ಸಿದ್ದು ಪೂರ್ಣಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ವಿಶಿಷ್ಟ ಕಥಾನಕದ ಚಿತ್ರ `ಬ್ರಹ್ಮಕಮಲ’. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೆöÊಲರ್ ಮೂಲಕ ಈ ಚಿತ್ರ ಚರ್ಚೆಗೆ ಗ್ರಾಸವಾಗಿತ್ತು. ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಉಸಿರುಗಟ್ಟಿದ ಹೆಣ್ಣೊಬ್ಬಳ ಸೂಕ್ಷ್ಮ ಕಥಾನಕದ ಸುಳಿವಿನೊಂದಿಗೆ ಬ್ರಹ್ಮಕಮಲ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಚಿತ್ರ ಇದೇ ಆಗಸ್ಟ್ 21ರಂದು, ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದೇ ತೆರೆಗಾಣಲಿದೆ.
ದಾರಿ ಯಾವುದಯ್ಯ ವೈಕುಂಟಕೆ ಚಿತ್ರದ ಮೂಲಕ ಸಿದ್ದು ಪೂರ್ಣ ಚಂದ್ರ ನಿರ್ದೇಶಕರಾಗಿ ಗಮನ ಸೆಳೆದಿದ್ದರು. ಆ ಮೂಲಕ ಭರವಸೆಯ ನಿರ್ದೇಶಕರಾಗಿಯೂ ನೆಲೆ ಕಂಡುಕೊAಡಿದ್ದ ಅವರ ಮತ್ತೊಂದು ಕನಸು ಬ್ರಹ್ಮ ಕಮಲ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಅತೀವವಾದ ಗೌರವಯುತ ಸ್ಥಾನಮಾನವಿದೆ. ಆದರೆ, ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಅದೇ ಹೆಣ್ಣು ಜೀವಗಳ ನೋವಿನ ಕಥೆಗಳೂ ಹೂತು ಹೋಗಿವೆ. ಅಂಥಾದ್ದೊಂದು ಮನ ಮಿಡಿಯುವ ಕಥೆಯನ್ನು ಸಿದ್ದು ಪೂರ್ಣಚಂದ್ರ ಬ್ರಹ್ಮ ಕಮಲದ ಮೂಲಕ ದೃಶ್ಯವಾಗಿಸಿದ್ದಾರೆ. ಅದು ಪ್ರೇಕ್ಷಕರ ಮುಂದೆ ಬರಲು ದಿನಗಣನೆ ಆರಂಭವಾಗಿದೆ.
ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿರುವ ಈ ಸಿನಿಮಾ ಪೂರ್ಣ ಚಂದ್ರ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪು ಸಂಕಲನ, ನಾಗರತ್ನ ಕೆ.ಹೆಚ್ ನಿರ್ಮಾಣ ನಿರ್ವಹಣೆಯಲ್ಲಿ ಬ್ರಹ್ಮಕಮಲ ರೂಪುಗೊಂಡಿದೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ.