LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban | Sports News

ಬೆಂಗಳೂರು ಓಪನ್: ಸೆಪ್ಟೆಂಬರ್ 22ರಿಂದ ಕೆಜಿಎನಲ್ಲಿ ಆರಂಭ


ಬೆಂಗಳೂರು: ಬೆಂಗಳೂರು ಓಪನ್ 2026 ಟೂರ್ನಿಯು ಇಂಡಿಯನ್ ಆಯಿಲ್ ಸಹಯೋಗದೊಂದಿಗೆ ಸೆಪ್ಟೆಂಬರ್ 22ರಿಂದ 25ರವರೆಗೆ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ) ಮೈದಾನದಲ್ಲಿ ನಡೆಯಲಿದೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ 1 ಕೋಟಿಯಾಗಿದೆ. ಐದನೇ ಆವೃತ್ತಿಗೆ ಮರಳಿರುವ ಬೆಂಗಳೂರು ಓಪನ್?ಗೆ ಇಂಡಿಯನ್ ಆಯಿಲ್ ಪ್ರಮುಖ ಸಹಯೋಗವಿದ್ದು, ಹಿಲ್ಟನ್ ಬೆಂಗಳೂರು ಎಂಬಸಿ ಗಾಲ್ಫ್ ಲಿಂಕ್ಸ್ ಮತ್ತು ಹಿಮಾಲಯನ್ ಈವೆಂಟ್ ಪಾಲುದಾರರಾಗಿವೆ. ಡಿಪಿ ವರ್ಲ್ಡ್‌  ಪಿಜಿಟಿಐನ ಅಂಬ್ರೆಲ್ಲಾ ಪಾಲುದಾರ ಡಿಪಿ ವರ್ಲ್ಡ್  ಹಾಗೂ ಆಕ್ಸಿಸ್ ಬ್ಯಾಂಕ್, ಅಮೂಲ್, ಎಚ್ಸಿಎಲ್, ಅಮೃತಾಂಜನ್ ಎನರ್ಲೆÊಟ್, ಏರ್ ಇಂಡಿಯಾ ಮಹಾರಾಜಾ ಕ್ಲಬ್, ಕಲ್ಯಾಣಿ, ಗಾಲ್ಫ್ ಪ್ಲಸ್ ಮಾಸಿಕ ಮತ್ತು ಗಾಲ್ಫ್ ಡಿಸೈನ್ ಇಂಡಿಯಾ ಟೂರ್ ಪಾಲುದಾರರಾಗಿವೆ. ಈ ಬಾರಿಯ ಟೂರ್ನಿಯಲ್ಲಿ 132 ಗಾಲ್ಫ್ ಆಟಗಾರರು ಪಾಲ್ಗೊಳ್ಳಲಿದ್ದು, ಇವರಲ್ಲಿ 131 ವೃತ್ತಿಪರರು ಹಾಗೂ ಒಬ್ಬ ಹವ್ಯಾಸಿ ಆಟಗಾರರಿದ್ದಾರೆ. ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ನ ಅಗ್ರಸ್ಥಾನಿ ಸಪ್ತಕ್ ತಲ್ವಾರ್, ಹನಿ ಬೈಸೋಯಾ, ವೀರ್ ಅಹ್ಲಾವತ್, ಅಕ್ಷಯ್ ಶರ್ಮಾ, ರಶೀದ್ ಖಾನ್ ಮತ್ತು ಖಲೀನ್ ಜೋಶಿ ಸೇರಿದಂತೆ ಭಾರತದ ಪ್ರಮುಖ ವೃತ್ತಿಪರ ಗಾಲ್ಫ್ ಆಟಗಾರರು ಸ್ಪರ್ಧಿಸಲಿದ್ದಾರೆ.ಬೆಂಗಳೂರು ಓಪನ್‌ನಲ್ಲಿ ಭಾಗವಹಿಸುತ್ತಿರುವ ಸಪ್ತಕ್ ತಲ್ವಾರ್ ಮತ್ತು ವೀರ್ ಅಹ್ಲಾವತ್ ಮುಂದಿನ ವಾರ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನ ಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ವರ್ಷದ ಡಿಪಿ ವರ್ಲ್್ಡ ಪಿಜಿಟಿಐ ಆರ್ಡರ್ ಆಫ್ ಮೆರಿಟ್ ಚಾಂಪಿಯನ್ ಯುವರಾಜ್ ಸಂಧು ಕೂಡ ಭಾರತ ತಂಡದ ಭಾಗವಾಗಿದ್ದಾರೆ.
ಸ್ಥಳೀಯ ಆಟಗಾರ ಖಲೀನ್ ಜೋಶಿ ಸೇರಿದಂತೆ ಬೆಂಗಳೂರಿನ ಪ್ರಮುಖ ವೃತ್ತಿಪರ ಗಾಲ್ಫ್ ಆಟಗಾರರಾದ ಚಿಕ್ಕರಂಗಪ್ಪ ಎಸ್., ಅಕ್ಷಯ್ ನೆರಂಜನ್, ಮನೋಜ್ ಎಸ್., ಮಾರಿ ಮುತ್ತು ಆರ್. ಮತ್ತು ವರುಣ್ ಮುತ್ತಪ್ಪ ಸ್ಪರ್ಧಿಸಲಿದ್ದಾರೆ. ಸ್ಥಳೀಯ ಹವ್ಯಾಸಿ ಆಟಗಾರರಾಗಿ ತನಿಶ್ ಆರ್. ಗೌಡ ಕಣಕ್ಕಿಳಿಯಲಿದ್ದಾರೆ.
ವಿದೇಶಿ ಆಟಗಾರರ ಪೈಕಿ ಶ್ರೀಲಂಕಾದ ಎನ್. ಥಂಗರಾಜಾ ಮತ್ತು ಮಿಥುನ್ ಪೆರೇರಾ, ಥಾಯ್ಲೆಂಡ್ನ ತನಪತ್ ಪಿಚೈಕುಲ್, ಜೆಕ್ ಗಣರಾಜ್ಯದ ಸ್ಟೆಪನ್ ಡ್ಯಾನೆಕ್, ನೇಪಾಳದ ಸುಭಾಷ್ ತಮಾಂಗ್, ಬಾಂಗ್ಲಾದೇಶದ ಎಂ.ಡಿ. ಅಕ್ಬರ್ ಹೊಸೈನ್, ಉಗಾಂಡಾದ ಜೋಶುವಾ ಸೀಲ್, ಜಪಾನ್ನ ಕೊಯಿಚಿರೊ ಇಶಿಕಾ ಮತ್ತು ತೈಗಾ ತನಕಾ, ಅಮೆರಿಕದ ಕೊಯಿಚಿರೊ ಸಾಟೊ ಮತ್ತು ಡೊಮಿನಿಕ್ ಪಿಕ್ಕಿರಿಲ್ಲೊ, ದಕ್ಷಿಣ ಆಫ್ರಿಕಾದ ಗೆರ್ಹಾರ್ಡಸ್ ಜಾಕೋಬಸ್ ಪೆಪ್ಲರ್, ಐರ್ಲೆಂಡ್ನ ಡೆಕ್ಲನ್ ಕೆನ್ನಿ ಹಾಗೂ ಕೆನಡಾದ ಸುಖರಾಜ್ ಸಿಂಗ್ ಗಿಲ್ ಪ್ರಮುಖರಾಗಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST