LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಬನ್ನಿ... ಜಾನಪದ ಉಳಿಯಲಿ ಕಲೆಗಳು ಚಿರನೂತನವಾಗಲಿ

ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಅಧ್ಯಕ್ಷೀಯ ನುಡಿ


ಕನ್ನಡ ಜಾನಪದ ಪರಿಷತ್ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಜಿ.ವೈ.ಪದ್ಮನಾಗರಾಜು ಅವರ ನುಡಿ, ಗೌರವಾನ್ವಿತ ವೇದಿಕೆಯ ಮೇಲಿರುವ ಗಣ್ಯರೇ, ಕನ್ನಡ ಜಾನಪದ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳೇ ನಾಡಿನ ಹಿರಿಯ-ಉದಯೋನ್ಮುಖ ಸಾಹಿತಿಗಳೇ, ಜಾನಪದ ಕಲಾವಿದರೇ, ಸಂಶೋಧಕರೇ, ತಾಯಂದಿರೇ, ಅಕ್ಕ-ತಂಗೀಯರೇ ಹಾಗೂ ನನ್ನನ್ನು ಪ್ರೀತಿಯಿಂದ ಆಶೀರ್ವದಿಸಲು ಬಂದ ಕನ್ನಡ ಬಂಧುಗಳೇ ಎಲ್ಲರಿಗೂ ಅಭಿಮಾನದ ಅಭಿನಂದನದ ಹೃತ್ಪೂರ್ವಕ ನಮಸ್ಕಾರಗಳೂ.
ಅಕ್ಟೋಬರ್ ಏಳನೇಯ ತಾರೀಖು 2026 ಬುಧವಾರ ದಂದು ಪ್ರಥಮ ಕನ್ನಡ ಜಾನಪದ ಪರಿಷತ್ ಸಮ್ಮೇಳನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕಕ್ಕೆ ಸಮ್ಮೇಳನಾಧ್ಯಕ್ಷೆಯಾಗಿ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿ, ಕನ್ನಡ ನಾಡಿನ ಜಾನಪದ ಪರಂಪರೆಯನ್ನ ಒಡಲಾಳದ ಅನಿಸಿಕೆಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಅವಕಾಶ ನೀಡಿರುವುದು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿಯಾಗಿದೆ.
ಈ ಗೌರವ ಸಂಭ್ರಮ ನನ್ನೊಬ್ಬಳಿಗೆ ಸಲ್ಲುವ ಗೌರವವಲ್ಲ, ಇದು ನಮ್ಮ ಪೂರ್ವಜರು, 1231 ಕೋಟಿ ಭಾರತಿಯರಲ್ಲಿ 83.3 ಕೋಟಿ (2011) ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವವರೆಲ್ಲರಿಗೂ ಸಲ್ಲುತ್ತದೆ. ಅಷ್ಟೇ ಅಲ್ಲದೆ, ತಲೆತಲಾಂತರಗಳಿAದ ನಮ್ಮ ಸಮಗ್ರ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಸಮಸ್ತರಿಗೂ ಸಲ್ಲುವ ಗೌರವ ಎಂದು ನಾನು ಭಾವಿಸುತ್ತೇನೆ.
“ಜೈ ಜಾನಪದ ಎನ್ನೋಣ ಜನಪದರಾಗಿ ಎಲ್ಲರೂ ಬಾಳೋಣ ಹೊನ್ನ ತೇರು ಎಳೆಯೋಣ” ಎನ್ನುವ ಘೋಷವಾಕ್ಯವನ್ನು ತಮ್ಮೆಲ್ಲರ ಮುಂದೆ ಜೋರು ಧ್ವನಿಯಲ್ಲಿ ಹೇಳುತ್ತಾ, ಸಾಂಸ್ಕೃತಿಕ ಹಬ್ಬ, ಜಾನಪದ ಸೊಗಡಿನ ಹಬ್ಬ, ಮೂಲ ಸಂಸ್ಕೃತಿಯ ಅನಾವರಣದ ಹಬ್ಬಕ್ಕೆ, ಜಾನಪದ ಸಮ್ಮೇಳನಕ್ಕೆ ಸ್ವಾಗತ ಸುಸ್ವಾಗತ. ನಾನು ನಿಮ್ಮ ಡಾ.ಜಿ.ವೈ ಪದ್ಮನಾಗರಾಜು ಇಂದು ಸಂಜೆ ಪತ್ರಿಕೆಯ ಮೂಲಕ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸದಾ ಕಾಳಜಿ ವಹಿಸುತ್ತಾ, ನಾಡು,ನುಡಿ,ಸಂಸ್ಕೃತಿ,ಪರAಪರೆ ಮತ್ತು ಆರೋಗ್ಯ, ಶಿಕ್ಷಣ, ಪರಿಸರ, ಕಲೆ ಹಾಗೂ ಜನಪದದ ಬಗ್ಗೆ ಅಪಾರ ಕಾಳಜಿಯಿಂದ ಕ್ರಿಯಾತ್ಮಕತೆಯಿಂದ ಕೆಲಸ ಮಾಡಿಕೊಂಡು ಬಂದಿರುತ್ತೇನೆ ಹಾಗೂ ಕೃತಿ ರಚನೆಯಲ್ಲೂ ತೊಡಗಿರುತ್ತೇನೆ. ಗುರು ಹಿರಿಯರು ನಡೆದ ದಾರಿಯನ್ನೇ ಅನುಸರಿಸಿಕೊಂಡು ಬಂದ ನನ್ನನ್ನು ಸಮಾಜ ಇಂದು ಗೌರವಿಸಿ ಇಂತಹ ಅಧ್ಬುತವಾದ ಸ್ಥಾನವನ್ನು ಕೊಟ್ಟಿದೆ. ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಸ್ಥಾನವನ್ನು ನನಗೆ ನೀಡಿರುವುದು ನನ್ನ ಸೌಭಾಗ್ಯ ಇದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು.
ಜಾನಪದ ಎಂದರೆ ನಮ್ಮ ಬದುಕು
ಜಾನಪದ ಎಂದರೆ ಕೇವಲ ಹಾಡು, ನೃತ್ಯ ಅಥವಾ ಮನರಂಜನೆಯಲ್ಲ.
ಜಾನಪದ ಎಂದರೆ ನಮ್ಮ ನೆಲದ ನೆನಪು.
ಜಾನಪದ ಎಂದರೆ ನಮ್ಮ ಜನರ ಬದುಕು.
ಜಾನಪದ ಎಂದರೆ ನಮ್ಮ ತಾಯಂದಿರು ನಮಗೆ ಕಲಿಸಿದ ಸಂಸ್ಕಾರ.
ಜಾನಪದ ಎಂದರೆ ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಅಮೂಲ್ಯ ಪರಂಪರೆ
 ಜನಪದ ಎಲ್ಲಾ ಸಾಹಿತ್ಯಕ್ಕೆ ಮೂಲ, ನಮ್ಮ ಜನರ ಬದುಕಿನ ಸಂಪೂರ್ಣ ಚಿತ್ರವೇ ಜಾನಪದ, `ಜಾನಪದ’ ಎಂದರೆ ಜನರ ಪದ, ತಲೆಮಾರುಗಳಿಂದ ಬಾಯಿಂದ ಬಾಯಿಗೆ, ಬದುಕಿನಿಂದ ಬದುಕಿಗೆ ಬಂದಿರುವ ನಮ್ಮ ಜನಪದ ಹಾಡುಗಳು, ಗ್ರಾಮೀಣರ ಬದುಕು, ಭಾವನೆ, ನಂಬಿಕೆ, ಆಚಾರಣೆ, ಕಲೆ, ಜ್ಞಾನ, ಅನುಭವ, ನೆಲದ ಸೊಬಗು, ಮನರಂಜನೆಯ ಒಟ್ಟು ರೂಪವೇ ಜಾನಪದ. ಇದು ಕೇವಲ ಹಾಡು, ನೃತ್ಯ, ಹಬ್ಬ-ಹರಿದಿನಗಳ, ವೇಷಭೂಷಣಗಳ ಆಚರಣೆ ಅಲ್ಲ, ಇವೆಲ್ಲವೂ ನಮ್ಮ ಕನ್ನಡ ನಾಡಿನ ಸಾಂಸ್ಕöÈತಿಕ ಸಂಪತ್ತು.
 ನಮ್ಮ ಗ್ರಾಮದ ಹಾದಿಯಲ್ಲಿ ಎಲೆ ಅಡಿಕೆ ಮೆಲ್ಲುತ್ತಾ, ನಗುತ್ತಾ ಏರುಧ್ವನಿಯಲ್ಲಿ ಹಾಡುವ ತ್ರಿಪದಿ, ಹೊಲದಲ್ಲಿ ದುಡಿಯುತ್ತಾ ಹಾಡುವ ರೈತರ ಹಾಡು, ತೊಟ್ಟಿಲಲ್ಲಿ ಕಂದಮ್ಮನನ್ನು ಮಲಗಿಸಲು ತಾಯಿ ಹಾಡುವ ಜೋಗುಳ, ಮದುವೆಯ ಸಂದರ್ಭದಲ್ಲಿ ಹಾಡುವ ಸೋಬಾನೆ, ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಆಚರಣೆ, ನಾಟಿ ಮಾಡುವಾಗ ಸಾಲಿನಲ್ಲಿ ಒಂದೇ ಸೂರಿನಲ್ಲಿ ಏಕತಾಳದಂತೆ ಹಾಡುವ ಪರಿ ಅನನ್ಯ ಅದರ ಜೊತೆಯಲ್ಲಿ ಮೇಳೈಸುವ ದೇವರ ಆರಾಧನೆ, ಒಗಟು, ಕಥೆ, ಜನಪದ ನೃತ್ಯ ಗಾದೆ-ಮಾತುಗಳು...
- ರಾಗಿ ಕಲ್ಲು ತಿರುಗುವಾಗ ರಾಜ್ಯವೆಲ್ಲ ನೆಂಟರು
- ಹೊಳೆಗೆ ಸುರಿದರೂ ಅಳೆದು ಸುರಿ
- ಮಾತು ಬೆಳ್ಳಿ, ಮೌನ ಬಂಗಾರ
- ಕಾಲಿಗೆ ಬಿದ್ದು ಕಾಲುಂಗುರ ಬಿಚ್ಚಿಕೊಂಡರAತೆ...
- ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ
- ಕರುಬಿದವರ ಮನೆ ಬರಿಮನೆ, ಕಾಳು ಇರದ ತೆನೆಯಂತೆ
- ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ...
ಇಂಥÀ ಅರ್ಥಗರ್ಭಿತ ನುಡಿಗಳು ತಮ್ಮ ಅನುಭವದ ಮೂಸೆಯಿಂದ ಬರುವ ಗಾದೆಯಲ್ಲಿ ಜ್ಞಾನದ ವಿಸ್ತಾರತೆ ಇರುತ್ತದೆ..ಅಂದರೆ ತೊಟ್ಟಿಲಿನಿಂದ ಆರಂಭಗೊAಡು ಅಸ್ತಂಗತದವರೆಗೂ ಭಾವಭರಿತ ಹೃದಯ ಭಾವನೆಗಳ ಸುಸಂಗಮ, ನಾಗರಿಕತೆಯ ಸಂಕೇತವೇ ಈ ಸಮ್ಮೇಳನ.
ಜಾನಪದದಲ್ಲಿ ನಮ್ಮ ಮಣ್ಣಿನ ಸುವಾಸನೆ ಇದೆ, ನಮ್ಮ ಹೊಲದ ಹಸಿರು ಇದೆ, ನಮ್ಮ ರೈತರ ಶ್ರಮದ ಶಕ್ತಿ ಇದೆ, ತಾಯಿಯ ಮಮತೆ, ಅಜ್ಜಿಯ ಕಥೆ, ಬದುಕಿನ ವಾಸ್ತವತೆ, ಸರಳತೆ ಇವೆಲ್ಲವೂ ನಮ್ಮ ಜಾನಪದದ ಅಮೂಲ್ಯ ಸಂಪತ್ತು. ಅಕ್ಷರಗಳಲ್ಲಿ ಬರೆಯದ ಅನೇಕ ಇತಿಹಾಸಗಳು ಜಾನಪದದಲ್ಲಿ ಸರ್ವದಾ ಬದುಕುತ್ತಿವೆ.
ಶಾಲೆಯ ಮೆಟ್ಟಿಲು ಹತ್ತದ, ಜೀವನದ ಅನುಭವದಿಂದ ಜ್ಞಾನ ಪಡೆದ ನಮ್ಮ ಹಿಂದಿನ ತಲೆಮಾರುಗಳು, ತಮ್ಮ ಹಾಡು, ಕಥೆ, ಗಾದೆ, ಆಚರಣೆ, ಕುಣಿತಗಳ ಮೂಲಕ ಮುಂದಿನ ಪೀಳಿಗೆಗೆ ಆ ದಟ್ಟ ಪರಂಪರೆ ಉಳಿಸಿದ್ದಾರೆ.
`ಜಾನಪದ ನಮ್ಮ ಜನರ ಜೀವನದ ಜ್ಞಾನಕೋಶ’, ಅವರು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಂಸ್ಕೃತಿಯನ್ನು ಸಾಗಿಸಿದ ಜೀವಂತ ಸೇತುವೆಗಳಾಗಿದ್ದಾರೆ.ನಮ್ಮ ಹೆಮ್ಮೆಯ ಕರ್ನಾಟಕವು ವೈವಿಧ್ಯಮಯ ಜನಪದ ಕಲೆಗಳ ತವರೂರು.ಹಾಗಾಗೀ ಕನ್ನಡ ಜಾನಪದ ಸಾಹಿತ್ಯ ಬಹಳ ಶ್ರೀಮಂತವಾಗಿದೆ ಎನ್ನಬಹುದು.
ಜಾನಪದ ಸಾಹಿತ್ಯದ ವೈಭವವೇ ಚಂದ...
ಒAದು ಚಿಕ್ಕ ಗಾದೆಯಲ್ಲಿಯೇ ಜೀವನದ ಬಹುದೊಡ್ಡ ಸತ್ಯ ಅಡಗಿರುತ್ತದೆ. ಒಂದು ಒಗಟಿನಲ್ಲಿ ನಮ್ಮ ಪೂರ್ವಜರ ಬುದ್ದಿವಂತಿಕೆ ಕಾಣುತ್ತದೆ. ಒಂದು ಜನಪದ ಕಥೆಯಲ್ಲಿ ನೀತಿ ಇರುತ್ತದೆ. ಒಂದು ಜೋಗುಳದಲ್ಲಿ ತಾಯಿಯ ಪ್ರೀತಿ ಇರುತ್ತದೆ. ಒಂದು ವೀರಗಾಥೆಯಲ್ಲಿ ನಮ್ಮ ಜನರ ಧೈರ್ಯ ಮತ್ತು ಸ್ವಾಭಿಮಾನ ಇರುತ್ತದೆ, ಇದುವೇ ಜಾನಪದದ ಶಕ್ತಿ ಸಂಚಲನದ ಜೀವಜಲ.
ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕೋಲಾಟ, ಗಾರುಡಿಗೊಂಬೆ, ಸೋಮನ ಕುಣಿತ, ಯಕ್ಷಗಾನ, ಬಯಲಾಟ, ತೊಗಲು ಗೊಂಬೆಯಾಟ, ಪುರಾಣ ಕಥೆಗಳು, ಲಾವಣಿ, ತ್ರಿಪದಿ, ಬೀಸುವ ಕಲ್ಲಿನ ಹಾಡುಗಳು, ಜನಪದ ಕಲೆಗಳು ಮತ್ತು ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಕನ್ನಡಿಯಾಗಿವೆ. ಆದ್ದರಿಂದ ಜಾನಪದ ಕಲಾವಿದರನ್ನು ಗೌರವಿಸುವುದೆಂದರೆ ನಮ್ಮ ಸಂಸ್ಕೃತಿಯನ್ನು ಗೌರವಿಸಿದಂತೆ ಎಂದು ಭಾವಿಸಬೇಕು.
ಜಾನಪದವು ಪ್ರಕೃತಿಯೊಂದಿಗೆ ಅವಿನಾಭವ ಸಂಬAಧ ಹೊಂದಿದೆ, ಮಳೆ ಬಂದಾಗ ಪ್ರತಿ ರೈತರ ಮನಸ್ಸಿನಲ್ಲಿ ಮೂಡುವ ಸಂತೋಷ ಬೆಳೆ ಬೆಳೆದಾಗ ಕಾಣುವ ಸಂಭ್ರಮ ಹಕ್ಕಿಗಳ ಚಿಲಿಪಿಲಿ ಮಧುರ ಧ್ವನಿ, ನದಿ ನೀರಿನ ಜುಳು ಜುಳು ನೀನಾದ, ಬೆಟ್ಟಗುಡ್ಡಗಳ ನಿಶ್ಚತೆ-ದಟ್ಟಕಾಡು ಹಚ್ಚ ಹಸಿರಿನ ಸಿರಿ, ಬಗೆ ಬಗೆಯ ಸುವಾಸನೆಯ ಹೂವುಗಳ ರಾಶಿ ಇವೆಲ್ಲವೂ ಜನಪದ ಬದುಕಿನ ಭಾಗವಾಗಿಯೇ ಮಿಳಿತವಾಗಿದೆ. ನಮ್ಮ ಪೂರ್ವಿಕರು ಪ್ರಕೃತಿಯನ್ನು ಕೇವಲ ಸಂಪನ್ಮೂಲ ಆರ್ಥಿಕ ನೆಲೆಗೆ ಆಧಾರಸ್ತಂಭವೆAದು ನೋಡಲಿಲ್ಲ ಪ್ರಕೃತಿಯನ್ನು ಹೆತ್ತವಳಂತೆ ಎಂದಿಗೂ ಪೂಜ್ಯನೀಯವಾಗಿ ಕಾಣುತ್ತಾರೆ ಆರಾಧಿಸುತ್ತಾರೆ.
ಇಪ್ಪತ್ತೊಂದನೆಯ ಶತಮಾನದ ವಿಜ್ಞಾನದ ಯುಗ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಪರ್ವ ಎಂದು ಗುರುತಿಸುತ್ತಾರೆ. ಇಂದು ಆಧುನಿಕ ತಂತ್ರಜ್ಞಾನ ಮತ್ತು ನಗರೀಕರಣದಿಂದ ನಮ್ಮೆಲ್ಲರ ಜೀವನಶೈಲಿ ಜಟವೇಗದಂತೆ ಬದಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪಧೇ ಹೆಚ್ಚಾಗುತ್ತಿದೆ. ಇದು ಅಭಿವೃದ್ದಿಯ ಭಾಗವಾದರೂ ಅದರೊಂದಿಗೆ ನಮ್ಮ ಅನೇಕ ಹಳೆಯ ಆಚರಣೆ, ಹಾಡು, ಕಥೆ, ಕಲೆ, ಕೌಶಲ್ಯ, ನೆಲ, ಮೂಲ, ಕುಶಲ ಪರಂಪರೆಗಳು `ಕೃತಕಬುದ್ಧಿಮತ್ತೆ’ಯ ಬಲವಾದ ಹೊಡೆತಕ್ಕೆ ನಿಧಾನವಾಗಿ ಮರೆಯಾಗುತ್ತಿರುವುದು ಅತಂಕ ಸೃಷ್ಟಿಸಿದೆ.
ಗ್ರಾಮಗಳಲ್ಲಿ ಬೆಳ್ಳಂಬೆಳಿಗ್ಗೆ ಹಸು-ಕರುಗಳು ಗದ್ದೆಗಳತ್ತ ತೆರಳುವಾಗ ತನ್ನ ಕೊರಳಲ್ಲಿ ಕಟ್ಟಿದ ಗಂಟೆಯಿAದ ಹೊರಹೊಮ್ಮುವ ಶಬ್ಧ ಕೇಳುವುದೇ ಆನಂದ, ನೇಗಿಲಯೋಗಿ ಸೂರ್ಯನ ಕಿರಣದೊಂದಿಗೆ ಆತ್ಮವಿಶ್ವಾಸದ ದಿಟ್ಟ ಹೆಜ್ಜೆ ಹಾಕುತ್ತ ನಗು ನಗುತ್ತ ಎಲ್ಲರನ್ನು ಮಾತಾಡಿಸುತ್ತಾ ಸಾಗುವ ಪರಿಯೇ... ಚಂದ, ಎಲ್ಲ ಮನೆಗಳಲ್ಲಿ ಬಿಸಿ ಬಿಸಿ ಊಟದ ಸಿದ್ಧತೆಯಲ್ಲಿರುವ ಯಜಮಾನತಿ, ಹಾಲು ಹೈನು ಕುಂಟುಬದ ಸಾರಥ್ಯ ಎಲ್ಲ ಕೆಲಸ-ಕಾರ್ಯಗಳಲ್ಲಿ ತಾನು `ಸೈ’ ಎಂದು ಲಗು ಬಗೆಯಿಂದ ಮುನ್ನುಗುವ ಮಹಿಳಾ ಶಕ್ತಿಗಳು ಜಗದ ಯುಗದ ಶಕ್ತಿಯೇ ಆಗಿದ್ದಾರೆ, ಆದರೂ, ಇಂದು ಜಾನಪದ ಹಾಡು ಎಲ್ಲಿಂದ ಬರುತ್ತದೆ? ಇಂದು ಕಥೆ ಹೇಳುವ ಅಜ್ಜಿ ಇಲ್ಲವಾದರೆ ನಾಳೆ ಆ ಕಥೆಯನ್ನು ಯಾರು ಹೇಳುತ್ತಾರೆ? ಇಂದು ನಾವೆಲ್ಲರೂ ಕಲಾವಿದರನ್ನು ಉಳಿಸದಿದ್ದರೆ ನಾಳೆ ಆ ಕಲೆ ಯಾರಿಂದ ಉಳಿಯುತ್ತದೆ? ಆದ್ದರಿಂದ ಅದನ್ನು ದಾಖಲೀಕರಿಸಬೇಕು, ಎಲ್ಲ ಸ್ತರಗಳಲ್ಲಿ ಅಧ್ಯಯನದ ಅಗತ್ಯವಿದೆ, ಅವುಗಳು ಪ್ರಕಟಿಸಬೇಕು, ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಯಲಯದವರೆಗೆ ಪಠ್ಯದಲ್ಲಿಯೇ ಅಳವಡಿಸಿ ವಿದ್ಯಾರ್ಥಿಗಳಿಂದ ಕಲೆಗಳ ಪ್ರರ್ದಶನದ ಸಂಸ್ಕೃತಿಯ ಅನಾವರಣವಾಗುವುದು ಅತ್ಯಂತ ಜರೂರಾಗಿದೆ, ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸಂರಕ್ಷಿಸಿ ಕಣಜವಾಗಿಸಬೇಕಿದೆ.
  ವಿಶ್ವದಾದ್ಯಂತ ಇರುವ ಕನ್ನಡಿಗರೆಲ್ಲರೂ ಅಭಿಮಾನ ಪೂರ್ವಕವಾಗಿ ತಮ್ಮ ಮನೆಗಳಲ್ಲಿ ಅರ್ಥಪೂರ್ಣ ನೀತಿಕಥೆಗಳ ಪಾಠ ಹೇಳುವುದು, ಮಗುವಿಗೆ ಪ್ರೀತಿಯಿಂದ ಜೋಗುಳ ಕಲಿಸೋಣ, ಜನಪದ ಗೀತೆಗಳನ್ನು ಮಕ್ಕಳು ಹಾಡಲು ಪ್ರೇರೆಪಕರಾಗೋಣ, ನಮ್ಮ ಹಬ್ಬ-ಆಚರಣೆಗಳ ಮಹತ್ವ ಅವರಿಗೆ ಮನಸ್ಸಲ್ಲಿ ಉಳಿಯುವಂತೆ ತಿಳಿಸೋಣ, ಹಾಡುತ್ತಾ-ಕುಣಿಯುತ್ತಾ, ಮಕ್ಕಳು ತಮ್ಮ ಸಂಸ್ಕೃತಿಯ ಬೇರುಗಳನ್ನು ಅರಿತಾಗ ಮಾತ್ರ ಅವರು ಮನರಂಜಿಸಲು ಸಾಧ್ಯ. ಅದನ್ನು ಅವರು ಮುಂದುವರಿಸುವAತೆ ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಕರಿಗೆ ಮತ್ತು ಹಿರಿಯರಿಗೆ ಇದೆ ಎಂದು ವಿನಯತೆಯಿಂದ ಹೇಳುತ್ತೇನೆ.
ಈ ನಿಟ್ಟಿನಲ್ಲಿ, ನಮ್ಮ ಪರಿಸರ ಉಳಿಸುವುದು, ಭಾಷೆ, ಸೊಗಡು ಸೊಬಗು, ತಾಯಿ ಅಜ್ಜಿಯರ ನೆನಪಿನ ಕಥೆಗಳು, ನಮ್ಮೆಲ್ಲರ ಜ್ಞಾನದ ದೀವಟಿಗೆಯಾದ ಪೂರ್ವಿಕರ ನೀತಿ ಧರ್ಮದ ನುಡಿಗಟ್ಟುಗಳು ಉಳಿಸುವುದು, ಇವೆಲ್ಲವೂಗಳನ್ನು ಹೊತ್ತು ನಮ್ಮ ಮುಂದಿನ ಪೀಳಿಗೆಯ ಅಸ್ತಿತ್ವವನ್ನು ಉಳಿಸಿ ಬೆಳೆಸಬೇಕಿದೆ.
ಜಾನಪದ ಉಳಿದರೆ ಜನರ ನೆನಪು ಐತಿಹ್ಯಗಳು ಉಳಿಯುತ್ತದೆ, ನೆನಪು ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಕನ್ನಡದ ಅಸ್ಮಿತೆ ನಾಗರಿಕತೆ ಇರುವವರೆಗೆ ಉಳಿಯುತ್ತದೆಂದು ನಾನು ಭಾವಿಸುತ್ತೇನೆ. ಹೀಗೆ ನಮ್ಮ ಪೂರ್ವಜರು ತಮ್ಮ ಭಾವನೆಗಳನ್ನು ಬರೆದು ದಾಖಲೀಕರಿಸಲು ತಿಳಿಯದೆ, ಅಂಥ ಅವಕಾಶವು ಅವರಿಗೆ ಗೊತ್ತಿಲ್ಲದೆ, ಕೆತ್ತಿ ಶಾಶ್ವತಗೊಳಿಸಲು ಬಾರದೆ, ಬಾಯಿಂದ ಬಾಯಿಗೆ ಹರಡಿದ ಪದಪುಂಜಗಳೆ ಜಾನಪದ ಸಾಹಿತ್ಯವಾಯಿತು. ಜನಪದ ಸಾಹಿತ್ಯ ನಮ್ಮ ಮೂಲ ಸಂಸ್ಕೃತಿಯ ಬೇರುಗಳಾಗಿ ಇಂದಿಗೂ ಜೀವಂತವಾಗಿ ಉಳಿದಿವೆ.
ಹೊನ್ನು ಬೆಳೆಯುವ ಭೂಮಿಯ ಒಡತಿ ನಮ್ಮ ಕನ್ನಡತಿ. ಶ್ರೇಷ್ಠ ಎಂಟು ಕನ್ನಡ ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಸಾಹಿತ್ಯದ ಸಿರಿವಂತ ನಾಡಿದು, ಕೃತಕ ಬುದ್ಧಿಮತ್ತೆಯ ವಿಶ್ವವಿದ್ಯಾಲಯದ ತವರು ಭೂಮಿ ವಿಜ್ಞಾನ ತಂತ್ರಜ್ಞಾನದಿAದ ಪ್ರಪಂಚವೆ ತನ್ನತ್ತ ನೋಡುವಂತೆ ಮಾಡಿದ ಜ್ಞಾನಿಗಳ ಪ್ರಬುದ್ಧ ಬೋಧಿವೃಕ್ಷವಿದು. ಶೂರರು, ವೀರರು, ಆಳಿದ ಪವಿತ್ರ ಭೂಮಿ, ಮುತ್ತು, ರತ್ನ, ವಜ್ರ, ವೈಢೂರ್ಯವನ್ನು ಬೀದಿಯ ಮಾರುಕಟ್ಟೆಯಲ್ಲಿ ಸೇರಿನಿಂದ ಅಳೆದು ಸುರಿದ ವಿಜಯನಗರ ವೈಭವದ ಸಾಮ್ರಾಜ್ಯದ ಶಂಖನಾದ ಇಂದಿಗೂ ಕೇಳುತ್ತೇವೆ, ಹಾಗಾಗಿ ಕನ್ನಡ ಎಂದರೆ ಸಕ್ಕರೆ, ಕನ್ನಡ ಎಂದರೆ ಜನಪದ, ಕನ್ನಡ ಎಂದರೆ ಸ್ವರ್ಗದ ಹೆಬ್ಬಾಗಿಲು.
ಕನ್ನಡ ನಾಡಿನ ಹೆಸರಲ್ಲೇ ಆಯಸ್ಕಾಂತೀಯ ಗುಣಗಳಿವೆ. ಮೌರ್ಯರು, ಶಾತವಾಹನರು, ಮಾಂಡಲೀಕರು, ಕÀದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟçಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ಮೈಸೂರಿನ ಒಡೆಯರು, ವಿಜಯನಗರ ಸಾಮ್ರಾಜ್ಯದ ಅರಸರು, ಶಹಪುರ-ಸುರಪುರದ ದೊರೆಗಳು ಹೀಗೆ ನಾನಾ ರಾಜವಂಶಸ್ಥರು, ದೇಶಭಕ್ತರು ನಮ್ಮ ನಾಡಿನ ಸರ್ವಾಂಗೀಣ ಏಳಿಗಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳು ಇಂದಿಗೂ ಜೀವಂತವಾಗಿರಲು ನಮ್ಮ ನಾಡನ್ನಾಳಿದ ರಾಜಮಹಾರಾಜರು ನೀಡಿದ ಉಡುಗೊರೆಗಳು ಇತಿಹಾಸ ಸ್ವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ.
`ಕಾವೇರಿಯಿಂದಮ ಗೋದಾವರಿವರಿರ್ದ ನಾಡದ್ ಕನ್ನಡದೊಳ್....” ಕವಿರಾಜಮಾರ್ಗದ ಸಾಲುಗಳು ನಮ್ಮ ನಾಡಿನ ಭೌಗೋಳಿಕ ಹಿನ್ನಲೆ ಮತ್ತು ನಾಡಿನ ಉದ್ದಗಲದ ಪ್ರತೀಕವಾಗಿ ನಮ್ಮನ್ನು ಪ್ರೇರೇಪಿಸುತ್ತವೆ.
ಎಲ್ಲಾದರೂ ಇರು ಎಂತಾದರೂ ಇರು...
ಎಂದೆAದಿಗೂ ನೀ ಕನ್ನಡವಾಗಿರು...
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು.. ಎಂದು ಜಗದ ಯುಗದ ರಸಋಷಿ ನಮ್ಮೆಲ್ಲರ ಹೆಮ್ಮೆಯ ನಮ್ರತೆಯ ಸಹಜ ಸ್ವರೂಪದ ಜ್ಞಾನದ ಖಣಿ ರಾಷ್ಟçಕವಿ ಕುವೆಂಪುರವರ ಈ ಕವಿತೆಯ ಸಾಲು ಪ್ರತಿಯೊಬ್ಬ ಕನ್ನಡಿಗನ ಆತ್ಮದ ಭಾವನೆಯನ್ನು ಎತ್ತಿತೋರಿಸುತ್ತದೆ. ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮ ಪೂರ್ವಜನ್ಮದ ಪುಣ್ಯದ ಫಲ ಎಂದು ನಾನು ಭಾವಿಸಿಕೊಳ್ಳುತ್ತೇನೆ.
 ನಮ್ಮೆಲ್ಲರ ಕನ್ನಡ ನಾಡನ್ನು ನಮ್ಮ ಪ್ರಾಚೀನ ಶಾಸನಗಳು ಶಿಲೆಯ ಮೇಲಿನ ಕೆತ್ತನೆಗಳಲ್ಲಿ ಕಲ್ಲಿನ ಮೇಲಿನ ಕಾವ್ಯಗಳಲ್ಲಿ, ಶಿಲ್ಪಕಲೆಗಳಲ್ಲಿ ಸಾಕ್ಷೀಕರಿಸಿವೆ. ಕನ್ನಡ ನಾಡನ್ನು ಕರುನಾಡು, ಕಂ ನಾಡು, ಕಾರ್ನಾಡು ಎಂದು ಕರೆದಿವೆ. `ಕರು’ ಎಂದರೆ ಮಹತ್ತಾದ ದೊಡ್ಡದು ಎಂದರ್ಥ, ದಖನ್ ಪ್ರಸ್ಥಭೂಮಿಯ ಮೆಲೀರುವ ಎತ್ತರದ ನಾಡು, ಮೇಲಣ ಸೀಮೆ, ಮತ್ತು ಭೌಗೋಳಿಕವಾಗಿ ದಿಣ್ಣೆ ಎಂದರ್ಥ ಬರುತ್ತದೆ. ಹಾಗೆಯೇ, ಕನ್ನಡ ಪದದ ಮತ್ತೊಂದು ಅರ್ಥ ಸಂಸ್ಕೃತದಲ್ಲಿ ಕರ್ಣಾಟ ಆಗಿದೆ.
 ಕನ್ನಡಿಗರು ವಿಶಾಲ ಹೃದಯದವರು ಮಾನವೀಯ ಗುಣಗಳ ಸಂಗಮರೂಪವಾದ ನಾವುಗಳು ಕರುಣೆಯ ಕಡಲಾದ ಮಮತೆಯ ಮಾತೆಯ ಮತ್ತೊಂದು ರೂಪ. ಪ್ರೀತಿ ಕರುಣೆ, ಪ್ರಜ್ಞಾ, ಕಮಲಾಯಗಳಲ್ಲಿ ತುಂಬಿರುವವರೇ ಕನ್ನಡಿಗರು. ಕನ್ನಡಿಗರು ಎಂದರೆ ಎರಡು ಕೈ ಜೋಡಿಸಿ ನಮಿಸುವವರು ನಗುವೇ ಅವರೆಲ್ಲರ ಸಂಪತ್ತು. ಇಂಥಹ ಸಮೃದ್ಧ ನಾಡಿನಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಜಾನಪದಕ್ಕೆ ವಿಶೇಷವಾದ ಸ್ಥಾನವಿದೆ. ಕನ್ನಡ ನಾಡಿನ ರಾಜ ಪರಂಪರೆಗಳಿAದ ಹಿಡಿದು ಇಂದಿನ ರಾಜಕೀಯ ಸನ್ನಿವೇಶದವರೆಗೂ ತಮ್ಮದೇ ಆದ ರೀತಿಯಲ್ಲಿ ಕಲಾವಿದರನ್ನು, ಸಾಹಿತಿಗಳನ್ನು ಸಾಧಕರನ್ನು ಎಲ್ಲ ಪ್ರತಿಭೆ, ಕಲೆ, ಕಲಾವಿದರನ್ನು ಗೌರವಿಸುತ್ತಾ ಮತ್ತು ಪ್ರೋತ್ಸಾಹ ನೀಡುತ್ತಾ ಸಾಂಸ್ಕೃತಿಕ ಲೋಕವನ್ನು ಬೆಳಗುತ್ತಾ ಬರುತ್ತಿದ್ದಾರೆ, ಈ ಬಹುತ್ವದ ಜಾನಪದ ಕಲೆಗಳು ನಾಡಿನ ಜೀವಂತಿಕೆಯ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುತ್ತವೆ. ಜನಪದ ಸತ್ವದಲ್ಲಿ ಮಹೋನ್ನತವಾದ ಪರಿಪಕ್ವತೆ ಅಡಗಿದೆ.
ಭರತನಾಟ್ಯ, ಯಕ್ಷಗಾನ, ಕೋಲಾಟ, ಡೊಳ್ಳುಕುಣಿತ, ವೀರಗಾಸೆ, ಬಯಲಾಟ, ದೊಡ್ಡಾಟ, ಬೊಂಬೆಯಾಟ, ಮುಂತಾದ ಕಲೆಗಳು ನಾಡಿನ ಸಾಂಸ್ಕೃತಿಕ ಹಿರೆಮೆಯನ್ನು ಎಲ್ಲಾ ಕಾಲಘಟ್ಟದಲ್ಲಿಯೂ ತಮ್ಮದೇ ಆದ ಮೌಲ್ಯಧಾರಿತ ಕೊಡುಗೆಗಳನ್ನು ನೀಡುತ್ತಿವೆ. ಅದರಲ್ಲಿ ವಿಶೇಷವಾಗಿ `ಭರತನಾಟ್ಯವೂ’ ದೇವರ ನೃತ್ಯ ಎಂದು ಕರೆಸಿಕೊಳ್ಳುತ್ತದೆ. ಯಕ್ಷಗಾನ ಕಲೆಯು ಕರ್ನಾಟಕದ ತುಳುನಾಡಿನ ಸಾಂಪ್ರದಾಯಿಕ ಕಲೆಯಾಗಿದೆ. ಸಾಹಿತ್ಯ, ಸಂಗೀತ, ಮತ್ತು ಕಲೆಗಳು ಒಂದೇ ಮರದ ಹಸಿರು ಬಳ್ಳಿ- ಹೂವುಗಳು. ಕರ್ನಾಟಕಶಾಸ್ತಿçÃಯ ಸಂಗೀತ ಮತ್ತು ಹಿಂದುಸ್ಥಾನಿ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಪ್ರಗತಿಯ ಪಥದತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಕನ್ನಡಿಗರು ವಿಶ್ವಕ್ಕೆ ಮಾದರಿ. ಸಂಗೀತ, ನಾಟಕ, ಸಿನೆಮಾ, ಲಲಿತಕಲೆ, ಹೀಗೆ ಎಲ್ಲಾ ಕಲಾಪ್ರಕಾರಗಳಲ್ಲಿ ನಾಡಿನ ಸಾಂಸ್ಕೃತಿಕ ಮತ್ತು ಪಾರಂಪರಿಕ ಬೆಡಗು ಬಿನ್ನಾಣವನ್ನು ಜೀವಂತವಾಗಿಸಿದ್ದಾರೆ. ಅಂತೆಯೇ, ಇಂದು ಮುಂದೆಯೂ `ಜಾನಪದ’ ಎಂದರೆ ಅದು ನಮ್ಮ ಒಡಲಾಳದ ಅಸ್ಮಿತೆ, ಬದುಕಿನ ಭವ್ಯತೆಯ ಪ್ರತೀಕ. ಜಾನಪದವು ನಮ್ಮನ್ನು ನಮ್ಮನ್ನಾಗಿಸಿಕೊಂಡು ಬಂದಿರುವ ಬಹುದೊಡ್ಡ ಚೈತನ್ಯ ಶಕ್ತಿ ಮತ್ತು ಜೀವದ್ರವ್ಯ ಎಂದು ಹೇಳಬಹುದು.
ಬೆಳಗಾಗಿ ನಾನೆದ್ದುಯ್ಯಾರಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆದೊಳ 
ಭೂಮಿ ತಾಯಿ ಎದ್ದೊಂದು ಘಳಿಗೆ ನೆನೆದೇನ.
ಎಂತಹ ಅರ್ಥಪೂರ್ಣವಾದ ಸಾಲುಗಳು ಇವು. ಗ್ರಂಥಗಳನ್ನು ಓದಿರದ, ವಿದ್ವಾಂಸರಲ್ಲದ ಗ್ರಾಮೀಣರ ಬಾಯಿಯಲ್ಲಿ ಅತ್ಯಂತ ಸುಂದರವಾದ ಈ ಕಲ್ಪನೆ ಹೇಗೆ ಸಾಕಾರಗೊಂಡಿದೆ. ಭೂಮಿ ತಾಯಿಯನ್ನು ಧನ್ಯತೆಯಿಂದ ನೆನೆಯಬೇಕೆಂದು ಪ್ರತಿ ಮುಂಜಾನೆ ತಾಯಿಯೊಬ್ಬಳು ಅಂತರಾಳದ ಭಾವನೆಯಿಂದ ನಮಗೆ ಉಪಕಾರ ಮಾಡಿದ, ಬದುಕಲು ಆಶ್ರಯ ನೀಡಿದ, ಅನ್ನಕ್ಕೆ ದಾರಿಯಾದ ಎಲ್ಲರನ್ನು ನೆನೆಯುವ ಸಂತೃಪ್ತ ಭಾವನೆ ಇದೆಯಲ್ಲ ಅದು ಜನಪದೀಯರ ಹೃದಯ ವೈಶಾಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 
ಇವೆಲ್ಲವುಗಳಿಗೆ ಹಿರಿಮೆ-ಗರಿಮೆ ಹೆಚ್ಚಿಸಲು ಘನ ಸರ್ಕಾರಗಳು ಜನಪದ ವಿಶ್ವವಿದ್ಯಾಲಯಗಳನ್ನು ತೆರೆದು ಜನಪದ ಸಾಹಿತ್ಯ ಸಂಸ್ಕೃತಿ ಮತ್ತು ಜನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ನಮ್ಮ ಕನ್ನಡ ಜಾನಪದ ಪರಿಷತ್ತು ಕಲೆ ಸಂಸ್ಕೃತಿ ಮತ್ತು ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸಗಳನ್ನು ನಾವು ಸಹ ಕಲ್ಲಿನ ಮೇಲೆ ಕೆತ್ತಿ ಶಾಶ್ವತಗೊಳಿಸಬೇಕು.
ಇಂತಹ ಅಭೂತಪೂರ್ವ ಸಮ್ಮೇಳನ ನಾನು ಹುಟ್ಟಿಬೆಳೆದ ಬಾಲ್ಯದಲ್ಲಿ ಸೈಕಲ್ ಹೊಡೆದ, ಓಡಾಡಿದ್ದ, ಆಟವಾಡಿದ್ದ, ಬದುಕನ್ನು ಕಟ್ಟಿಕೊಂಡ ವಿಜಯನಗರದಲ್ಲಿ ನಡೆಯುತ್ತಿರುವುದು ನನಗೆ ಅತ್ಯಂತ ಸಂತೋಷವನ್ನು ತಂದಿದೆ. ವಿಜಯನಗರದ ಹೆಸರೇ, ಒಂದು ರೋಮಾಂಚನ, ನಮ್ಮ ಘನತೆವೆತ್ತ ವಿಜಯನಗರ ಸಾಮ್ರಾಜ್ಯದ ಪರಿಕಲ್ಪನೆಯನ್ನು ಹೆಸರಿನಲ್ಲೇ ಸೂಚಿಸುವ ಈ ಪುಣ್ಯಭೂಮಿ ಅನೇಕರಿಗೆ ಸ್ಪೂರ್ತಿಯ ತಾಣವಾಗಿದೆ. ಬೆಂಗಳೂರಿನ ಹೃದಯಭಾಗವಾದ ವಿಜಯನಗರಕ್ಕೆ ಮಹನ್ನೋತವಾದ ಇತಿಹಾಸ ಇದೆ. ಸಾಹಿತ್ಯ, ಸಮಾಜಸೇವೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಮತ್ತು ರಾಜಕೀಯವಾಗಿ ಸದಾಕಾಲ ಹೊಸ ಮನ್ವಂತರಗಳಿಗೆ ವಿಜಯನಗರ ಕಾರಣವಾಗುತ್ತಿದೆ. ಈ ಹೊತ್ತು ನನ್ನ ಜನ್ಮ ಸಾರ್ಥಕವಾಗಿದೆ ಎಂದು ಅನಿಸುತ್ತಿದೆ. ವಿಜಯನಗರದ ಅರಸರು ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹಾಕಿಕೊಟ್ಟ ಭದ್ರ ಬುನಾದಿಯ ಅನಾವರಣ ಇಂದು ಈ ಭವ್ಯ ಜನಪದ ಸಮ್ಮೇಳನದ ಮೂಲಕ ಸಾಕಾರಗೊಂಡಿದೆ.
ಗೋವಿAದರಾಜ ನಗರವು ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ನಗರ ಪ್ರದೇಶಕ್ಕೆ ಸಂಬAಧಿಸಿದ ಹೆಸರು. ಬೆಂಗಳೂರಿನ ಇತಿಹಾಸದಲ್ಲಿ ಕೆಂಪೇಗೌಡರು 1537 ರಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಿಸಿದ ಘಟನೆ ಮಹತ್ವದ್ದಾಗಿದೆ. ಗೋವಿಂದರಾಜನಗರವು ಈ ಮಹಾನಗರದ ವಿಸ್ತರಣೆಯ ಭಾಗವಾಗಿ ಬೆಳೆಯುತ್ತಿರುವ ವಸತಿ, ವಾಣಿಜ್ಯ ಮತ್ತು ಸಾಮಾಜಿಕ ಬದುಕಿನ ಪ್ರದೇಶವಾಗಿದೆ. ಗೋವಿಂದರಾಜನಗರವೆAದರೆ ಕೇವಲ ಬೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರವಲ್ಲ. ಇದು ತನ್ನದೇ ಆದ ಸಾಮಾಜಿಕ, ಸಾಂಸ್ಕöÈತಿಕ ಮತ್ತು ಕನ್ನಡಪರ ಪರಂಪರೆಯನ್ನು ಹೊಂದಿರುವ ನೆಲೆ. ಗೋವಿಂದರಾಜನಗರ ಎಂಬ ಹೆಸರು 1970ರ ಕನ್ನಡಪರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಕನ್ನಡ ಹೋರಾಟಗಾರ ಎಂ. ಗೋವಿಂದರಾಜ್ ಅವರ ನೆನಪಿನೊಂದಿಗೆ ಸಂಬAಧಿಸಿದೆ ಎಂದು ದಾಖಲೆಗಳು ಉಲ್ಲೇಖಿಸುತ್ತವೆ. ಈ ಹಿನ್ನೆಲೆಯಲ್ಲಿ, ಈ ಪ್ರದೇಶದ ಹೆಸರಿನಲ್ಲಿಯೇ ಕನ್ನಡಾಭಿಮಾನ ಮತ್ತು ಹೋರಾಟದ ಸ್ಮರಣೆ ಅಡಗಿದೆ ಎಂದು ಹೇಳಬಹುದು.
ಗೋವಿಂದರಾಜನಗರವೆAದರೆ ಕೇವಲ ಮನೆಗಳು, ರಸ್ತೆಗಳು ಮತ್ತು ಕಟ್ಟಡಗಳಿಂದ ಕೂಡಿದ ಪ್ರದೇಶವಲ್ಲ ಇದು ಕನ್ನಡ ನಾಡಿನ ಸಾಮಾಜಿಕ ಬದುಕಿನ ಒಂದು ಭಾಗ. ಇಲ್ಲಿನ ಜನರ ನೆನಪುಗಳು, ಹಬ್ಬ, ದೇವಾಲಯ, ಕಲೆ ಮತ್ತು ಪರÀಸ್ಪರ ಸಹಬಾಳ್ವೆ `ಸರ್ವ ಜನಾಂಗದ ಶಾಂತಿಯ ತೋಟ’ದ ಈ ಪ್ರದೇಶದ ಸಾಂಸ್ಕೃತಿಕ ಸಂಪತ್ತನ್ನು ಸುಂದರವಾಗಿ ರೂಪಿಸುತ್ತವೆ.ಗೋವಿಂದರಾಜನಗರವು ಮೈಸೂರು ರಸ್ತೆಯಿಂದ ರಾಜಾಜಿನಗರದವರೆಗೆ ವಿಸ್ತರಿಸುವ ಪ್ರದೇಶಗಳನ್ನು ಒಳಗೊಂಡಿದ್ದು, ನಾಗರಭಾವಿ, ವಿಜಯನಗರ, ಆರ್.ಪಿ.ಸಿ ಲೇಔಟ್‌ಗಳಿಗೆ ಸಂಪರ್ಕ ಹೊಂದಿದೆ.
ಈ ಜಾನಪದ ಸಮ್ಮೇಳನದಲ್ಲಿ ನಾನು ಹೇಳಬಯಸುವುದೇನೆಂದರೆ `ಒಂದು ಕ್ಷೇತ್ರದ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣವಲ್ಲ ಅಲ್ಲಿನ ಜನರ ಜೀವನಮಟ್ಟ ಸುಧಾರಿಸಿವುದು, ಮಕ್ಕಳಿಗೆ ಶಿಕ್ಷಣ, ಮಹಿಳೆಯರಿಗೆ ಅವಕಾಶ, ಕಲಾವಿದರಿಗೆ ವೇದಿಕೆ ಮತ್ತು ಹಿರಿಯರಿಗೆ ಗೌರವ ನೀಡುವುದೂ ಅಭಿವೃದ್ಧಿಯ ಭಾಗವಾಗಿದೆ.’
ಈ ಮಣ್ಣಿನಲ್ಲಿ ಧಾರ್ಮಿಕತೆಯ ವೈಭವವು ತುಂಬಿದೆ, ಶ್ರೀ ಗೋವಿಂದರಾಜ ಸ್ವಾಮೀ ದೇವಸ್ಥಾನ, ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ, (ಪಿ.ಎಫ್ ಲೇಔಟ್), ಶ್ರೀ ನಾಗಸುಬ್ರಮಣ್ಯ ಸ್ವಾಮಿ ದೇವಸ್ಥಾನ (ಎಂ.ಸಿ. ಲೇಔಟ್) ನಾಗಾರಾಧಾನೆ (ವಿಜಯನಗರ) ಶ್ರೀ ಮಹದೇಶ್ವರ ದೇವಸ್ಥಾನ (ಕಾವೇರಿಪುರ, ಗೋವಿಂದರಾಜನಗರ) ಊರಹಬ್ಬ, ಅಲಂಕಾರ, ಆಹಾರ ಸಂಸ್ಕೃತಿ, ಜಾತ್ರೆ, ಜಾನಪದ ಸೊಗಡು ಪರಿಮಳಿಸುತ್ತಿರುತ್ತದೆ.
ಗೋವಿಂದರಾಜನಗರದAತಹ ನಗರ ಪ್ರದೇಶದಲ್ಲಿಯೂ ಗ್ರಾಮೀಣ ಹಿನ್ನೆಲೆಯಿಂದ ಬಂದ ಕುಟುಂಬಗಳ, ವಿವಿಧ ಜಿಲ್ಲೆಗಳಿಂದ ವಲಸೆ ಬಂದ ಜನರು ಹಾಗೂ ಹಲವು ಸಮುದಾಯಗಳ ಸಾಂಸ್ಕೃತಿಕ ಸಂಪ್ರದಾಯಗಳು ಒಂದೆಡೆ ಸೇರುವ ಸಾಧ್ಯತೆ ಇದೆ.  ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಾನಪದ ಕಲೆಗಳು, ಸಾಹಿತ್ಯ, ಸಂಗೀತ, ನೃತ್ಯ, ನಾಟಕ,ಮತ್ತು ಕರಕುಶಲ ಕ್ಷೇತ್ರಗಳ ಸಂರಕ್ಷಣೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತದೆ. ಜಾನಪದ ಉತ್ಸವಗಳು ಕಲಾವಿದರಿಗೆ ವೇದಿಕೆ ಒದಗಿಸುವ ಉದ್ದೇಶ ಹೊಂದಿದೆ.
ಜಾನಪದ ಮಹಿಳಾ ಪರಂಪರೆಯ ಕುರಿತು ಹೇಳುವುದಾದರೆ, ನನ್ನ ತಲೆಮಾರಿನಲ್ಲಿ ಮದುವೆ, ಸೀಮಂತ, ಹಬ್ಬ ಮತ್ತು ಕುಟುಂಬದ ಸಮಾರಂಭಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
-    ಮಕ್ಕಳಿಗೆ ಜಾನಪದ ಕಥೆ, ಗಾದೆ, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ.
-    ಸಾಂಪ್ರದಾಯಿಕ ಅಡುಗೆ, ಉಡುಗೆ, ಅಲಂಕಾರ ಮತ್ತು ಕುಟುಂಬ ಆಚರಣೆಗಳನ್ನು ಮುಂದುವರಿಸಿದ್ದಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಯೂ ವಿವಿಧ ಸಾಂಸ್ಕೃತಿಕ ಸಂಪ್ರದಾಯಗಳನ್ನು ಉಳಿಸುವಲ್ಲಿ ಪಾತ್ರವಹಿಸಿದ್ದಾರೆ. ಇದು ಜನಜೀವನ, ಸಂಸ್ಕೃತಿ, ಪರಂಪರೆ ಮತ್ತು ಸಹಬಾಳ್ವೆಯ ನೆಲೆ, ನಮ್ಮ ಜನಪದ ಕಲೆ ಸಾಹಿತ್ಯ, ಹಾಡು, ನೃತ್ಯ ಮತ್ತು ಆಚರಣೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗೋವಿಂದರಾಜನಗರವು ರಾಜಕೀಯವಾಗಿಯೂ ಪ್ರಮುಖ ಕ್ಷೇತ್ರವಾಗಿದೆ. ಕರ್ನಾಟಕ ವಿಧಾನಸಭೆಯ ಅಧಿಕೃತ ದಾಖಲೆಯ ಪ್ರಕಾರ ಶ್ರೀ ಪ್ರಿಯಕೃಷ್ಣ ಅವರು ಗೋವಿಂದರಾಜನಗರ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಕ್ಷೇತ್ರವನ್ನು ವಿವಿಧ ಅವಧಿಗಳಲ್ಲಿ ವಿ. ಸೋಮಣ್ಣ, ಪ್ರಿಯಕೃಷ್ಣ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳು ಪ್ರತಿನಿಧಿಸಿದ್ದಾರೆ. ಆದರೆ ರಾಜಕೀಯದ ಜೊತೆಗೆ, ಈ ನೆಲದ ಮತ್ತೊಂದು ದೊಡ್ಡ ಗುರುತು ಕನ್ನಡ, ಕಲೆ ಮತ್ತು ಸಂಸ್ಕöÈತಿಯ ಮೇಲಿನ ಪ್ರೀತಿ
ಕೊನೆಯ ನುಡಿಗಳೆಂದರೆ...
ನಮ್ಮ ಮಣ್ಣನ್ನು ಉಳಿಸುವುದು
ನಮ್ಮ ಭಾಷೆಯನ್ನು ಉಳಿಸುವುದು
ನಮ್ಮ ತಾಯಂದಿರ ಧೀಶಕ್ತಿಯ ನೆನಪುಗಳನ್ನು ಉಳಿಸುವುದು.
ನಮ್ಮ ಪೂರ್ವಜರ ಜ್ಞಾನವನ್ನು ಉಳಿಸುವುದು.
ನಮ್ಮ ಮುಂದಿನ ಪೀಳಿಗೆಯ ಅಸ್ತಿತ್ವವನ್ನು ಉಳಿಸುವುದು.
ಮಹಿಳಾ ಜಾನಪದ ಸಮ್ಮೇಳನವು ನಮ್ಮೆಲ್ಲರಲ್ಲೂ ಜಾನಪದದ ಬಗ್ಗೆ ಹೊಸ ಅರಿವು, ಹೊಸ ಉತ್ಸಾಹ ಮತ್ತು ಹೊಸ ಜವಬ್ದಾರಿಯನ್ನು ಮೂಡಿಸಲಿ. `ಜಾನಪದ ಉಳಿದರೆ ಜನರ ನೆನಪು ಉಳಿಯುತ್ತದೆ ಜನರ ನೆನಪು ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ನಮ್ಮ ಸಂಸ್ಕೃತಿ ಉಳಿದರೆ ಕನ್ನಡದ ಅಸ್ಮಿತೆ ಉಳಿಯುತ್ತದೆ’.
ನಾವು ನಮಗಾಗಿ ಏನು ಮಾಡುತ್ತೇವೆಯೋ ಅದು ನಮ್ಮೊಳಗೇ ಸತ್ತು ಹೋಗುತ್ತದೆ. ಇತರರರಿಗೆ ಮತ್ತು ಜಾನಪದ ಜಗತ್ತಿಗಾಗಿ ಏನು ಕಲೆ, ಕಲಾವಿದರನ್ನು ಉಳಿಸುತ್ತೆವೆಯೋ ಅದು ಅಮರವಾಗಿರುತ್ತದೆ.
ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನಸಭಾಕ್ಷೇತ್ರ ಘಟಕ ಪ್ರಥಮ ಮಹಿಳಾ ಜಾನಪದ ಸಮ್ಮೇಳನದಲ್ಲಿ ಗೋಷ್ಠಿಗಳು, ಹಾಡು, ನೃತ್ಯ, ಕಲಾ ತಂಡಗಳು ವೈಭವದ ಸಂಭ್ರಮಾಚರಣೆ, ನಿಜವಾಗಲೂ ವಿಜಯನಗರ ಸಾಮ್ರಾಜ್ಯದ ಗತ ವೈಭವ ಇಂದು ನಗರ ಜೀವನದಲ್ಲಿ ಮೈ, ಮನಸ್ಸು ತುಂಬಿಕೊAಡು ಹರ್ಷಿತರಾಗಿದ್ದಾರೆ ಕುಣಿತದಾಡುತ್ತಿದ್ದಾರೆ, ಬಣ್ಣ ಬಣ್ಣದ ಕಲೆಗಳ ನಾಡು ಎಂಬುದನ್ನು ತಾವೆಲ್ಲರೂ ಪ್ರೀತಿ ಗೌರವಗಳಿಂದ ಹಸನ್ಮುಖರಾಗಿ ಆನಂದಿಸುತ್ತಿರುವುದು ನನಗೆ ಸ್ಫೂರ್ತಿ ನೀಡಿದೆ.
ಈ ಮಹತ್ವದ ಸಮ್ಮೇಳನ ಯಶಸ್ವಿಯಾಗಲಿ ಜಾನಪದ ಕಲಾವಿದರ ಬದುಕು ಹಸನಾಗಲಿ. ಮಹಿಳೆಯರ ಪ್ರತಿಭೆಗೆ ಇಂಥ ನೂರಾರು ವೇದಿಕೆಗಳು ದಾರಿಯಾಗಲಿ. ನಮ್ಮ ಕನ್ನಡ ನಾಡಿನ ಜಾನಪದ ಪರಂಪರೆ ಮುಂದಿನ ಸಾವಿರಾರು ವರ್ಷಗಳವರೆಗೆ ಉಳಿಯಲಿ ಬೆಳಗಲಿ ಎಂದು ಹಾರೈಸುತ್ತೇನೆ. 
ಜಾನಪದ ಘೋಷವಾಕ್ಯ:
“ಜನಪದ ಉಳಿದರೆ ಸಂಸ್ಕೃತಿ ಉಳಿಯುತ್ತದೆ;
ಸಂಸ್ಕೃತಿ ಉಳಿದರೆ ಕನ್ನಡದ ಅಸ್ಮಿತೆ ಉಳಿಯುತ್ತದೆ”
`ಜಾನಪದ ನಮ್ಮ ಭೂತಕಾಲದ ನೆನಪಷ್ಟೇ ಅಲ್ಲ’ ಅದು ನಮ್ಮ ವರ್ತಮಾನದ ಬೇರು ಮತ್ತು ಭವಿಷ್ಯದ ದಾರಿ.
ನಮ್ಮೆಲ್ಲರ ಸಂಕಲ್ಪ:
 ಇಂದಿನ ಈ ಸಮ್ಮೇಳನ ಕೇವಲ ಒಂದು ದಿನದ ಕಾರ್ಯಕ್ರಮವಾಗಿ ಉಳಿಯದೆ, ಇದು ಜಾನಪದ ಸಂರಕ್ಷಣೆಯ ಹೊಸ ಚಳವಳಿಗೆ ನಾಂದಿಯಾಗಬೇಕು.
- ವಿಶ್ವದಾದ್ಯಂತ ಇರುವ ಜಾನಪದ ಕಲಾವಿದರನ್ನು ಗೌರವಿಸೋಣ.
- ಮರೆಯಾಗುತ್ತಿರುವ ಜಾನಪದ ಕಲೆಗಳನ್ನು ದಾಖಲೀಕರಿಸೊಣ.
- ಮಹಿಳೆಯರ ಜಾನಪದ ಜ್ಞಾನವನ್ನು ಸಂಗ್ರಹಿಸೋಣ, ಉನ್ನತ್ತೀಕರಿಸೋಣ
- ಮಕ್ಕಳಿಗೆ ಜಾನಪದ ಪರಿಚಯಿಸೋಣ.
- ಪ್ರಾಥಮಿಕ ಶಾಲೆಯಿಂದ ಮೊದಲುಗೊಂಡು ವಿಶ್ವವಿದ್ಯಾಲಯದ ಮಟ್ಟದಲ್ಲಿ ಜಾನಪದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸೋಣ.
- ನಮ್ಮ ಸಾಂಪ್ರದಾಯಿಕ ಗ್ರಾಮೀಣ ಹಬ್ಬ-ಆಚರಣೆ ಮಹತ್ವ ತಿಳಿಸೋಣ
- ನಮ್ಮ ನಾಡಿನ ಭಾಷೆ, ಸಂಸ್ಕೃತಿ, ನಮ್ಮ ಮಣ್ಣಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಗೌರವಯುತವಾಗಿ ಧಾರೆ ಎರೆಯೋಣ..
ಜಯವಾಗಲಿ...
ಝಗ ಮಗಿಸುತ್ತಿರುವ ಈ ವರ್ಣರಂಜಿತ 
ಪ್ರಥಮ ಮಹಿಳಾ ಜಾನಪದ ಸಮ್ಮೆಳನವು
ಈ ನೆಲದ ಮಣ್ಣಿನಲ್ಲಿ ಮೈಲುಗಲ್ಲಾಗಿ ನಿಲ್ಲಲಿ...
ಶುಭವಾಗಲಿ... ಯಶಸ್ವಿಯಾಗಲಿ 
ನಾವು ನೀವು ಬಂಗಾರದ ಹಾಗೆ ಇರೋಣ...
ಜೈ ಕನ್ನಡ, ಜೈ ಕರ್ನಾಟಕ, ಜಾನಪದಕ್ಕೆ ಜಯವಾಗಲಿ, ಮಹಿಳಾ ಶಕ್ತಿಗೆ ಜಯವಾಗಲಿ, ಜೈ ಕನ್ನಡಾಂಬೆ ಜೈ ಜಾನಪದ.
ಧನ್ಯವಾದಗಳು. 

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬನ್ನಿ... ಜಾನಪದ ಉಳಿಯಲಿ ಕಲೆಗಳು ಚಿರನೂತನವಾಗಲಿಜಾನಪದ ಕಲಾವಿದರ ಮಾಶಾಸನ ಹೆಚ್ಚಳ, ವಯೋಮಿತಿ ಕಡಿತಕ್ಕೆ ಸಿಎಂ ಜೊತೆ ಚರ್ಚೆ: ಉಮಾಶ್ರೀ2028ರ ಚುನಾವಣೆಯಲ್ಲಿ ರೈತ ವಿರೋಧಿ ಕಾಂಗ್ರೆಸ್ಸಿಗರನ್ನು ಜನರೇ ಮನೆಗೆ ಕಳುಹಿಸಲಿದ್ದಾರೆ: ನಿಖಿಲ್ ಕುಮಾರಸ್ವಾಮಿ`ಶ್ರೀಅನ್ನದಾನೀಶ್ವರ ಮಹಾತ್ಮೆ’ ಟ್ರೇಲರ್ ಅನಾವರಣಧಗೆ ಚಿತ್ರದಲ್ಲಿ ಸುರಕ್ಷ ಚಹಾ ಪಾತ್ರವಾಗಿ ಮೂಡಿಬಂದಿದೆಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ `ಮಹಿಮಾ’ ಚಿತ್ರ ನವದೆಹಲಿಯಲ್ಲಿ ಡಿ.ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಂಭ್ರಮಕನ್ನಡ ಸಿನಿ ಬದುಕಿನ ಒಳನೋಟ ಶುಭಂ ಪತ್ರಕರ್ತರು ಗಣೇಶ್ ಕಾಸರಗೋಡುರಚಿತಾ ರಾಮ್ ಬರ್ತ್ಡೇ; ಅಭಿಮಾನಿಗಳ ಸಂಭ್ರಮ ನಟಿ `ಡಿಂಪಲ್ ಕ್ವೀನ್’ ರಚಿತಾ ರಾಮ್  ಜನ್ಮದಿನದ ಸಂಭ್ರಮರೋಲೆಕ್ಸ್’ ಈಗ ‘ರಿಲಾಕ್ಸ್’