LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕೋಮಲ್ ಕುಮಾರ್-ಸೋನಾಲ್ ಮೊಂತೆರೊ ಜೋಡಿಯ ಹಾಗೂ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ  ನಟಿಸಿರುವ “ರೋಲೆಕ್ಸ್” ಚಿತ್ರದ ಟೀಸರ್ ಬಿಡುಗಡೆ 


ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ  “ರೋಲೆಕ್ಸ್”  ಚಿತ್ರದ ಟೀಸರ್ ಬಿಡುಗಡೆಯಾಗಿದೆ ಕೋಮಲ್ ಗೆ ನಾಯಕಿಯಾಗಿ ಸೋನಲ್ ಮಾಂತೆರೊ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ.  ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ನವೀನ್ ಪಡೀಲ್, ರಾಣಾ ಸೇರಿದಂತೆ ಕಲಾವಿದರ ದಂಡೇ ಈ  ಚಿತ್ರದಲ್ಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಅವರೆ ಟೀಸರ್ ಬಿಡುಗಡೆ ಮಾಡಿದರು.  ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, ಇತ್ತೀಚೆಗೆ ಚಿತ್ರದ ಮೊದಲ ಕಾಪಿ ನೋಡಿ ನಿರ್ಮಾಪಕರು ಖುಷಿಪಟ್ಟರು. ನಿರ್ಮಾಪಕರು  ಖುಷಿಯಾದಾಗ ನಿರ್ದೇಶಕರ ಶ್ರಮ ಸಾರ್ಥ ಕವಾದ ಹಾಗೆ.  ನಟನೆಯ ಮೂಲಕ ಮೋಡಿ ಮಾಡಿರುವ ಕೋಮಲ್ ಕುಮಾರ್ ಅವರು ಇಡೀ ಚಿತ್ರವನ್ನು ಹೆಗಲ ಮೇಲೆ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ನಗೆ ಹಬ್ಬದ ರಸದೌತಣ ಉಣ ಬಡಿಸಲು ಕೋಮಲ್ ಸಜ್ಜಾಗಿದ್ದಾರೆ. ಕಾಮಿಡಿ ಮತ್ತು ಪ್ರೀತಿಯ ಕಥೆ ಹೊಂದಿದೆ. ನಟ ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ, ಹಸನ್ಮುಖಿ ಚೆಲುವೆ ಸೋನಾಲ್ ಮೊಂತೆರೊ ಬಂದ ನಂತರ ಚಿತ್ರಕ್ಕೆ ಮತ್ತಷ್ಟು ಕಳೆ ಬಂದಿತ್ತು. ಜೊತೆಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ” ರೋಲೆಕ್ಸ್ “ಮುಗ್ದ ಭಾವನಾತ್ಮಕ ಕೌಟಂಬಿಕ ಚಿತ್ರ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂದು ಹೇಳಿದರು. ನಟ ಕೋಮಲ್ ಮಾತನಾಡಿ, ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ. ನಾಲ್ಕೆöÊದು ಜನ ಬೇರೆ ಬೇರೆ ಚಿತ್ರ ಮಾಡುವ ಬದಲು ಒಂದೇ ಸಿನಿಮಾ ಮಾಡಿದರೆ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ. “ರೋಲೆಕ್ಸ್”  ಚಿತ್ರ ಚೆನ್ನಾಗಿ ಮೂಡಿಬಂದಿದೆ.  “ಮಿಸ್ಟರ್ ಗರಗಸ” ಚಿತ್ರದ ನಂತರ ಇಂತಹ ಕಥೆಗೆ ಹುಡುಕಾಟ ನಡೆಸುತ್ತಿದ್ದೆ. ಈಗ ಆ ರೀತಿಯ ಪಾತ್ರ ಸಿಕ್ಕಿದೆ. ನಿರ್ದೇಶಕ ಶ್ರೀನಿವಾಸ್ ಕಥೆಗೆ ಏನು ಬೇಕು ಅದನ್ನು ಮಾಡಿದ್ದಾರೆ ಎಂದರು. ನಟಿ ಸೋನಾಲ್ ಮೊಂತೆರೊ ಮಾತನಾಡಿ, ನಿರ್ಮಾಪಕರು ಇಡೀ ಚಿತ್ರೀಕರಣದ ಸಮಯದಲ್ಲಿ ಮಗಳ ರೀತಿ ನೋಡಿಕೊಂಡಿದ್ದಾರೆ. ಇಡೀ ತಂಡ ಕುಟುಂಬದ ರೀತಿ ಇತ್ತು. ಇದೇ ಮೊದಲ ಬಾರಿಗೆ ಕೋಮಲ್ ಕುಮಾರ್ ಅವರ ಜೊತೆ ನಟನೆ ಮಾಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ಕಲಿಕೆಗೆ ಸಹಕಾರಿಯಾಗಿದೆ. ಮತ್ತೆ ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.  ವಿನೋದ್ ಪ್ರಭಾಕರ್ ನನ್ನ ಅತ್ಯುತ್ತಮ ಸ್ನೇಹಿತರು. ಅವರ ಪಾತ್ರವೂ ಚೆನ್ನಾಗಿ ಬಂದಿದೆ.  ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು
ನಟ ವಿನೋದ್ ಪ್ರಭಾಕರ್ ಮಾತನಾಡಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರಮುಖ ಪಾತ್ರ. ನಾಯಕಿ ಸೋನಾಲ್ ಅವರ ಜೊತೆಗೆ ಮಾದೇವ ಚಿತ್ರದ ಆದ ನಂತರ “ರೋಲೆಕ್ಸ್”  ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಸೋನಾಲ್ ಮೊಂತೆರೊ ಅವರೆ ನನಗೆ ಅವಕಾಶ ಕೊಡಿಸಿದ್ದಾರೆ. ಇದು ಎಲ್ಲರನ್ನು ನೋಡಿಸಿಕೊಂಡು ಹೋಗುವ ಚಿತ್ರವಾಗಲಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು.ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಮಾತನಾಡಿ , ಲೈಟ್ ಬಾಯ್ ಯಿಂದ ನಿರ್ದೇಶಕರ ತನಕ ಎಲ್ಲ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸಿನಿಮಾಗೆ ಯಾವುದೇ ಭಾಷೆ, ಗಡಿ ಇಲ್ಲ.  ತೆಲುಗಿನಿಂದ ಬಂದು ಕನ್ನಡ ಸಿನಿಮಾ ಮಾಡಿದ್ದೇನೆ. ಆಂದ್ರಪ್ರದೇಶದಲ್ಲಿ ಡಾ. ರಾಜ್ ಕುಮಾರ್ ಅವರ ಚಿತ್ರಗಳು ಈ ಹಿಂದೆ ಪ್ರದರ್ಶನ ಕಂಡು ಹೆಸರು ಪಡೆದಿವೆ. ಈಗ ಡಬ್ಬಿಂಗ್ ಚಿತ್ರಗಳು ಎಲ್ಲಾ ಭಾಷೆಯಲ್ಲಿ  ಬಿಡುಗಡೆಯಾಗಿ ಯಶಸ್ಸು ಗಳಿಸುತ್ತಿವೆ.  ನಾಯಕನಾಗಿ ಚಿತ್ರರಂಗಕ್ಕೆ ಬಂದು ನಿರ್ಮಾಪಕನಾಗಿದ್ದೇನೆ. ಕಲಾವಿದರಿಗೆ ಇರುವ  ಜನಪ್ರಿಯತೆ ಬೇರೆ ಯಾರಿಗೂ ಇಲ್ಲ , ನಟ ಕೋಮಲ್ ಅವರ ಪಾತ್ರ ನೋಡಿ ಮೂಕ ವಿಸ್ಮಿತನಾಗಿದ್ದೇನೆ ಎಂದರು. ನಟಿ ಸೋನಲ್, ನನ್ನ ಮೂರನೇ ಮಗಳಿದ್ದಂತೆ. ಆಕೆಯೂ ಅಷ್ಟೇ ಪ್ರೀತಿ ತೋರುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರ ಪಾತ್ರವೂ ಚೆನ್ನಾಗಿದೆ.  ಸಸ್ಪೆನ್ಸ್, ಕಾಮಿಡಿ ಚಿತ್ರದಲ್ಲಿದ್ದು ಎಲ್ಲರಿಗೂ  ಮೆಚ್ಚುಗೆ ಆಗಲಿದೆ ಎಂದರುಕಾರ್ಯಕಾರಿ ನಿರ್ಮಾಪಕ ಮುರುಳಿ ಕೃಷ್ಣ ಮಾತನಾಡಿ, ನಂಬಿ ಬಂಡವಾಳ ಹೂಡಿದ ನಿರ್ಮಾಪಕರಿಗೆ ಬೆನ್ಮೆಲುಬಾಗಿ ನಿಂತಿದ್ದೇನೆ. ಸಿನಿಮಾ ಚೆನ್ನಾಗಿ ಬರಲು ಕಲಾವಿದರು, ತಂತ್ರಜ್ಞರ ಸಹಕಾರ ಕಾರಣ ಎಂದರು. ಕಲಾವಿದರಾದ ರಾಣಾ, ಸುನಂದ ಕಲಬುರಗಿ ಛಾಯಾಗ್ರಾಹಕ ರಾಕೇಶ್ ತಿಲಕ್, ಸಂಕಲನಕಾರ ಅರವಿಂದ ರೆಡ್ಡಿ , ಕ್ರಿಯೇಟಿವ್ ಹೆಡ್ ರಾಜೇಶ್ ವರ್ಮ ಸೇರಿದಂತೆ ಮತ್ತಿತರು ಚಿತ್ರದ ಕುರಿತು ಮಾಹಿತಿ ಹಂಚಿಕೊAಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST