ಬೆಂಗಳೂರು: ಆಷಾಢ ಮುಗಿದು ಶ್ರಾವಣಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ನಾಳೆ ನಾಡಿನ ದೊಡ್ಡ ಹಬ್ಬ ವರಮಹಾಲಕ್ಷ್ಮೀ ಹಬ್ಬವಿದ್ದು, ಹಬ್ಬದ ಖರೀದಿಗೆ ಕೆ.ಆರ್ ಮಾರ್ಕೆಟ್‌ಗೆ ಜನ ಮುಗಿ ಬೀಳುತ್ತಿದ್ದಾರೆ. ಆದರೆ ಹೂವು, ಹಣ್ಣುಗಳ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ.
ಶ್ರಾವಣ ಮಾಸದ ದೊಡ್ಡ ಹಬ್ಬ ವರಮಹಾಲಕ್ಷಿ÷್ಮ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹಬ್ಬದ ಖರೀದಿಗೆ ಬೆಂಗಳೂರಿನ ಮಾರ್ಕೆಟ್‌ಗೆ ಜನಸಾಗರವೇ ಹರಿದು ಬರುತ್ತಿದೆ. ಅದರಲ್ಲೂ ಕೆ.ಆರ್ ಮಾರ್ಕೆಟ್‌ನಲ್ಲಂತೂ ಹೂವು, ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಶುಕ್ರವಾರ ಹಬ್ಬವಿದ್ರೂ ಬುಧವಾರದಿಂದಲೇ ಜನರ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ಹೂವಿನ ಮಾರ್ಕೆಟ್‌ನಲ್ಲಿ ಕಾಲಿಡಲು ಜಾಗವಿಲ್ಲ. ಶುಕ್ರವಾರ ಇನ್ನೂ ಬೆಲೆ ಹೆಚ್ಚಾಗುತ್ತೆ ಅಂತಾ ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಕನಕಾಂಬರ - 1 ಕೆಜಿಗೆ 3 ರಿಂದ 4 ಸಾವಿರ ರೂ., ಮಲ್ಲಿಗೆ - 1 ಕೆಜಿಗೆ 1 ರಿಂದ 2 ಸಾವಿರ ರೂ., ಮಳ್ಳೆ ಹೂವು -1 ಕೆಜಿಗೆ 600 ರಿಂದ 800 ರೂ., ಕಾಕಡ ಹೂವು - 1 ಕೆಜಿಗೆ 600 ರಿಂದ 700 ರೂ., ಸೇವಂತಿಗೆ -1 ಕೆಜಿಗೆ 500 ರಿಂದ 800 ರೂ., ಗುಲಾಬಿ - 1 ಕೆಜಿಗೆ 400 ರೂ., ಕಣಗಲೆ ಹೂವು - 1 ಕೆಜಿಗೆ 250 ರೂ., ತಾವರೆ ಹೂವು - 1 ಜೋಡಿಗೆ 100 ರೂ., ಬಾಳೆಕಂದು - 1 ಜೊತೆಗೆ 100 ರೂ., ಸುಗಂಧರಾಜ ಹಾರ - 1,500 ರಿಂದ 2000 ರೂ.ಇನ್ನು, ಹಣ್ಣುಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಸೇಬು ಹಣ್ಣು 200 ರೂ.ನಿಂದ 250 ರೂ.ವರೆಗೂ ಏರಿಕೆಯಾಗಿದೆ. ಎಲ್ಲಾ ಹಣ್ಣುಗಳ ಬೆಲೆಯಲ್ಲೂ 10-20 ರೂ.ವರೆಗೂ ಹೆಚ್ಚಾಗಿದೆ.