LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮತ್ತೆ 2 ಅರ್ಜಿ ಸಲ್ಲಿಸಿದ  ಆರೋಪಿ, ನಟ ದರ್ಶನ್


ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ನಟ ದರ್ಶನ್ ಮತ್ತೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ.ಮಾಫಿ ಸಾಕ್ಷಿ ಪ್ರದೋಷ್‌ಗೆ ಎಸ್ಕಾರ್ಟ್ ಹಾಗೂ ಭೇಟಿ ಬಗ್ಗೆ ಒಂದು, ಮಾಫಿ ಸಾಕ್ಷಿ ವಿಚಾರಣೆ ಅನುಕ್ರಮದ ಬಗ್ಗೆ ಮತ್ತೊಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎಸ್ಕಾರ್ಟ್ ಹಾಗೂ ಪ್ರದೋಷ್ ಜೊತೆ ಇತರರ ಭೇಟಿಗೆ ಅವಕಾಶ ನೀಡದಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಬೆಂಗಾವಲು ಪಡೆಗೆ ಅಗತ್ಯ ಸಲಹೆ ಸೂಚನೆ ನೀಡುವಂತೆ ಕೋರಿ ನಟ ದರ್ಶನ್ ಪರ ವಕೀಲರಿಂದ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ನಡೆಸಿತು.ದರ್ಶನ್ ಅರ್ಜಿಗೆ ಪ್ರಾಸಿಕ್ಯೂಷನ್ ಎಸ್‌ಪಿಪಿ ಅವರು ಉತ್ತರಿಸಿದ್ದು, ನ್ಯಾಯಾಲಯ ದ ಆದೇಶದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಗೂ ಜೈಲು ಅಧಿಕಾರಿಗಳು ಸಿಎಆರ್ ಎಸ್ಕಾರ್ಟ್ನಲ್ಲಿ ಜೈಲಿನ ಬಸ್‌ನಲ್ಲಿ ಕರೆ ತಂದಿದ್ದಾರೆ. ಬಾಡಿ ಕ್ಯಾಮೆರಾ ಧರಿಸಿದ ಜೈಲು ಸಿಬ್ಬಂದಿ ಕೋರ್ಟ್ ಕರೆ ತರಲಾಗಿದೆ. ಪ್ರದೋಷ್ ಸುರಕ್ಷತೆ ಮತ್ತು ಭದ್ರತೆ ಸಲುವಾಗಿ ಕಾಮಾಕ್ಷಿಪಾಳ್ಯ ಇನ್ಸೆ÷್ಪಕ್ಟರ್ ಪೈಲಟ್ ಮಾಡಿದ್ದಾರೆ. ಪ್ರದೋಷ್ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಅಗತ್ಯ ಆದೇಶ ನೀಡಲು ಎಸ್‌ಪಿಪಿ ಮನವಿ ಮಾಡಿದರು. ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಈ ಬಗ್ಗೆ ಶನಿವಾರ ಕೋರ್ಟ್ ಆದೇಶ ನೀಡಲಿದೆ. ಅದೇ ರೀತಿ ಮಾಫಿ ಸಾಕ್ಷಿ ವಿಚಾರಣೆ ಸಂಬಂಧ ಮತ್ತೊಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎವಿಡೆನ್ಸ್ ಆಕ್ಟ್ ಸೆಕ್ಷನ್ 137, 138ರಡಿ ಅರ್ಜಿ ಎರಡನೇ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಸಮಯ ಕೇಳಿದ್ದಾರೆ. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೋವಿಂದರಾಜನಗರ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಪತ್ರಕರ್ತೆ ಪದ್ಮ ನಾಗರಾಜು ಕನ್ನಡ ಜಾನಪದ ಪರಿಷತ್ತಿನಿಂದ ಅಧಿಕೃತ ಆಹ್ವಾನಮತ್ತೆ 2 ಅರ್ಜಿ ಸಲ್ಲಿಸಿದ  ಆರೋಪಿ, ನಟ ದರ್ಶನ್ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಧರಣಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರಾಜಕೀಯ ಕೆಸರೆರಚಾಟರಾಜ್‌ಘಾಟ್‌ನಲ್ಲಿ ಗಾಂಧಿ ಸಮಾಧಿಗೆ ಪ್ರಧಾನಿ ಗೌರವಬಡ ಮಕ್ಕಳ ಶಿಕ್ಷಣಕ್ಕಾಗಿ ರೂ.30 ಕೋಟಿ ಮೌಲ್ಯದ 10 ಎಕರೆ ಭೂಮಿ ದಾನಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿನಗು-ಬದುಕಿನ ಮೌನ ಭಾಷೆ50 ಲಕ್ಷ ಮತದಾರರನ್ನು ಕೈಬಿಡುವ ಷಡ್ಯಂತ್ರದ ಆರೋಪ ಮಾಡಿರುವ ಸಿಎಂ ಡಿಕೆಶಿ ಅದನ್ನು ಸಾಬೀತು ಪಡಿಸಲಿ, ಇಲ್ಲವೇ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ ಆಗ್ರಹ