LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಜಿಟಿಜಿಟಿ ಹನಿಯುವ ಮಳೆಯನ್ನು ಲೆಕ್ಕಿಸದೆ ಜಿಲ್ಲಾಡಳಿತ ಭವನದ ಮುಂದೆ ಗ್ರಾ.ಪಂ. ಸದಸ್ಯ ಸೋಮಶೇಖರ್ ಅಹೋರಾತ್ರಿ ಧರಣಿ

ದೇವನಹಳ್ಳಿ : ತಾಲೂಕಿನ ಕನ್ನಮಂಗಲ ಗ್ರಾ.ಪಂ. ವ್ಯಾಪ್ತಿಯ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಮತ್ತು ನಿವೇಶನದ ಜಾಗ ದಿನಕ್ಕೊಂದು ಹೊಸರೂಪಗೊಂಡು ಆರೋಪ ಪ್ರತ್ಯಾರೋಪ ಮುಗಿಲು ಮುಟ್ಟಿದ್ದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಟಿ. ಶ್ರೀನಿವಾಸ್‍ರನ್ನು ಕೂಡಲೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತ ಭವನದ ಮುಂಭಾಗ ಜಡಿ ಮಳೆಯ ನಡುವೆಯೂ ಕನ್ನಮಂಗಲ ಗ್ರಾ.ಪಂ. ಸದಸ್ಯ ಕೆ. ಸೋಮಶೇಖರ್ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದರು.

ಗ್ರಾ.ಪಂ. ಅಧಿಕಾರಿ ಟಿ.ಶ್ರೀನಿವಾಸ್ ಯಾರದೋ ಜಾಗವನ್ನು ಯಾರಿಗೋ ನಕಲಿ ದಾಖಲೆ ಸೃಷ್ಠಿಸಿ ಇ-ಖಾತಾ ಮಾಡಿಕೊಟ್ಟಿದ್ದಾರೆ, ಕೂಡಲೆ ಟಿ. ಶ್ರೀನಿವಾಸ್‍ರನ್ನು ಅಮಾನತು ಮಾಡಿ ಸತ್ಯಾ-ಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಜಿಲ್ಲಾಡಳಿತ ಭವನದ ಮುಂದೆ ತಮ್ಮ ಬೆಂಬಲಿಗರ ಜೊತೆ ಅಹೋರಾತ್ರಿ ಧರಣಿ ಮಾಡುತ್ತಿದ್ದು ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದರು.

ಮನವಿ ನೀಡಲೆಂದು ಬಂದಿದ್ದ ಸೋಮಶೇಖರ್ ಹಾಗೂ ಬೆಂಬಲಿಗರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸ್ಥಳದಲ್ಲಿರಲಿಲ್ಲ, ಅಲ್ಲಿನ ಕಛೇರಿ ಅಧಿಕಾರಿಗಳಿಗೆ ನಡೆದಿರುವ ಎಲ್ಲಾ ವಿದ್ಯಮಾನಗಳನ್ನು ಕನ್ನಮಂಗಲ ಗ್ರಾ.ಪಂ. ವ್ಯಾಪ್ತಿಯ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಮತ್ತು ನಿವೇಶನದ ಜಾಗದ ದಾಖಲೆಗಳನ್ನು ತೋರಿಸಿ ವಿವಿರಣೆ ನೀಡಿದರು, ಅಧಿಕಾರಿಗಳು ಸಹ ಧರಣಿ ಕೈಬಿಡಿ ಜಿಲ್ಲಾಧಿಕಾರಿಗಳು ಹಾಗೂ ಸಿ.ಇ.ಓ ಬಂದ ನಂತರ ನಾವು ತಿಳಿಸುತ್ತೇವೆ ಎಂದರು, ಆದರೆ ಸೋಮಶೇಖರ್ ಯಾವುದೇ ಕಾರಣಕ್ಕೂ ಧರಣಿ ಕೈಬಿಡುವುದಿಲ್ಲ ದಾಖಲೆ ಪರಿಶೀಲನೆ ನಡೆಸಿ ಚಂದ್ರೇಗೌಡರಿಗೆ ನ್ಯಾಯ ಒದಗಿಸಿ ಎಂದರು.

ಗ್ರಾ.ಪಂ. ಸದಸ್ಯ ಸೋಮಶೇಖರ್ ಮಾತನಾಡಿ 2021ರ ಆಗಸ್ಟ್ 21ರಂದು ಹಿಂದಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಜರ್ ಮಾಡಿ, ತಾ.ಪಂ. ಇ.ಓಗಳಿಗೆ ವರದಿ ಸಲ್ಲಿಸಿರುತ್ತಾರೆ, ವರದಿಯಲ್ಲಿ ವಿಸ್ತೀರ್ಣ 7 ಜನರಿಗೆ ಸೇರಿರುತ್ತದೆ ಖಾತೆದಾರರಿಗೆ ಒಟ್ಟು 803.41 ಚದರ ಮೀಟರ್ ಒಳಗೊಂಡಿರುತ್ತದೆ ಎಂದು ತಿಳಿಸಿದ್ದರು.

ಈಗ ಬಂದಿರುವ ಪಿ.ಡಿ.ಓ ಟಿ.ಶ್ರೀನಿವಾಸ್ ಈ ಖಾತೆಗೆ ಸಂಬಂದಿಸಿದಂತೆ ತಾ.ಪಂ ಇ.ಓ ಲಾಗಿನ್‍ಗೆ ತಿದ್ದುಪಡಿ ಮಾಡಲು ವರ್ಗಾಯಿಸಿದೆ, ಅದರಲ್ಲಿ 877.92 ಚದರಮೀಟರ್‍ಗೆ ಹೆಚ್ಚಿಸಿ ಈ-ಖಾತೆ ಮಾಡಿರುತ್ತಾರೆ, ಇದರಲ್ಲಿ ಪಿಡಿಓ ಅಕ್ರಮ ಖಾತೆ ಮಾಡಿರುವುದು ಕಂಡು ಬಂದಿದ್ದು ಕೂಡಲೆ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು