LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ’: ಚೈತ್ರ ಸಂದೇಶ್ ಸ್ಟಡಿ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ಗಣೇಶೋತ್ಸವದ ಸಂದೇಶ


ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಚೈತ್ರ ಸಂದೇಶ್ ಸ್ಟಡಿ ಸೆಂಟರ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಜೇಡಿ ಮಣ್ಣಿನ ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿ ತಯಾರಿಕಾ ಸ್ಪರ್ಧೆಯು ಯಶಸ್ವಿಯಾಗಿ ಜರುಗಿತು. ಸ್ವತಃ ವಿದ್ಯಾರ್ಥಿಗಳೇ ತಮ್ಮ ಕೈಯಾರೆ ಜೇಡಿ ಮಣ್ಣಿನಿಂದ ಕಲಾತ್ಮಕ ಮೂರ್ತಿ ಸಿದ್ಧಪಡಿಸುವ ಮೂಲಕ ಪರಿಸರ ಕಾಳಜಿ  ಮೆರೆದರು.ಈ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ವಿದ್ಯಾರ್ಥಿಗಳಿಗೆ ಮುಂಬ ರುವ `ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೌಮ್ಯ ಮತ್ತು ಜಯಪ್ರಕಾಶ್ ಅವರು ವಿದ್ಯಾರ್ಥಿಗಳನ್ನು ಶ್ಲಾಘಿಸಿ, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಆಯ್ಕೆ ಮಾಡಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಸಾಯನಿಕಯುಕ್ತ ಬಣ್ಣ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳಿಂದ ಆಗುವ ಪರಿಸರ ಹಾನಿಯನ್ನು ತಪ್ಪಿಸಲು ಮಣ್ಣಿನ ಗಣಪತಿಯನ್ನೇ ಪೂಜಿಸಬೇಕು ಮತ್ತು ಪೂಜೆಯ ನಂತರ ಮನೆಯಲ್ಲಿಯೇ ಬಕೆಟ್ ಅಥವಾ ಹೊಂಡದ ನೀರಿನಲ್ಲಿ ವಿಸರ್ಜಿಸಿ ಆ ಮಣ್ಣನ್ನು ಗಿಡಗಳಿಗೆ ಬಳಸಬೇಕು ಎಂದು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ಚೈತ್ರ ಸಂದೇಶ್ ಸ್ಟಡಿ ಸೆಂಟರ್‌ನ  ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಸಂದೇಶ್ ಅವರು ಮಾತನಾಡಿ, “ತಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಆಗಮಿಸಿ, ವಿದ್ಯಾರ್ಥಿಗಳು ತಯಾರಿಸಿದ ಗೌರಿ-ಗಣೇಶ ಮೂರ್ತಿಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡಿಕೊಟ್ಟಿದ್ದಲ್ಲದೆ, ಮಕ್ಕಳಿಗೆ ಪರಿಸರ ಸಂರಕ್ಷಣೆಯ ಮಹತ್ವದ ಪಾಠ ಹೇಳಿಕೊಟ್ಟ ಮುಖ್ಯ ಅತಿಥಿಗಳಾದ ಸೌಮ್ಯ ಮತ್ತು ಜಯಪ್ರಕಾಶ್ ಅವರಿಗೆ ಮತ್ತು ಕನ್ನಡ ಜಾನಪದ ಪರಿಷತ್ತಿನ ಗೋವಿಂದರಾಜನಗರ ವಿ ಕ್ಷೇತ್ರದ ಅಧ್ಯಕ್ಷ ರ. ನರಸಿಂಹಮೂರ್ತಿ ರವರಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು,” ಎಂದರು. ಮುಂದುವರಿದು, ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಅವರು, “ನಿಮ್ಮ ಈ ಪರಿಸರ ಕಾಳಜಿ ಸಮಾಜಕ್ಕೆ ಮಾದರಿಯಾಗಿದೆ,” ಎಂದು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಅತಿಥಿಗಳು ಆಯ್ಕೆ ಮಾಡಿದ ವಿಜೇತ ವಿದ್ಯಾರ್ಥಿಗಳ ಅಧಿಕೃತ ಪಟ್ಟಿಯನ್ನು ಪ್ರಧಾನ ಕಾರ್ಯದರ್ಶಿಗಳಿಗೆ ಹಸ್ತಾಂತರಿಸುವುದ ರೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST