LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಸ್ನೇಹಿತರಿಂದಲೇ ವಂಚನೆ

ಬೆಂಗಳೂರು: ಸ್ನೇಹದ ಹೆಸರಿನಲ್ಲಿ ಮೋಸ ಹೋದ ಘಟನೆಯೊಂದು ನಗರದಲ್ಲಿ ನಡೆದಿದ್ದು,ನಿನ್ನ ಖಾಸಗಿ ಪೋಟೋ ನಮ್ಮ ಬಳಿ ಇದೆ ಎಂದು ಸುಳ್ಳು ಹೇಳಿ ಗೆಳೆಯನಿಂದಲೇ ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡಿರುವ ಘಟನೆ ನಡೆದಿದೆ.

ಗೆಳೆಯನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಅಣ್ಣ-ತಮ್ಮ ಸುಳ್ಳಿನ ಜಾಲ ಬೀಸಿ ವಿಶ್ವಾಸ ದ್ರೋಹ ಬಗೆದು ಹಣ ಲೂಟಿ ಮಾಡಿದ್ದಾರೆ. ನಿನ್ನ ಖಾಸಗಿ ಫೋಟೋಸ್ ಇದೆ ಎಂದು ಗೆಳೆಯನ ಬಳಿಯೇ ಲಕ್ಷಲಕ್ಷ ವಸೂಲಿ ಮಾಡಿದ್ದಾರೆ. ಸ್ನೇಹಿತರ ಮಾತು ನಂಬಿ ಬರೋಬ್ಬರಿ 65 ಲಕ್ಷ ಹಣ ಕಳೆದುಕೊಂಡು ಯುವಕ ಕಂಗಾಲಾಗಿದ್ದಾನೆ. ಸ್ನೇಹಿತರ ವಿಶ್ವಾಸ ದ್ರೋಹ ಹಾಗೂ ವಂಚನೆ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಮೂಲದ ಟೆಕ್ಕಿಯೋರ್ವನ ಜೊತೆ ಸುಮಾರು 18 ವರ್ಷಗಳ ಸ್ನೇಹ ಹೊಂದಿದ್ದ ಅಕ್ಷಯ್ ಕುಮಾರ್ ಹಾಗೂ ಭರತ್ ಎಂಬ ಅಣ್ಣ-ತಪ್ಪ ಮೋಸ ಮಾಡಿದ್ದಾರೆ. ಬಿಟಿಎಂ ಲೇಔಟ್ ಮೂಲದ ಸಹೋದರರು ತಮ್ಮ ಹಳೆಯ ಸ್ನೇಹವನ್ನೇ ದುರುಪಯೋಗ ಪಡಿಸಿಕೊಂಡಿದ್ದಾರೆ. ಸ್ನೇಹಿತ ಒಳ್ಳೆಯ ಕೆಲಸದಲ್ಲಿದ್ದಾನೆ ಎಂದು ಹಣ ವಸೂಲಿ ಮಾಡಿದ್ದಾರೆ. ಅಪರಿಚಿತ ವ್ಯಕ್ತಿ ಬಳಿ ನಿನ್ನ ಖಾಸಗಿ ಫೋಟೋಗಳಿವೆ.

ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸುತ್ತಿದ್ದಾನೆ. ಅವನಿಗೆ ಅರ್ಜೆಂಟಾಗಿ 12 ಲಕ್ಷ ಕೊಡಬೇಕು ಅಂತಾ ನಂಬಿಸಿದ್ದಾರೆ. ಸ್ನೇಹಿತ ನನ್ನ ಒಳ್ಳೆಯದಕ್ಕಾಗಿ ಹೇಳುತ್ತಿದ್ದಾನೆ ಎಂದು ನಂಬಿದ ಟೆಕ್ಕಿ ಹಣ ಕೊಟ್ಟಿದ್ದಾನೆ. ಹೀಗೆ ಪದೇ ಪದೇ ಹಣ ಪಡೆದು ದೋಖಾ ಮಾಡಿದ್ದಾರೆ.

ಸ್ನೇಹಿತರು ಹೇಳುತ್ತಿರುವುದು ನಿಜ ಎಂದು ನಂಬಿ ಮೋಸ ಹೋದ ಟೆಕ್ಕಿ, ಮನೆಯವರು, ಬ್ಯಾಂಕ್ ಲೋನ್ ಮಾಡಿ ಹಣ ಕೊಟ್ಟಿದ್ದ. ಆದರೆ ಕೊನೆಗೆ ಸ್ನೇಹಿತರಿಬ್ಬರ ಕಳ್ಳಾಟ ಬಯಲಾಗಿದೆ. ಸ್ನೇಹಿತರ ಮಕ್ಮಲ್ ಟೋಪಿ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಣ್ಣ ತಮ್ಮನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು