ಬೆಂಗಳೂರು: ಗೃಹಲಕ್ಷ್ಮೀ' ಯೋಜನೆಗೆ ವಿಳಂಬ ನೀತಿ: SIಖ ನೆಪದಲ್ಲಿ ಬಡ ತಾಯಂದಿರ ಹೊಟ್ಟೆಗೆ ಹೊಡೆಯುವುದೇ ಕಾಂಗ್ರೆಸ್ ಸರ್ಕಾರದ ಹುನ್ನಾರವಲ್ಲವೇ? ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಚುನಾವಣೆ ವೇಳೆ "ಉಚಿತ, ಉಚಿತ" ಎಂದು ಕರ್ನಾಟಕದ ಸ್ವಾಭಿಮಾನಿ ತಾಯಂದಿರಿಗೆ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿದ್ದ @INCKarnataka ಸರ್ಕಾರ, ಈಗ `ಗೃಹಲಕ್ಷ್ಮೀʼ ಯೋಜನೆಗೆ ಹೊಸ ಹೊಸ ತಾಂತ್ರಿಕ ಕಟ್ಟುಪಾಡುಗಳನ್ನು ಹಾಕಿ, SIR (Special Intensive Revision) ಪ್ರಕ್ರಿಯೆಯ ನೆಪವೊಡ್ಡಿ ಹಣ ಬಿಡುಗಡೆಯನ್ನು ವಿಳಂಬ ಮಾಡುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಫಲಾನುಭವಿ ಮಹಿಳೆಯ ಹೆಸರಲ್ಲೇ ಸಿಮ್ ಕಾರ್ಡ್ ಇರಬೇಕು, ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಎಂಬ ಕಟ್ಟುನಿಟ್ಟಿನ ನಿಯಮಗಳಿಂದ ಗ್ರಾಮೀಣ ಹಾಗೂ ಬಡ ಮಹಿಳೆಯರು ರಸ್ತೆಗೆ ಇಳಿಯುವಂತಾಗಿದೆ.