ತಿ.ನರಸೀಪುರ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ 220-ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಂಡು, ಯಾವುದೇ ಲೋಪದೋಷ ಕಂಡುಬಂದಲ್ಲಿ ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳುವಂತೆ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಹಾಗೂ ತಹಸೀಲ್ದಾರ್ ಸುರೇಶಾಚಾರ್ ಮನವಿ ಮಾಡಿದ್ದಾರೆ.
220-ತಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಪಿ. ಎಸ್. ಮಹೇಶ್ ಅವರ ನೇತೃತ್ವದಲ್ಲಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಯಿತು.ತಿ.ನರಸೀಪುರ ತಾಲ್ಲೂಕು ಆಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಹೆಚ್ಚು ನಿಖರ, ಪಾರದರ್ಶಕ ಹಾಗೂ ಅರ್ಹ ಮತದಾರರನ್ನು ಒಳಗೊಂಡಂತೆ ಸಿದ್ಧಪಡಿಸುವ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಆರಂಭಿಕವಾಗಿ 2,12,752 ಮತದಾರರು ಇದ್ದರು. ಪರಿಶೀಲನಾ ಪ್ರಕ್ರಿಯೆಯ ಸಂದರ್ಭದಲ್ಲಿ ಗೈರುಹಾಜರಿ, ಶಾಶ್ವತವಾಗಿ ಸ್ಥಳಾಂತರ, ಮರಣ, ದ್ವಿಪ್ರತಿ ಸೇರಿದಂತೆ ವಿವಿಧ ಕಾರಣಗಳಿಂದ 31,436 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ. ಇದರೊಂದಿಗೆ ಇದೀಗ 1,81,316 ಮತದಾರರನ್ನು ಒಳಗೊಂಡ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ವಿವರಿಸಿದರು.
ಕೈಬಿಟ್ಟ 31,436 ಮತದಾರರ ವಿವರ: ಪರಿಶೀಲನೆ ವೇಳೆ ಪಟ್ಟಿಯಿಂದ ಕೈಬಿಡಲಾದ ಮತದಾರರ ಪೈಕಿ 2,021 ಮಂದಿ ಗೈರುಹಾಜರಿ , 14,723 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 11,156 ಮಂದಿ ಮೃತಪಟ್ಟವರು , 3,493 ಮಂದಿ ದ್ವಿಪ್ರತಿ ಮತದಾರರು ಹಾಗೂ 43 ಮಂದಿ ಇತರ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದರು.ಮತದಾರರ ಹೆಸರು ಕೈಬಿಡುವ ಪ್ರಕ್ರಿಯೆಗೆ ಸಂಬAಧಿಸಿದ ವಿವರಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಈಗಾಗಲೇ ಒದಗಿಸಲಾಗಿದೆ. ಸಾರ್ವಜನಿಕರು ಸಹ ತಮ್ಮ ಹೆಸರು ಕರಡು ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.9,801 ಮತದಾರರಿಗೆ ನೋಟಿಸ್: SIಖ ಪ್ರಕ್ರಿಯೆಯಲ್ಲಿ ಕ್ಷೇತ್ರದ 6,168 ಅನಾಮಲಿ ಮತದಾರರು, 3,633 ನೋ-ಮ್ಯಾಪಿಂಗ್ ಮತದಾರರು ಸೇರಿದಂತೆ ಒಟ್ಟು 9,801 ಮತದಾರರನ್ನು ಗುರುತಿಸಲಾಗಿದ್ದು, ಅವರಿಗೆ ನೋಟಿಸ್ ಜಾರಿ ಗೊಳಿಸಿ ವಿಚಾರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಸುರೇಶಾಚಾರ್ ತಿಳಿಸಿದರು.ನೋಟಿಸ್ ಪಡೆದವರು ಆತಂಕಪಡುವ ಅಗತ್ಯವಿಲ್ಲ. ತಮ್ಮ ಮತದಾರರ ನೋಂದಣಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ, ವಿಚಾರಣಾ ಪ್ರಕ್ರಿಯೆಯಲ್ಲಿ ತಮ್ಮ ಅಂಶವನ್ನು ಸ್ಪಷ್ಟಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ವಿಚಾರಣೆ:ಸಾರ್ವಜನಿಕರು ತಾಲೂಕು ಕೇಂದ್ರಕ್ಕೆ ಪದೇಪದೇ ಆಗಮಿಸಿ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ವಿಚಾರಣಾ ಕೇಂದ್ರಗಳನ್ನು ಆರಂಭಿಸಿ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಒಳಗೊಂಡಂತೆ 13 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಇದರಿಂದ ಗ್ರಾಮೀಣ ಪ್ರದೇಶದ ಮತದಾರರು ತಮ್ಮ ದಾಖಲೆಗಳೊಂದಿಗೆ ಸ್ಥಳೀಯವಾಗಿಯೇ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗಲಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಚಾರಣಾ ಕೇಂದ್ರದ ದಿನಾಂಕ, ಸಮಯ ಹಾಗೂ ಸ್ಥಳದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.ಹೆಸರು ಕೈಬಿಟ್ಟಿದ್ದರೆ ಏನು ಮಾಡಬೇಕು?:ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಅರ್ಹ ಮತದಾರರು ಆತಂಕಪಡುವ ಅಗತ್ಯವಿಲ್ಲ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ-6 (ಈoಡಿm-6) ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.ಅದೇ ರೀತಿ, ಮತದಾರರ ಪಟ್ಟಿಯಲ್ಲಿರುವ ಹೆಸರು, ವಿಳಾಸ, ವಯಸ್ಸು ಅಥವಾ ಇತರ ವಿವರಗಳಲ್ಲಿ ತಪುö್ಪಗಳಿದ್ದರೆ ಸಂಬAಧಪಟ್ಟ ನಮೂನೆಯ ಮೂಲಕ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಸ್ಥಳಾಂತರಗೊAಡಿರುವ ಮತದಾರರು ತಮ್ಮ ಪ್ರಸ್ತುತ ವಾಸಸ್ಥಳಕ್ಕೆ ಅನುಗುಣವಾಗಿ ಮತದಾರರ ಪಟ್ಟಿಯಲ್ಲಿ ವಿವರಗಳನ್ನು ಸರಿಪಡಿಸಿಕೊಳ್ಳಬಹುದು.ಯಾವ ದಾಖಲೆಗಳು ಬೇಕು?: ಅರ್ಹ ಮತದಾರರು ತಮ್ಮ ಜನ್ಮ ದಿನಾಂಕ ಹಾಗೂ ಜನ್ಮ ಸ್ಥಳ ಸೇರಿದಂತೆ ಅಗತ್ಯ ವಿವರಗಳ ದೃಢೀಕರಣಕ್ಕಾಗಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮಾನ್ಯ ದಾಖಲೆಗಳನ್ನು ಸಲ್ಲಿಸಬೇಕು. ಇವುಗಳಲ್ಲಿ ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರ, ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿರುವ ಗುರುತಿನ ದಾಖಲೆಗಳು, ಜಾತಿ ಪ್ರಮಾಣಪತ್ರ ಸೇರಿದಂತೆ ಅನ್ವಯಿಸುವ ಇತರೆ ಅಧಿಕೃತ ದಾಖಲೆಗಳು ಸೇರಿವೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಆಧಾರ್ನೂ್ನ ಗುರುತಿನ ದಾಖಲೆಯಾಗಿ ಸಲ್ಲಿಸಲು ಅವಕಾಶವಿದೆ.ದಾಖಲೆಗಳನ್ನು ಸಲ್ಲಿಸುವ ಮೊದಲು ಅವುಗಳಲ್ಲಿ ಹೆಸರು, ಜನ್ಮ ದಿನಾಂಕ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮತದಾರರು ಕಡ್ಡಾಯವಾಗಿ ಹೆಸರು ಪರಿಶೀಲಿಸಿಕೊಳ್ಳಿ: ಮತದಾರರ ಪಟ್ಟಿಯಲ್ಲಿ ಹೆಸರು ಇರುವುದೇ ಮತದಾನದ ಹಕ್ಕು ಚಲಾಯಿಸಲು ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕರಡು ಮತ ದಾರರ ಪಟ್ಟಿಯಲ್ಲಿ ತಮ್ಮ ಹೆಸರು, ಮತಗಟ್ಟೆ, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀ ಲಿಸಿಕೊಳ್ಳಬೇಕು. ವಿಶೇಷವಾಗಿ ಕುಟುಂಬದ ಸದಸ್ಯರು, ವಯೋವೃದ್ಧರು ಹಾಗೂ ಹೊರಗಡೆ ವಾಸಿಸುತ್ತಿರುವ ಕುಟುಂಬ ಸದಸ್ಯರ ಹೆಸರುಗಳನ್ನೂ ಪರಿಶೀಲಿಸಿಕೊಳ್ಳಬೇಕು. ಯಾರಾದರೂ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ, ನಿಗದಿತ ಅವಧಿಯೊಳಗೆ ಅಗತ್ಯ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಿ ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.ರಾಜಕೀಯ ಪಕ್ಷಗಳಿಗೂ ಮಾಹಿತಿ: ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ವಿವರಗಳನ್ನು ಸಂಬAಧಪಟ್ಟ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದ್ದು, ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಸುರೇಶಾಚಾರ್ ತಿಳಿಸಿದರು.ಸಾರ್ವಜನಿಕರು ಯಾವುದೇ ಗೊಂದಲ ಅಥವಾ ಅನುಮಾನವಿದ್ದಲ್ಲಿ ಸಂಬAಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾ ರಿಗಳು ಅಥವಾ ತಾಲೂಕು ಚುನಾವಣಾ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಈ ಸಂದರ್ಭದಲ್ಲಿ ಚುನಾವಣಾ ಉಪ ತಾಹಸಿಲ್ದಾರ್ ವೇದ ರಾಜೇಂದ್ರ, ಚುನಾವಣ ಶಾಖೆಯ ಕಿರಣ್, ತಾಲ್ಲೂಕು ವಿವಿಧ ರಾಜಕೀಯ ಮುಖಂಡರುಗಳು ಬಿ ಎಸ್. ಪಿ ಯಿಂದ ಬಿ. ಆರ್. ಪುಟ್ಟಸ್ವಾಮಿ, ಬಿ. ಮಹದೇವಸ್ವಾಮಿ, ಪುಟ್ಟ ಮರುಡಯ್ಯ, ಜೆಡಿಎಸ್ ತಾಲ್ಲೂಕು ಸಿ. ಬಿ. ಹುಂಡಿ ಚಿನ್ನಸ್ವಾಮಿ, ಜಯರಾಮು, ಬಿಜೆಪಿ ಯಿಂದ ಲೋಕೇಶ್, ಕಾಂಗ್ರೆಸ್ ನಿಂದ ಕನ್ನಹಳ್ಳಿ ಲಕ್ಮ್ಷಣ್, ಕಲಿಯುರು ಶಿವಣ್ಣ ಹಾಜರಿದ್ದರು.