ಬೆಂಗಳೂರು: ನೈಸ್ ಯೋಜನೆಯಲ್ಲಿ ನಡೆದಿರುವ ವಿವರಗಳನ್ನು ಇದುವರೆಗೂ ನಡೆದಿರುವ ವಿವರಗಳನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸುದೀರ್ಘವಾಗಿ ಇಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. 1995ರಲ್ಲಿ ಆರಂಭದಲ್ಲಿ ನೈಸ್ ಯೋಜನೆಯಲ್ಲೂ ಇದರ ಹೆಸರು ಇರಲಿಲ್ಲ. ಬೆಂಗಳೂರು,ಮೈಸೂರು ಇನ್ಫಾಸ್ಟçಕ್ಚರ್ ಕಾರಿಡಾರ್ ಎಂದು ಹೆಸರಿಸಲಾಗಿತ್ತು. ಅಮೆರಿಕದ ಒಂದು ಕಂಪೆನಿ ಸೇರಿದಂತೆ ಬಾಬಾ ಕಲ್ಯಾಣಿ ಮತ್ತು ಮೂರು ಕಂಪೆನಿಗಳ ಹೆಸರಿನಲ್ಲಿ ಈ ಯೋಜನೆ ಆರಂಭವಾಯಿತು. ಇದಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ಯೋಜನೆಗೆ ಒಡಂಬಡಿಕೆ ಮಾಡಿಕೊಳ್ಳುವ ಕಂಪೆನಿಗಳೇ ಬರಿಸಬೇಕು ಎಂದು ನಮೂದಿಸಲಾಗಿತ್ತು. ಯೋಜನೆ ವ್ಯಾಪ್ತಿಯಲ್ಲಿ ಏಳು ಉಪನಗರಗಳ ಸ್ಥಾಪನೆ ಮಾಡಬೇಕೆಂಬ ವಿವರವನ್ನು ಅದರಲ್ಲಿ ಪ್ರಸ್ತಾಪಿಸಲಾಗಿತ್ತು. ಈ ರಾಜ್ಯದ ಮುಖ್ಯಮಂತ್ರಿಗಳು ಪದೇ ಪದೇ ನೈಸ್ ಯೋಜನೆ ದೇವೇಗೌಡರ ಕಾಲದಲ್ಲಿ ಮಾಡಿದ್ದು, ನಾವು ಅದಕ್ಕೆ ಗೌರವ ಕೊಡಬೇಕು ಎಂದು ಹೇಳುತ್ತಿದ್ದಾರೆ. ಹಾಗಾಗಿ ಇದನ್ನು ನಾವು ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದ್ದಾರೆ.