ಬೆಂಗಳೂರು: ಕನ್ನಡ ಜಾನಪದ ಪರಿಷತ್‌ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಶ್ಚಿಮ ವಲಯದ ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೇ *ದಿನಾಂಕ 07-10-2026ರ ಬುಧವಾರದಂದು ಗೋವಿಂದರಾಜನಗರ `ಪ್ರಥಮ ಮಹಿಳಾ ಜಾನಪದ ಸಮ್ಮೇಳನ'*ವನ್ನು ಅತ್ಯಂತ ವಿಜೃಂಭಣೆಯಿAದ ಆಯೋಜಿಸಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್ ಬಾಲಾಜಿ ರವರು ಮತ್ತು ಪಶ್ಚಿಮ ವಲಯದ ಅಧ್ಯಕ್ಷರಾದ ರ. ನರಸಿಂಹಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೂಡಲಪಾಳ್ಯ ಕಲ್ಯಾಣನಗರದ "`ಜ್ಞಾನಸೌಧ ಸಭಾಂಗಣ" ದಲ್ಲಿ ಜರುಗಲಿರುವ ಈ ಐತಿಹಾಸಿಕ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಖ್ಯಾತ ಪತ್ರಕರ್ತೆ ಹಾಗೂ `ಇಂದು ಸಂಜೆ' ಪತ್ರಿಕೆಯ ಪ್ರಧಾನ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ. ವೈ. ಪದ್ಮನಾಗರಾಜು ಅವರು ವಹಿಸಲಿದ್ದಾರೆ. ಮಾಜಿ ಸಚಿವರು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ ರವರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಿಯಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮಾನ್ಯ ಉಪಸಭಾಪತಿಗಳಾದ ಡಾ. ಉಮಾಶ್ರೀ ರವರು ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. 30 ಮಹಿಳಾ ಸಾಧಕರಿಗೆ ಸನ್ಮಾನ: ಗೋವಿಂದರಾಜನಗರದ ಪ್ರಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ, ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟವಾದ ಸಾಧನೆ ಮಾಡಿರುವ 30 ಜನ ಮಹಿಳಾ ಸಾಧಕರನ್ನು ಗುರುತಿಸಿ ಅವರಿಗೆ `ಸೋಬಾನೆ ಚಿಕ್ಕಮ್ಮ', `ಡಾ. ಕಮಲಾ ಹಂಪನಾ' ಮತ್ತು `ಸಿರಿಮನೆ ಅಜ್ಜಿ' ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಗಣ್ಯರ ಉಪಸ್ಥಿತಿ: ಜಾನಪದ ಸಂಸ್ಕöÈತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಮಹತ್ಕಾರ್ಯಕ್ರಮದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಪೂಜ್ಯ ಸ್ವಾಮೀಜಿಗಳು, ರಾಜಕೀಯ ಧುರಿಣರು, ಜಾನಪದ ವಿದ್ವಾಂಸರು, ಸಾಹಿತಿಗಳು ಹಾಗೂ ನಾಡಿನ ಪ್ರಮುಖ ಜನಪದ ಗಾಯಕರು, ಕಲಾವಿದರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9035732049 / 9513555225