LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chamarajanagara

ಚಾಮರಾಜನಗರ ಜಿಲ್ಲೆಯಲ್ಲಿ 7,91,949 ಮತದಾರರು 

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ | ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಶ್ರೀರೂಪ ಅವರಿಂದ ಮಾಹಿತಿ



ಚಾಮರಾಜನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬAಧ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 7,91,949 ಮತದಾರರಿದ್ದಾರೆ. ಇವರಲ್ಲಿ 3,88,409 ಪುರುಷರು, 4,03,504 ಮಹಿಳೆಯರು ಇತರೆ 36 ಮಂದಿ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,01,425 ಪುರುಷರು, 1,01,241 ಮಹಿಳೆಯರು, ಇತರೆ ನಾಲ್ವರು ಸೇರಿ 2,02,670 ಮತದಾರರಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 95,752 ಪುರುಷರು, 1,00,323 ಮಹಿಳೆಯರು, ಇತರೆ 12 ಸೇರಿ 1,96,087 ಮತದಾರರಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 94,507 ಪುರುಷರು, 1,00,212 ಮಹಿಳೆಯರು, ಇತರೆ 11 ಸೇರಿ 1,94,730 ಮತದಾರರಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 96,725 ಪುರುಷರು, 1,01,728 ಮಹಿಳೆಯರು, ಇತರೆ 9 ಸೇರಿ 1,98,462 ಮತದಾರರಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ವದಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 4,30,786 ಪುರುಷರು, 4,49,390 ಮಹಿಳೆಯರು, ಇತರೆ 48 ಸೇರಿ 8,80,224 ಮತದಾರರಿದ್ದರು. ಹನೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,12,045 ಪುರುಷರು, 1,12,565 ಮಹಿಳೆಯರು, ಇತರೆ 6 ಸೇರಿ 2,24,616 ಮತದಾರರಿದ್ದರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,07,898 ಪುರುಷರು, 1,13,235 ಮಹಿಳೆಯರು, ಇತರೆ 18 ಸೇರಿ 2,21,151 ಮತದಾರರಿದ್ದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,05,541 ಪುರುಷರು, 1,12,297 ಮಹಿಳೆಯರು, ಇತರೆ 14 ಸೇರಿ 2,17,852 ಮತದಾರರಿದ್ದರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,05,302 ಪುರುಷರು, 1,11,293 ಮಹಿಳೆಯರು, ಇತರೆ 10 ಸೇರಿ 2,16,605 ಮತದಾರರಿದ್ದರು. ಎಸ್.ಐ.ಆರ್. ಪೂರ್ವದಲ್ಲಿ ಒಟ್ಟು 8,80,224 ಮತದಾರರಿದ್ದರು. ಎಸ್.ಐ.ಆರ್ ಗಣತಿ ನಮೂನೆ ಡಿಜಟಲೀಕರಣಗೊಂಡ ಒಟ್ಟು ಮತದಾರರ ಸಂಖ್ಯೆ 7,91,949 ಆಗಿದೆ. 2002ರ ಮತದಾರರ ಪಟ್ಟಿಯ ಮಾಹಿತಿ ಲಭ್ಯವಾಗದ ಮತದಾರರ ಸಂಖ್ಯೆ 276, ಮತದಾರರ ಸಲ್ಲಿಸಿರುವ 2002ರ ಮಾಹಿತಿ ವಿವರಗಳಲ್ಲಿ ವ್ಯತ್ಯಾಸವಿರುವ ಸಂಖ್ಯೆ 7,204 ಆಗಿದೆ. ಗಣತಿ ನಮೂನೆ ಡಿಜಿಟಲೀಕರಣ ಹಂತದಲ್ಲಿ ಗೈರು, ಸ್ಥಳಾಂತರ, ಮರಣ ಹೊಂದಿದವರು, ಎರಡು ಕಡೆ ನೊಂದಣಿಯಾಗಿರುವವರು, ಇತರೆ ಕಾರಣಗಳಿಂದ ಗುರುತಿಸಲಾದ ಒಟ್ಟು ಮತದಾರರ ಸಂಖ್ಯೆ 88,275 ಆಗಿದೆ. ಒಟ್ಟಾರೆ ಎಸ್.ಐ.ಆರ್ 2026ರ ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಸಂಖ್ಯೆ 7,91,949 ಆಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಕರಡು ಮತದಾರರ ಪಟ್ಟಿಯು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಪ್ರಚುರ ಪಡಿಸಲಾಗಿದೆ. ವೆಬ್ ಸೈಟ್ hಣಣಠಿs://ಛಿeo.ಞಚಿಡಿಟಿಚಿಣಚಿಞಚಿ.gov.iಟಿ  ಮತ್ತು  hಣಣಠಿs://ಛಿhಚಿmಡಿಚಿರಿಟಿಚಿgಚಿಡಿ.ಟಿiಛಿ.iಟಿ  ಗಳ ಮುಖಾಂತರವು ಕರಡು ಮತದಾರರ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು. ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರವರೆಗೆ ಸಾರ್ವಜನಿಕರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಈ ಅವಧಿಯಲ್ಲಿ ಸ್ವೀಕೃತವಾಗುವ ಹಕ್ಕು ಆಕ್ಷೇಪಣೆಗಳನ್ನು ಆಗಸ್ಟ್ 24 ರಿಂದ ಅಕ್ಟೋಬರ್ 22ರವರೆಗೆ ಸಂಬಂಧಿಸಿದ ಮತದಾರರ ನೊಂದಣಾಧಿಕಾರಿಗಳು ಇತ್ಯರ್ಥಪಡಿಸಲಿದ್ದಾರೆ ಎಂದರು. ಅರ್ಹ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿದ್ದಲ್ಲಿ ಸಂಬಂಧಿಸಿದ ಮತದಾರರು ನಮೂನೆ 6ರ ಅರ್ಜಿಯ ಜೊತೆ ಘೋಷಣಾ ಪತ್ರ ಹಾಗೂ ಅಗತ್ಯ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ಕೊಳ್ಳಬಹುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ನಮೂನೆ 6, ಎನ್.ಆರ್.ಐ ಮತದಾರರಿಗೆ ನೊಂದಾಯಿಸಲು ನಮೂನೆ 6ಎ, ಹೆಸರು ತೆಗೆದು ಹಾಕಲು ನಮೂನೆ 7, ತಿದ್ದುಪಡಿ ಸ್ಥಳಾಂತರ, ವಿಶೇಷಚೇತನ ಮತದಾರರ ಮಾರ್ಕಿಂಗ್, ಎಪಿಕ್ ಕಾರ್ಡ್ಗಳ ಬದಲಿಗಾಗಿ ನಮೂನೆ 8ರಲ್ಲಿ ಭರ್ತಿಮಾಡಿ ಸೂಕ್ತ ದಾಖಲಾತಿಗಳಿಗೆ ಸಂಬಂಧಪಟ್ಟ ಬಿಎಲ್‌ಒಗಳಿಗೆ ಸಲ್ಲಿಸಬಹುದಾಗಿದೆ. ನಮೂನೆಗಳನ್ನು ಆನ್‌ಲೈನ್ (ವೆಬ್ ಸೈಟ್ ವಿಳಾಸ ttps://voters.eci.gov.in  ) ಮತ್ತು ಮೊಬೈಲ್ ಆಪ್ ಇಅIಓಇಖಿ ಆಪ್ ಮೂಲಕವು ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಗಣತಿ ನಮೂನೆ ಗಣಕೀಕರಣ ಹಂತದಲ್ಲಿ 2002ರ ಮತದಾರರ ಪಟ್ಟಿಯ ಮ್ಯಾಪಿಂಗ್ ಆಗದಿರುವ ಹಾಗೂ ಮ್ಯಾಪಿಂಗ್ ಆಗಿರುವುದರಲ್ಲಿ ವ್ಯತ್ಯಾಸ ಕಂಡುಬAದಿರುವ (ಐogiಛಿಚಿಟ ಆisಛಿಡಿeಠಿಚಿಟಿಛಿಥಿ) ಮತದಾರರಿಗೆ ಕರಡು ಮತದಾರರ ಪಟ್ಟಿ ಪ್ರಕಟಣೆಯ ಸಂಬAಧಿಸಿದ ದಿನಾಂಕದಿAದ ನೋಟಿಸ್‌ಗಳನ್ನು ಜನರೇಟ್ ಮಾಡಿ, ಬಿ.ಎಲ್.ಒ ಮುಖಾಂತರ ಸಂಬAಧಿಸಿದ ಮತದಾರರಿಗೆ ಜಾರಿ ಮಾಡಿ ಸ್ವೀಕೃತಿ ಪಡೆಯಲಾಗುತ್ತದೆ. ಸದರಿ ಮತದಾರರು ವಿಚಾರಣೆಯ ದಿನಾಂಕದAದು ವಿಚಾರಣಾ ನೋಟೀಸ್‌ನಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಖುದ್ದು ಹಾಜರಾಗಿ, ಈ ಕೆಳಕಂಡ ದಾಖಲೆಗಳ ಪೈಕಿ, ಯಾವುದಾದರೊಂದು ದಾಖಲೆಯನ್ನು ಒದಗಿಸಬೇಕಾಗಿರುತ್ತದೆ.
ಕೇಂದ್ರ ಸರ್ಕಾರ /ರಾಜ್ಯ ಸರ್ಕಾರ /ಸಾರ್ವಜನಿಕ ವಲಯದ ಉದ್ಯಮದ ಖಾಯಂ ನೌಕರ ಅಥವಾ ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ (ಪಿಪಿಒ), ಭಾರತದಲ್ಲಿ 01.07.1987 ಕ್ಕಿಂತ ಮೊದಲು ಸರ್ಕಾರ, ಸ್ಥಳೀಯ ಪ್ರಾಧಿಕಾರ, ಬ್ಯಾಂಕ್, ಅಂಚೆ ಇಲಾಖೆ, ಭಾರತೀಯ ಜೀವ ವಿಮಾ ನಿಗಮ (ಎಲ್.ಐ.ಸಿ) ಅಥವಾ ಸಾರ್ವಜನಿಕ ವಲಯದ ಉದ್ಯಮಗಳಿಂದ ನೀಡಲಾದ ಯಾವುದೇ ಗುರುತಿನ ಚೀಟಿ, ಪ್ರಮಾಣಪತ್ರ ಅಥವಾ ದಾಖಲೆ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ, ಪಾಸ್ ಪೋರ್ಟ್, ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯದಿಂದ ನೀಡಲಾದ ಮೆಟ್ರಿಕ್ಯುಲೇಷನ್ ಅಥವಾ ಶೈಕ್ಷಣಿಕ ಪ್ರಮಾಣಪತ್ರ, ಖಾಯಂ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಒಬಿಸಿ/ ಪರಿಶಿಷ್ಟ ಜಾತಿ(ಎಸ್.ಸಿ) /ಪರಿಶಿಷ್ಟ ಪಂಗಡ (ಎಸ್.ಟಿ) ಅಥವಾ ಇತರೆ ಜಾತಿ ಪ್ರಮಾಣಪತ್ರ, ರಾಷ್ಟ್ರೀಯ ನಾಗರಿಕರ ನೋಂದಣಿ  (ಅಸ್ತಿತ್ವದಲ್ಲಿರುವ ಸ್ಥಳಗಳಲ್ಲಿ), ಯಾವುದೇ ಕಾನೂನುಬದ್ದ ಅಥವಾ ಆಡಳಿತಾತ್ಮಕ ನಿಯಮಗಳಡಿಯಲ್ಲಿ ಸರ್ಕಾರಿ ಅಧಿಕಾರಿಗಳು ನಿರ್ವಹಿಸುವ  ಸರ್ಕಾರದಿಂದ ನೀಡಲಾದ ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರ, ಆಧಾರ್ ಕಾರ್ಡನ್ನು ಗುರುತಿನ ಚೀಟಿಯ ದಾಖಲೆಯಾಗಿ ಮಾತ್ರ ಪರಿಗಣಿಸಲಾಗುತ್ತದೆ. ಆಧಾರ್ ಅನ್ನು ಜನ್ಮದಿನಾಂಕ ಮತ್ತು ಪೌರತ್ವ ದೃಢೀಕರಣವನ್ನಾಗಿ ಪರಿಗಣಿಸಲಾಗುವುದಿಲ್ಲ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಅಕ್ಟೋಬರ್ 27 ರಂದು ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST