ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನವಾಗಿ ಉಸ್ತುವಾರಿವಾಗಿ ನೇಮಕಗೊಂಡಿದ್ದ ಹರೀಶ್ ದಿವೇದಿ ಅವರ ಇಂದಿನ ರಾಜ್ಯ ಭೇಟಿ ರದ್ದಾಗಿದೆ. ಅವರ ಮಾತೃಶ್ರೀಯವರ ನಿಧನದಿಂದಾಗಿ ಕಾರ್ಯಕ್ರಮ ರದ್ದುಗೊಂಡಿದೆ. ನಾಳೆ ಸಹ ಉಸ್ತುವಾರಿಯಾಗಿರುವ ವೆಂಕಟೇಶ್ವರಲು ಅವರು ರಾಜ್ಯಕ್ಕೆ ಬರಲಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉನ್ನತ ಮಟ್ಟದ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಯಲಿದೆ.