LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಬೆಂಗಳೂರಿಗೆ ಯುಗೆನಿಕ್ಸ್ ಹೇರ್ ಸೈನ್ಸಸ್ ಲಗ್ಗೆ: ನೂತನ ಕೇಂದ್ರ ಉದ್ಘಾಟಿಸಿದ ಸಿಎಂ ಡಿಕೆಶಿ


ಬೆಂಗಳೂರು: ಭಾರತದ ಪ್ರಮುಖ ಮತ್ತು ಅತ್ಯಂತ ನಂಬಿಕಸ್ಥ ಕೂದಲು ಕಸಿ (ಹೇರ್ ರಿಸ್ಟೋರೇಶನ್) ಸಂಸ್ಥೆಗಳಲ್ಲಿ ಒಂದಾದ ‘ಯುಗೆನಿಕ್ಸ್ ಹೇರ್ ಸೈನ್ಸಸ್’  ತನ್ನ ನೂತನ ಮತ್ತು ಅತ್ಯಾಧುನಿಕ ಕೇಂದ್ರವನ್ನು ಬೆಂಗಳೂರಿನ ಇಂದಿರಾನಗರದಲ್ಲಿ ಆರಂಭಿಸಿದೆ.
ಮುಖ್ಯಮAತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರು ಈ ನೂತನ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ನೂತನ ಕೇಂದ್ರವು ಅತ್ಯಾಧುನಿಕ ವೈದ್ಯಕೀಯ ಮೂಲಸೌಕರ್ಯ ಹಾಗೂ ಅನುಭವಿ ವೈದ್ಯರ ನೇತೃತ್ವದಲ್ಲಿ ಜಾಗತಿಕ ಮಟ್ಟದ ಚಿಕಿತ್ಸೆಯನ್ನು ಬೆಂಗಳೂರಿನ ಜನತೆಗೆ ಒದಗಿಸಲಿದೆ.ಬೆಂಗಳೂರಿನ ದೊಂಬಲೂರಿನ 100 ಫೀಟ್ ರಸ್ತೆಯಲ್ಲಿರುವ `ಫೆದರ್ ವ್ಯಾಂಟೇಜ್’ ಕಟ್ಟಡದಲ್ಲಿ ಈ ನೂತನ ಕೇಂದ್ರ ಸ್ಥಾಪಿತಗೊಂಡಿದೆ. 6,000 ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಸುಸಜ್ಜಿತ ಕೇಂದ್ರದಲ್ಲಿ 6 ಶಸ್ತçಚಿಕಿತ್ಸಾ ಕೊಠಡಿಗಳು ಇವೆ. ಗುರುಗ್ರಾಮ, ಮುಂಬೈ, ಹೈದರಾಬಾದ್ ಮತ್ತು ಭುವನೇಶ್ವರ ನಂತರ ದೇಶದಲ್ಲಿ ಆರಂಭವಾಗುತ್ತಿರುವ ಯುಗೆನಿಕ್ಸ್ನ 5ನೇ ಕೇಂದ್ರ ಇದಾಗಿದೆ.ಮೆಡಿಕಲ್ ಟೂರಿಸಂಗೆ ಹೆಚ್ಚಿನ ಉತ್ತೇಜನ: ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, “ಬೆಂಗಳೂರು ಐಟಿ, ಬಿಟಿ, ಬಾಹ್ಯಾಕಾಶ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಯುಗೆನಿಕ್ಸ್ ಸಂಸ್ಥೆಯು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ದೇಶ-ವಿದೇಶಗಳ ರೋಗಿಗಳನ್ನು ಬೆಂಗಳೂರಿನತ್ತ ಆಕರ್ಷಿಸುತ್ತಿರುವುದು ಶ್ಲಾಘನೀಯ. ಡಾ. ಪ್ರದೀಪ್, ಡಾ. ಅರಿಕಾ ಹಾಗೂ ಅವರ ಇಡೀ ತಂಡಕ್ಕೆ ನನ್ನ ಶುಭ ಹಾರೈಕೆಗಳು” ಎಂದರು.
ವೈದ್ಯರ ನೇತೃತ್ವದ ವೈಜ್ಞಾನಿಕ ಚಿಕಿತ್ಸೆ: ದೆಹಲಿಯ ಏಮ್ಸ್ ನಿಕಟಪೂರ್ವ ವಿದ್ಯಾರ್ಥಿಗಳಾದ ಡಾ. ಪ್ರದೀಪ್ ಸೇಠಿ ಮತ್ತು ಡಾ. ಅರಿಕಾ ಬನ್ಸಾಲ್ ಅವರು ಸುಮಾರು ಎರಡು ದಶಕಗಳ ಹಿಂದೆ ಹೃಷಿಕೇಶದಲ್ಲಿ ಯುಗೆನಿಕ್ಸ್ ಸಂಸ್ಥೆಯನ್ನು ಪ್ರಾರಂಭಿಸಿದ್ದರು.
ಸಂಸ್ಥೆಯ ಸಹ-ಸಂಸ್ಥಾಪಕ ಡಾ. ಪ್ರದೀಪ್ ಸೇಠಿ ಮಾತನಾಡಿ, “ಹೃಷಿಕೇಶದ ಸಣ್ಣ ಬೇಸ್‌ಮೆಂಟ್‌ನಲ್ಲಿ ಆರಂಭವಾದ ನಮ್ಮ ಪಯಣ ಇಂದು ಬೆಂಗಳೂರಿಗೆ ತಲುಪಿರುವುದು ಅತ್ಯಂತ ಹೆಮ್ಮೆಯ ವಿಷಯ. ಬೆಂಗಳೂರು ತಂತ್ರಜ್ಞಾನ ಮತ್ತು ನಾವೀನ್ಯತೆಯ ನಗರವಾಗಿದ್ದು, ಇಲ್ಲಿನ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದರು.ಮತ್ತೊಬ್ಬ ಸಹ-ಸಂಸ್ಥಾಪಕಿ ಡಾ. ಅರಿಕಾ ಬನ್ಸಾಲ್ ಮಾತನಾಡಿ, “ಬೆಂಗಳೂರಿನ ಅನೇಕ ರೋಗಿಗಳು ಚಿಕಿತ್ಸೆಗಾಗಿ ನಮ್ಮ ಇತರ ನಗರಗಳ ಕೇಂದ್ರಗಳಿಗೆ ಪ್ರಯಾಣಿಸುತ್ತಿದ್ದರು. ಈಗ ಅವರ ಬಾಗಿಲಲ್ಲೇ ಜಾಗತಿಕ ದರ್ಜೆಯ ಚಿಕಿತ್ಸೆ ಸಿಗುವಂತಾಗಿದೆ” ಎಂದು ತಿಳಿಸಿದರು.ಉದ್ಘಾಟನೆಯ ಅಂಗವಾಗಿ ಪದ್ಮಶ್ರೀ ಪುರಸ್ಕöÈತ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ಮರಳು ಶಿಲ್ಪಕಲೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ತೆಲಂಗಾಣದ ಸಚಿವರಾದ ಮೊಹಮ್ಮದ್ ಅಜರುದ್ದೀನ್, ಕರ್ನಾಟಕದ ಸಚಿವರಾದ ಡಾ. ಅಜಯ್ ಧರಮ್ ಸಿಂಗ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿದ್ದರು.ಯುಗೆನಿಕ್ಸ್ ಬಗ್ಗೆ: ಯುಗೆನಿಕ್ಸ್ ಹೇರ್ ಸೈನ್ಸಸ್ ಕಳೆದ 15 ವರ್ಷಗಳಲ್ಲಿ 22,000ಕ್ಕೂ ಹೆಚ್ಚು ಯಶಸ್ವಿ ಕೂದಲು ಕಸಿ ಚಿಕಿತ್ಸೆಗಳನ್ನು ಪೂರ್ಣಗೊಳಿಸಿದೆ. ಸಂಸ್ಥೆಯು ಅಭಿವೃದ್ಧಿಪಡಿಸಿದ ಡೈರೆಕ್ಟ್ ಹೇರ್ ಟ್ರಾನ್ಸ್ಪ್ಲಾಂಟೇಶನ್  ವಿಧಾನವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಇಲ್ಲಿ ಕೇವಲ ತಂತ್ರಜ್ಞರಷ್ಟೇ ಅಲ್ಲದೆ, ಅನುಭವಿ ವೈದ್ಯರೇ ಮುಂಚೂಣಿಯಲ್ಲಿ ನಿಂತು ಪ್ರತಿಯೊಂದು ಹಂತದಲ್ಲೂ ಚಿಕಿತ್ಸೆಯನ್ನು ನಿರ್ವಹಿಸುವುದು ಈ ಸಂಸ್ಥೆಯ ವಿಶೇಷತೆಯಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST