LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Politics News

ದಿವಾಳಿ ಸರ್ಕಾರ

ಆರ್ಥಿಕ ಇಲಾಖೆ ಟಿಪ್ಪಣಿ ಸೋರಿಕೆ ಖಂಡಿಸಿ ಮೈತ್ರಿಪಕ್ಷಗಳ ಧರಣಿ



ಬೆಂಗಳೂರು: ರಾಜ್ಯ ಸರ್ಕಾರ ಹಣಕಾಸಿನ ಕೊರತೆ ಎದುರಿಸುತ್ತಿದ್ದು, ದಿವಾಳಿಯಾಗಿದೆ ಎಂದು ಆರೋಪಿಸಿ ಜೆಡಿಎಸ್ ಬಿಜೆಪಿ ಮೈತ್ರಿಪಕ್ಷದ ಸದಸ್ಯರು ಇಂದು ಪ್ರತಿಭಟನಾ ಧರಣಿ ನಡೆಸಿದ್ದಾರೆ. ವಿಧಾನಸೌಧದ ಪಶ್ಚಿಮ ಧ್ವಾರದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ-ವಿಧಾನಪರಿಷತ್‌ನ ಮೈತ್ರಿ ಪಕ್ಷದ ಶಾಸಕರು ಪಾಲ್ಗೊಂಡಿದ್ದರು. 
ಪ್ರತಿಭಟನಾ ಕಾರರು ಕೈಯಲ್ಲಿ ಖಾಲಿ ಚೆಂಬು, ಖಾಲಿ ತೆಂಗಿನಚಿಪ್ಪು ಹಿಡಿದು ಘೋಷಣೆ ಕೂಗಿದರು. ನಿನ್ನೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಟಿಪ್ಪಣಿ ಬಹಿರಂಗವಾಗಿದೆ. ಆ ಟಿಪ್ಪಣಿಯಲ್ಲಿ ಸರ್ಕಾರ ಯಾವುದೇ ಹೊಸ ಯೋಜನೆ ಘೋಷಿಸಲು ಹಣದ ಕೊರತೆಯಿದೆ ಎಂದು ಪ್ರಸ್ತಾಪಿಸಲಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದೆ. ಸಾಲ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಮಾಡುವ ಸ್ಥಿತಿಯೂ ಇಲ್ಲ ಎಂದು ದೂರಿದರು. ಭಿಕ್ಷೆ ಎತ್ತಿದರೂ ಒಂದೂ ಪೈಸೆ ಕೊಡುವವರಿಲ್ಲ ಎಂದು ಆರೋಪಿಸಿದ ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಇದೊಂದು ಬಿಕಾರಿ ಸರ್ಕಾರ ಎಂದು ಆಕ್ರೋಶ ಹೊರ ಹಾಕಿದರು. ನಾನು ವಾಸ್ತವ ಸ್ಥಿತಿಯನ್ನು ನಾನು ಈ ಹಿಂದೆಯೇ ತಿಳಿಸಿದ್ದೆ ಎಂದು ವಿಜಯೇಂದ್ರ ತಿಳಿಸಿದ ಅವರು, 
ಈ ಸರ್ಕಾರ ಮೊನ್ನೆಯಷ್ಟೇ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ 32ಸಾವಿರ ರೂ. ಕೋಟಿಗೂ ಹೆಚ್ಚು ಹೊಸ ಯೋಜನೆಗಳನ್ನು ಘೋಷಿಸಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಗುಲ್ಬರ್ಗಾದಲ್ಲಿ 40ಸಾವಿರ ಕೋಟಿ, ಚಾಮರಾಜನಗರದಲ್ಲಿ 20ಸಾವಿರ ಕೋಟಿ, ನಂದಿ ಬೆಟ್ಟದಲ್ಲಿ ಮತ್ತಷ್ಟು ಹೀಗೆ ಸರ್ಕಾರವನ್ನು ದಿವಾಳಿ ಅಂಚಿಗೆ ತಳ್ಳಿ ಹೋಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಸರ್ಕಾರ ನಡೆಸಲು ಬೊಕ್ಕಸದಲ್ಲಿ ಹಣವೇ ಇಲ್ಲ ಎಂದು ಆರೋಪಿಸಿದರು. 
ಪ್ರತಿಭಟನಾಕಾರರು ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡದ ದಿವಾಳಿ ಸರ್ಕಾರ ಎಂದು ತಮ್ಮದೇ ಆದ ರೀತಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಿನ್ನೆ ಆರ್ಥಿಕ ಇಲಾಖೆ ಟಿಪ್ಪಣಿ ಸೋರಿಕೆಯ ಹಿನ್ನೆಲೆಯಲ್ಲಿ ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿಯವರು ತಮ್ಮ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿ ಗುಡುಗಿದರು. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST