ಬೆಂಗಳೂರು: ವಿಧಾನಪರಿಷತ್‌ನಲ್ಲಿ ನಿಯಮಾವಳಿಯಂತೆ ಸಚಿವರು ಹಾಜರಾಗದೆ ಕೇವಲ ಮರ‍್ನಾಲ್ಕು ಮಂದಿ ಸಚಿವರು ಹಾಜರಿದ್ದು, ಅವರ ಹಾಜರಾತಿ ಸಮರ್ಪಕವಾಗಿ ಇಲ್ಲದಿದ್ದಕ್ಕೆ ಜೆಡಿಎಸ್‌ನ ಸದಸ್ಯ ಭೋಜೇಗೌಡ ಅವರು ಅಸಮಾಧಾನ ಹೊರ ಹಾಕಿದ ಘಟನೆ ನಡೆಯಿತು.
ನಿಯಮಾವಳಿಯಂತೆ 15 ಸಚಿವರು ಕಲಾಪದ ವೇಳೆಯಲ್ಲಿ ಹಾಜರಿರಬೇಕು. ಕೇವಲ ಮರ‍್ನಾಲ್ಕು ಮಂದಿ ಮಾತ್ರ ಹಾಜರಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಮಾತನಾಡಿದರು.
ನಂತರ ಸಭಾಪತಿಗಳು ಬೋಜೆಗೌಡರನ್ನು ಸಮಾಧಾನ ಪಡಿಸಿ ಮುಂದಕ್ಕೆ ಹೀಗಾಗಿ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.