LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts | Politics News

ಚೆನ್ನೈ ಸಭೆಯತ್ತ ಚಿತ್ತ

ಅಮಿತ್ ಶಾ ನೇತೃತ್ವದಲ್ಲಿ ನಡೆದಿದೆ ದಕ್ಷಿಣ ರಾಜ್ಯಗಳ ಸಮಾಲೋಚನೆ



ಚೆನ್ನೈ: ತಮಿಳುನಾಡಿನ ಚನ್ನೆöÊನಲ್ಲಿ ಇಂದು ದಕ್ಷಿಣ ವಲಯ ರಾಜ್ಯಗಳ 31ನೇ ಸಭೆ ನಡೆದಿದೆ. ಚೆನ್ನೈನ ಕಡಲ ತೀರದ ಕೋವಲಂನ ಕಡಲ ತೀರದಲ್ಲಿ ರೆಸಾರ್ಟ್ವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ಇದಾಗಿದ್ದು, ಎಲ್ಲಾ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್‌ರೆಡ್ಡಿ, ವಿದೇಶ ಪ್ರವಾಸದಲ್ಲಿರುವ ಪರಿಣಾಮ ಆ ರಾಜ್ಯದ ಪರವಾಗಿ ಅಲ್ಲಿನ ಉಪಮುಖ್ಯಮಂತ್ರಿ ಮಲ್ಲುಬಟ್ಟಿ ವಿಕ್ರಮಾಕ ಪಾಲ್ಗೊಂಡಿದ್ದಾರೆ. ಉಳಿದಂತೆ ಕೇರಳದ ವಿ.ಡಿ.ಸತೀಶನ್, ಪಾಂಡಿಚೇರಿಯ ಎನ್.ರಂಗಸ್ವಾಮಿ, ಆಂಧ್ರದ ಚಂದ್ರಬಾಬುನಾಯ್ಡು, ಕರ್ನಾಟಕದ ಡಿ.ಕೆ.ಶಿವಕುಮಾರ್, ತಮಿಳುನಾಡಿನ ವಿಜಯ್ ಹಾಜರಿದ್ದಾರೆ. ನಿನ್ನೆ ರಾತ್ರಿಯೇ ವಿಜಯ್ ಅವರು ಅಮಿತ್ ಶಾ ವಾಸ್ತವ್ಯ ಹೂಡಿದ್ದ ಹೋಟೆಲ್‌ಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೀಗ ಸಭೆ ಆರಂಭಗೊಂಡಿದ್ದು, ಸಭೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಸಮಸ್ಯೆಗಳು ನೆರೆರಾಜ್ಯದೊಂದಿಗಿರುವ ಬಾಂಧವ್ಯ ಮತ್ತು ವಿವಿಧ ವಿವಾದಗಳ ಬಗ್ಗೆ ವಿವರಿಸಲಿದ್ದಾರೆ. 
ಎಲ್ಲಾ ರಾಜ್ಯಗಳ ನಡುವಿನ ಆರ್ಥಿಕ ಪ್ರಗತಿ ಒಂದು ರಾಜ್ಯಕ್ಕೆ ಮತ್ತೊಂದು ರಾಜ್ಯಕ್ಕೆ ಇರುವ ಮೂಲಸೌಕರ್ಯ ಸೇರಿದಂತೆ ನದಿ ಗಡಿ ಕಾನೂನು ಸುವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಲ್ಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಪ್ರಮುಖವಾಗಿ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಲಿದ್ದಾರೆ ಎಂದು ಹೇಳಲಾಗಿದೆ. ತಮಿಳುನಾಡಿನ ಮುಖ್ಯಮಂತ್ರಿಯವರು ಸಹ ಇದೇ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ದಕ್ಷಿಣ ರಾಜ್ಯಗಳ ಬಗ್ಗೆ ಮತ್ತು ಆ ರಾಜ್ಯಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಮಿತ್ ಶಾ ಆಲಿಸಲಿದ್ದಾರೆ ಎಂದು ಹೇಳಲಾಗಿದೆ.ಇಂದು ಆರಂಭಗೊAಡಿರುವ ಸಭೆ ನಾಳೆಯೂ ಮುಂದುವರಿಯಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST