ಟ್ ಫಿಲಂ ನೋಡಿ ನಿರ್ದೇಶಕ ಶ್ರೀರವರು ಚಿತ್ರಕ್ಕಾಗಿ ನನ್ನನ್ನು ಆಯ್ಕೆ ಮಾಡಿಕೊಂಡರು. ನನ್ನ ಪಾತ್ರ ಕೂಡ ಅಷ್ಟೇ ವಿಭಿನ್ನವಾಗಿದೆ. ನೀವೆಲ್ಲ ತೆರೆಯ ಮೇಲೆ ನೋಡಿ ಆನಂದಿಸಿ ಎಂದರು.
ಅದೇ ರೀತಿ ಮುದ್ದು ಪುಟಾಣಿ ಧನ್ವಿ ಮಾತನಾಡುತ್ತಾ ನನ್ನ ಪಾತ್ರ ಕೂಡ ನಿಮಗೆಲ್ಲಾ ಇಷ್ಟ ಆಗುತ್ತೆ. ಶೂಟಿಂಗ್ ಸಮಯದಲ್ಲಿ ಎಲ್ಲರೂ ಚೆನ್ನಾಗಿ ನೋಡಿಕೊಂಡರು ನಮ್ಮ ಚಿತ್ರ ನೋಡಿ ಎಂದು ಕೇಳಿಕೊಂಡಿರು. ಈ ಚಿತ್ರದ ದೊಡ್ಡ ತಾರಾ ಬಳಗದಲ್ಲಿ ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಕುತೂಹಲ ಮೂಡಿಸುವ ಈ ಚಿತ್ರದ ನಿಜವಾದ ಶಬರಿ ಯಾರೆಂದು ತೆರೆಯ ಮೇಲೆ ನೋಡಬೇಕು ಎಂದಿದೆ ಚಿತ್ರತಂಡ. ಇದೊಂದು ಪಕ್ಕ ಫ್ಯಾಮಿಲಿ ಎಂಟರ್ಟೆÊನ್ಮೆAಟ್ ಚಿತ್ರವಾಗಿದ್ದು , ಬಿಡುಗಡೆಗೆ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST