LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

BJP ವಿರುದ್ಧ ಅಮೆರಿಕ ಅಸಮಾಧಾನ

ವಾಷಿಂಗ್ಟನ್: ಭಾರತದಲ್ಲಿ ಅಸ್ಥಿರತೆಗೆ ಯತ್ನಿಸುತ್ತಿವೆ ಎಂಬ ಬಿಜೆಪಿ ಆರೋಪಗಳನ್ನು ನಿರಾಕರಿಸಿರುವ ಅಮೆರಿಕ ಇಂತಹ ಆರೋಪಗಳು ಬೇಸರತರಿಸುವಂತಿವೆ ಎಂದು ಹೇಳಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದಿಂದ ದೇಣಿಗೆ ಪಡೆಯುವ ಸಂಘಟನೆಗಳು ಹಾಗೂ ಅಮೆರಿಕದಲ್ಲಿ ಸರ್ಕಾರದ ಹೊರತಾಗಿದ್ದೂ ಅಧಿಕಾರದ ಮೇಲೆ ನಿಯಂತ್ರಣ ಇರುವ ಕೂಟಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಗುರಿಯಾಗಿಸಿಕೊಂಡು, ಭಾರತದಲ್ಲಿ ಅಸ್ಥಿರತೆ ಮೂಡಿಸುವ ಯತ್ನಗಳ ಹಿಂದೆ ಇವೆ ಎಂದು ಬಿಜೆಪಿ ಮಾಡಿರುವ ಆರೋಪವನ್ನು ಅಮೆರಿಕ  ಅಲ್ಲಗಳೆದಿದೆ.

ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಅಮೆರಿಕ ವಿರುದ್ಧದ ಆರೋಪಗಳು ‘ಬೇಸರ ತರಿಸುವಂತಿವೆ. ಅಮೆರಿಕದ ಸರ್ಕಾರವು ವಿಶ್ವದ ಎಲ್ಲೆಡೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುತ್ತ ಬಂದಿದೆ. ಭಾರತದ ಆಡಳಿತಾರೂಢ ಪಕ್ಷವು ಇಂತಹ ಆರೋಪಗಳನ್ನು ಮಾಡುತ್ತದೆ ಎಂಬುದು ಬೇಸರ ಮೂಡಿಸುವಂತಹ ಸಂಗತಿ.

ಪತ್ರಕರ್ತರ ಸಾಮರ್ಥ್ಯ ವೃದ್ಧಿ, ವೃತ್ತಿಪರತೆಯ ಬೆಳವಣಿಗೆಗೆ ನೆರವಾಗುವ ಕಾರ್ಯಕ್ರಮಗಳ ವಿಚಾರವಾಗಿ ಅಮೆರಿಕದ ಸರ್ಕಾರವು ಸ್ವತಂತ್ರವಾದ ಸಂಘಟನೆಗಳ ಜೊತೆ ಕೆಲಸ ಮಾಡುತ್ತದೆ. ಆದರೆ, ಈ ಕಾರ್ಯಕ್ರಮಗಳು ಸಂಪಾದಕೀಯ ತೀರ್ಮಾನದ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ಇಂತಹ ಸಂಘಟನೆಗಳ ನಡೆ ಏನಿರಬೇಕು ಎಂಬುದರ ಮೇಲೆ ಪ್ರಭಾವ ಉಂಟುಮಾಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಸರ್ಕಾರದ ಹೊರತಾಗಿದ್ದೂ ಅಧಿಕಾರದ ಮೇಲೆ ನಿಯಂತ್ರಣ ಇರುವ ಕೂಟಗಳು (ಡೀಪ್‌ ಸ್ಟೇಟ್) ಭಾರತದ ಪ್ರತಿಷ್ಠೆಗೆ ಧಕ್ಕೆ ತರಲು, ಒಸಿಸಿಆರ್‌ಪಿ (ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆ) ಮಾಧ್ಯಮ ಪೋರ್ಟಲ್‌ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೊತೆ ಕೈಜೋಡಿಸಿವೆ ಎಂದು ಬಿಜೆಪಿಯು ಗುರುವಾರ ಆರೋಪಿಸಿತ್ತು. ಅಲ್ಲದೆ ಒಸಿಸಿಆರ್‌ಪಿ ವರದಿಗಳನ್ನು ಬಳಸಿ ರಾಹುಲ್ ಅವರು ಅದಾನಿ ಸಮೂಹದ ಮೇಲೆ ವಾಗ್ದಾಳಿ ನಡೆಸುವುದನ್ನು, ಸಮೂಹವು ಕೇಂದ್ರ ಸರ್ಕಾರಕ್ಕೆ ಹತ್ತಿರವಾಗಿದೆ ಎಂದು ಆರೋಪಿಸುವುದನ್ನು ಬಿಜೆಪಿಯು ಉಲ್ಲೇಖಿಸಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು