ಹಾಸನ: ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಹೊಸ ದಾಖಲೆ ಬರೆದಿದೆ. ಒಟ್ಟು 30,06,000 ಭಕ್ತರು ದೇವಿ ದರ್ಶನ ಪಡೆದಿದ್ದು, ಎಲ್ಲಾ ಮೂಲಗಳಿಂದ ಒಟ್ಟು 29,55,27,852 ರೂ. ಆದಾಯ ಸಂಗ್ರಹವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.2025ರಲ್ಲಿ 13 ದಿನಗಳಲ್ಲಿ 25 ಲಕ್ಷ 36 ಭಕ್ತರು ದರ್ಶನ ಪಡೆದಿದ್ದು, 1,000, 300 ರೂ. ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದ ಹಾಗೂ ಹುಂಡಿ ಕಾಣಿಕೆ ಸೇರಿ 25.59 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಅ.29 ರಂದು ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆದಿದ್ದು, ಅಂದು ಸಾರ್ವಜನಿಕರಿಗೆ ದರ್ಶನ ಇಲ್ಲದಿದ್ದರೂ, ಈ ವೇಳೆ ನೆರೆದಿದ್ದವರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅ.29 ರಂದು 5,600 ಮಂದಿ ದೇವಿ ದರ್ಶನ ಪಡೆದಿದ್ದರು. ಅ.30 ರಿಂದ ನ.10 ರವರೆಗೆ ಒಟ್ಟು 12 ದಿನಗಳು ಕಾಲ ದೇಶ, ರಾಜ್ಯ, ಹೊರ ರಾಜ್ಯ, ಜಿಲ್ಲೆ, ಹೊರ ಜಿಲ್ಲೆಗಳಿಂದ 30,06,000 ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 1,000 ರೂ.ನ ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 16,98,11,257 ರೂಪಾಯಿ, 300 ರೂ.ನ ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 7,24,14,000 ರೂಪಾಯಿ, ಲಾಡು ಮಾರಾಟದಿಂದ 1,35,99,156 ರೂಪಾಯಿ, ದೇಣಿಗೆಯಾಗಿ 5,91,228 ರೂ, ಇ-ಹುಂಡಿಯಿAದ 13,13,264 ರೂ, ಜಾಹೀರಾತಿನಿಂದ 5,74,000 ರೂಪಾಯಿ ಸೇರಿ ಒಟ್ಟು 25,82,88,199 ರೂಪಾಯಿಗಳು ಸಂಗ್ರಹವಾಗಿದೆ ಎಂದರು.ಭಕ್ತರು ಕಾಣಿಕೆ ರೂಪದಲ್ಲಿ 3,71,63,933 ರೂಪಾಯಿ ಹುಂಡಿಯಲ್ಲಿ ಹಾಕಿದ್ದು ಎಲ್ಲಾ ಸೇರಿ ಒಟ್ಟು 29,55,27,852 ರೂಪಾಯಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ 4 ಕೋಟಿ ಹೆಚ್ಚಿನ ಆದಾಯ ಬಂದಿದೆ.