ಬೆಂಗಳೂರು: ರಾಜ್ಯಸರ್ಕಾರದ ವತಿಯಿಂದ ವಿವಿಧ ಇಲಾಖೆಗಳ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಹಣ ಕೂಡಲೇ ಪಾವತಿ ಮಾಡಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಹಣ ಪಾವತಿಗೆ ವಿಳಂಬವಾಗುತ್ತಿರುವುದರಿAದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿದ್ದಾರೆ. ಕಮಿಷನ್ ಕೊಟ್ಟವರಿಗೆ ಕೂಡಲೇ ಹಣ ಪಾವತಿಯಾಗುತ್ತಿದೆ ಎಂದು ಆರೋಪಿಸಿದ ಅವರು ನವೆಂಬರ್ ತಿಂಗಳೊಳಗೆ ತಮ್ಮ ಹಣ ಪಾವತಿಯಾಗದಿದ್ದರೆ ಕಮಿಷನ್ ಪಡೆದಿರುವವರ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.