LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Politics News

ಕಲಾಪಕ್ಕೆ ಸಚಿವರ, ಶಾಸಕರ ಕೊರತೆ

-ಡಾ. ಜಿ.ವೈ. ಪದ್ಮ ನಾಗರಾಜು



ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಆರಂಭದಲ್ಲಿ ಸಚಿವ, ಶಾಸಕರ ಕೊರತೆ ಕಂಡು ಬಂದು ವಿಪಕ್ಷಗಳ ಟೀಕೆಗೆ ಗುರಿಯಾಯಿತು. 
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಕಡೆ ಬೊಟ್ಟು ಮಾಡಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ನೀವು ದಾದಾ ಫಾಲ್ಕೆ ಪ್ರಶಸ್ತಿ ಪಡೆದ ರಾಜ್ಯದ ಹೆಮ್ಮೆಯ ನಟ ಅನಂತ್‌ನಾಗ್ ಅವರಿಗೆ ಅಭಿನಂದನಾ ನಿರ್ಣಯ ಮಂಡಿಸುತ್ತಿದ್ದೀರಿ. ಆದರೆ ಸದನದಲ್ಲಿ ಸಚಿವರ ಕೊರತೆ ಎದ್ದುಕಾಣುತ್ತಿದೆ. ಇದು ಸರಿಯೇ ಎಂದು ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದರು. 
ಸದಸ್ಯರನ್ನು ಕರೆ ತರಲು ಸರ್ಕಾರಿ ಮುಖ್ಯ ಸಚೇತಕರಿಗೆ ಕೆಲಸ ಕೊಡಿ. ಖಾಲಿ ಸದನದಲ್ಲಿ ಅಭಿನಂದನಾ ನಿರ್ಣಯ ಸಲ್ಲಿಸುವುದು ಹೇಗೆ ಎಂದು ಪ್ರಶ್ನಿಸಿದಾಗ ಸಭಾಧ್ಯಕ್ಷರು ಕಲಾಪವನ್ನು ಕೆಲ ಕಾಲ ಮುಂದೂಡಿದರು.  ಒಂದು ಹಂತದಲ್ಲಿ ಪೇಮೆಂಟ್ ಮಂತ್ರಿಗಳೆಲ್ಲಾ ಹೊರಗಡೆ ಇದ್ದಾರೆಂದು ಆರ್. ಅಶೋಕ್ ಆಡಿದ ಮಾತಿಗೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ಅಶೋಕ್ ಅವರು ಆಡಿದ ಮಾತುಗಳನ್ನು ಕಡತದಿಂದ ತೆಗೆದುಹಾಕುವಂತೆ ಒತ್ತಾಯಿಸಿದರು. ಪುನಃ ಕಲಾಪ ಆರಂಭವಾದಾಗ ಸಭಾಧ್ಯಕ್ಷರು ಅನಂತ್‌ನಾಗ್ ಅವರಿಗೆ ಅಭಿನಂದನಾ ನಿರ್ಣಯವನ್ನು ಮಂಡಿಸಿ ಅನಂತ್‌ನಾಗ್ ಅವರು ಶ್ಯಾಮ್‌ಬೆನಗಲ್‌ನವರ ನಿರ್ದೇಶನದಲ್ಲಿ ಪಾತ್ರ ಮಾಡಿದ್ದಾರೆ. ಅವರು ನಟಿಸಿದ್ದ ಹಾಸ್ಯ ಪಾತ್ರಗಳು ಗಮನಾರ್ಹ ಎಂದು ಅನಂತ್‌ನಾಗ್ ಅವರ ಗುಣಗಾನ ಮಾಡಿದರು. 
ಕಲಾಪ ವಿಸ್ತಾರಕ್ಕೆ ಮನವಿ
ಬೆಂಗಳೂರು: ವಿಧಾನಸಭೆಯ ಕಲಾಪವನ್ನು ವಿಸ್ತರಿಸಲು ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ. 
ವಿಧಾನಸಭೆಯಲ್ಲಿಂದು ವಿಷಯ ಪ್ರಸ್ತಾಪಿಸಿದ ಅವರು, ಇದೀಗ ನಡೆಯುತ್ತಿರುವ ವಿಶೇಷ ಅಧಿವೇಶನದ ಕಲಾಪವನ್ನು ಶುಕ್ರವಾರದವರೆಗೂ ವಿಸ್ತರಿಸುವುದು ಒಳ್ಳೆಯದು. ಈ ಬಗ್ಗೆ ಸಭಾಧ್ಯಕ್ಷರು ತೀರ್ಮಾನಿಸಬೇಕು ಎಂದಿದ್ದಾರೆ. 
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಕಾನುನು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು, ನಾಳೆಯ ವರೆಗೂ ಕಲಾಪ ನಡೆಸಲು ನಾವು ಸಿದ್ಧರಿದ್ದೇವೆ. ಈ ಬಗ್ಗೆ ಸಭಾಧ್ಯಕ್ಷರು ತೀರ್ಮಾನ ಕೈಗೊಳ್ಳಬೇಕು ಎಂದಿದ್ದಾರೆ. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST