LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಬೆಂಕಿ- ಸುಟ್ಟು ಕರಕಲಾದ ಸರಕು ಸಾಗಣೆ ಲಾರಿ 80 ಲಕ್ಷಕ್ಕೂ ಅಧಿಕ ಮೌಲ್ಯದ ಸರಕು ಸುಟ್ಟು ಭಸ್ಮ

ದೇವನಹಳ್ಳಿ: ವಿದ್ಯುತ್ ಟ್ರಾನ್ಸ್‍ಫರ್ಮರ್ ಪಕ್ಕದಲ್ಲಿ ರಾತ್ರಿ ಸರಕು ತುಂಬಿದ ಈಚರ್ ಲಾರಿಯನ್ನು ಚಾಲಕ ನಿಲ್ಲಿಸಿ ನಿದ್ರಿಸುತ್ತಿದ್ದ ವೇಳೆ ಮುಂಜಾನೆ ಟಿಸಿ ಬಳಿಯ ವಿದ್ಯುತ್ ತಂತಿಗಳಿಂದ ಉಂಟಾದ ಬೆಂಕಿಯ ಕಿಡಿ ನಿಂತಿದ್ದ ಲಾರಿಯ ಮೇಲೆ ಬಿದ್ದು ಲಾರಿ ಸರಕು ಸರಂಜಾಮು ಸಮೇತ ಸುಟ್ಟುಕರಕಲಾಗಿರುವ ಘಟನೆ ದೇವನಹಳ್ಳಿ ಪಟ್ಟಣದಲ್ಲಿ ಸಂಭವಿಸಿದೆ.

ವಿಜಯಪುರದ ವಿನೋದ್ ಎಂಬವರಿಗೆ ಸೇರಿದ ಶ್ರೀ ರತ್ನ ಟ್ರಾನ್ಸ್‍ಪೋರ್ಟ್ ಸರಕು ಸಾಗಣೆ ಮಾಡುವ ಲಾರಿ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ ಈ ಸರಕು ಸಾಗಣೆ ಲಾರಿ ಪ್ರತಿ ನಿತ್ಯ ದೇವನಹಳ್ಳಿ ಹಾಗೂ ವಿಜಯಪುರ ವರ್ತಕರಿಗೆ (ವ್ಯಾಪಾರಿಗಳಿಗೆ) ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಬಳೆಪೇಟೆ, ತರಗುಪೇಟೆ, ಮಾಮೂಲ್ ಪೇಟೆ ಚಾಮರಾಜಪೇಟೆ ನಗರ್ತರ ಪೇಟೆ ಮುಂತಾದ ಕಡೆ ಸಗಟು ವ್ಯಾಪಾರಿ ಮಳಿಗೆಗಳಿಂದ ಇಲ್ಲಿನ ವ್ಯಾಪಾರಿಗಳು ಚಿಲ್ಲರೆ ವ್ಯಾಪಾರಕ್ಕೆ ಖರೀದಿಸಿದ ಬಣ್ಣದ ಅಂಗಡಿಯ ವಸ್ತುಗಳು ಎಲೆಕ್ಟ್ರಿಕ್ ಅಂಗಡಿಯ ವಸ್ತುಗಳು, ಬಟ್ಟೆ ವ್ಯಾಪಾರಿಗಳ, ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟಗಾರರ ದಿನ ಅಂಗಡಿಯವರ ಪ್ರಾವಿಜನ್ ಸ್ಟೋರ್‍ಗಳ ಬೇಕರಿ ಅಂಗಡಿಗಳಿಗೆ ಸಂಬಂದಿಸಿದ ಹಾಗು ಇನ್ನೂ ಹತ್ತು ಹಲವಾರು ರೀತಿಯ ವ್ಯಾಪಾರಿಗಳ ಮಾಲನ್ನು ತುಂಬಿಸಿಕೊಂಡು ಬಂದು ಮದ್ಯರಾತ್ರಿ ದೇವನಹಳ್ಳಿಯಲ್ಲಿ ನಿಲ್ಲಿಸಿ ನಿದ್ರಿಸಿ ಮುಂಜಾನೆ 6 ಘಂಟೆಯ ಬಳಿಕ ವ್ಯಾಪಾರಿಗಳ ಅಂಗಡಿಗಳ ಬಳಿ ಸರಕುಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದರು.

ದುರಾದೃಷ್ಠವಶಾತ್ ಗುರುವಾರ ತಡ ರಾತ್ರಿ ಬೆಂಗಳೂರಿನಿಂದ ವಾಹನ ಚಲಾಯಿಸಿಕೊಂಡು ಬಂದ ಮಾಲಿಕ ವಿನೊದ್ ಹಳೆ ಬಸ್ ನಿಲ್ದಾಣದ ಇಂದಿರಾ ಕ್ಯಾಂಟಿನ್ ಪಕ್ಕದ ಟ್ರಾನ್ಸ್‍ಫಾರ್ಮರ್ ಬಳಿ ನಿಲ್ಲಿಸಿದ್ದ, ವಿದ್ಯುತ್ ತಂತಿಗಳು ಮಟ್ಟದಲ್ಲಿ ಹಾದು ಹೋಗಿದ್ದ ಕಡೆ ಅದರ ಕೆಳಗೆ ನಿಲ್ಲಿಸಿ ತಮ್ಮ ಚಾಲಕನಿಗೆ ಮುಂಜಾನೆ ಸರಕುಗಳನ್ನು ಡೆಲಿವರಿ ಮಾಡಿ ಬರಲು ಸೂಚಿಸಿದ್ದರು ಲಾರಿಯ ತುಂಬ ಸರಕು ತುಂಬಿಸಿದ್ದು, ಲಾರಿಯ ಟಾಪ್ ಮೇಲೆ ಸರಕು ತುಂಬಿಸಿದ್ದುದೇ ಇದಕ್ಕೆ ಕಾರಣ ಅಗತ್ಯಕ್ಕೂ ಹೆಚ್ಚು ಸರಕು ತುಂಬಿಸಿದ್ದರು ಆದ್ದರಿಂದ ಈ ಘಟನೆ ಸಂಬವಿಸಿದೆ,

ಮುಂಜಾನೆ 3:00ಗಂಟೆಯ ಸಮಯದಲ್ಲಿ ಉಂಟಾದ ಶಾರ್ಟ್ ಸಕ್ರ್ಯೂಟ್‍ನಿಂದ ಲಾರಿ ದಗದಗ ಉರಿಯಲಾರಂಬಿಸಿದೆ ಇದರ ಜೊತೆ ಮೇಲೆ ಇದ್ದ ವಿದ್ಯುತ್ ತಂತಿಗಳು ಉರಿದಿದೆ, ಇದನ್ನು ಕಂಡ ಪಕ್ಕದ ತರಕಾರಿ ಅಂಗಡಿಯವರು ಎದ್ದು ಕಿರುಚಾಡಿ ಲಾರಿ ಚಾಲಕನ್ನು ಹೊರಗೆ ಎಳೆದು ಪಕ್ಕದಲ್ಲಿಯೇ ಇದ್ದ ಅಗ್ನಿಶಾಮಕ ಠಾಣೆಯವರನ್ನು ಕೂಗಿ ಕರೆದಿದ್ದಾರೆ ಮತ್ತು ಕೂಗಳತೆ ದೂರದಲ್ಲಿದ್ದ ಬೆಸ್ಕಾಂಗೂ ಕರೆ ಮಾಡಿದ್ದಾರೆ ತಕ್ಷಣ ಬೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಇದರಿಂದ ಹೆಚ್ಚಿನ ಅನಾಹುತ ತಪ್ಪಿದೆ, ಘಟನೆ ನಡೆದ ಪಕ್ಕದಲ್ಲೇ ಇದ್ದ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ದೌಡಾಯಿಸಿ ಬಂದರೂ ನೀರಿನ ಕೊರತೆಯಿಂದಾಗಿ ಬೆಂಕಿ ನಂದಿಸಲಾಗದೆ ಎಲ್ಲವೂ ಸುಟ್ಟು ಘಟನೆ ನಡೆದ ಬಳಿಕ ಪೋಲಿಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು