ಬೆಂಗಳೂರು: ನಕಲಿ ಔಷಧ ಜಾಲದ ತನಿಖೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ನಕಲಿ ಔಷಧಗಳು ಎಲ್ಲೆಲ್ಲಿಗೆ ಪೂರೈಕೆಯಾಗಿವೆ ಎಂಬುದರ ಜತೆಗೆ, ಅವುಗಳನ್ನು ಸೇವಿಸಿರುವ ರೋಗಿಗಳ ಮಾಹಿತಿ ಕಲೆಹಾಕಲು ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು ಮುಂದಾಗಿದ್ದಾರೆ. ಯಾವ ಆಸ್ಪತ್ರೆಗಳಿಗೆ ನಕಲಿ ಔಷಧ ಪೂರೈಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಸ್ಪತ್ರೆಗಳ ಫಾರ್ಮಸಿಗಳಿಂದ ಔಷಧಗಳ ಖರೀದಿ ಹಾಗೂ ಬಳಕೆಯ ವಿವರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಯಾವ ದಿನ, ಯಾವ ಆಸ್ಪತ್ರೆಯಲ್ಲಿ ಎಷ್ಟು ಪ್ರಮಾಣದ ಔಷಧ ಬಳಕೆಯಾಗಿದೆ ಎಂಬ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ.
ನಕಲಿ ಔಷಧ ಪಡೆದಿರುವ ರೋಗಿಗಳ ವಿವರಗಳನ್ನು ಸಂಗ್ರಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಔಷಧ ಸೇವಿಸಿದ ಬಳಿಕ ರೋಗಿಗಳ ಆರೋಗ್ಯ ಸ್ಥಿತಿ ಹೇಗಿದೆ, ಅವರಿಗೆ ಯಾವುದೇ ತೊಂದರೆ ಅಥವಾ ಅಡ್ಡ ಪರಿಣಾಮ ಉಂಟಾಗಿದೆಯೇ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ನಕಲಿ ಔಷಧದಿಂದ ರೋಗಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ರೋಗಿಗಳಿಗೆ ನೀಡಲಾದ ಔಷಧದ ಬ್ಯಾಚ್, ಆಸ್ಪತ್ರೆ ಹಾಗೂ ಫಾರ್ಮಸಿಯ ವಿವರಗಳನ್ನು ಕಲೆಹಾಕಲಾಗುತ್ತಿದೆ.
ನಕಲಿ ಔಷಧದ ಸಂಪೂರ್ಣ ಸಪ್ಲೆöÊ ಚೈನ್ ಪತ್ತೆಹಚ್ಚಲು ಎಫ್‌ಡಿಎ ತನಿಖೆ ನಡೆಸುತ್ತಿದೆ. ನಕಲಿ ಔಷಧ ಪೂರೈಕೆಯಾಗಿರುವ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‌ಗಳ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವೂ ನಡೆಯುತ್ತಿದೆ.
ನಕಲಿ ಔಷಧ ಸೇವನೆಯಿಂದ ರೋಗಿಗಳಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿದೆಯೇ ಎಂಬುದರ ಮೇಲೂ ಅಧಿಕಾರಿಗಳು ಗಮನಹರಿಸಿದ್ದಾರೆ. ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಕಂಡುಬAದರೆ ಮುಂದಿನ ಕ್ರಮ ಕೈಗೊಳ್ಳಲು ಎಫ್‌ಡಿಎ ಸಿದ್ಧತೆ ನಡೆಸಿದೆ. ಪ್ರಕರಣದ ತನಿಖೆಯ ಜತೆಗೆ ರೋಗಿಗಳ ಮೇಲೆ ಉಂಟಾಗಿರುವ ಪರಿಣಾಮದ ಬಗ್ಗೆಯೂ ವರದಿ ಸಿದ್ಧಪಡಿಸುವ ಸಾಧ್ಯತೆಯಿದೆ.