ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಶ್ರೀಗಳ ಜಾಮೀನು ರದ್ದು ಕೋರಿ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಮಹತ್ವದ ತೀರ್ಪನ್ನು ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಇಂದು ಪ್ರಕಟಿಸಲಿದೆ.
ಪೊಲೀಸರು ಈಗಾಗಲೇ 410 ಪುಟಗಳ ಬಲವಾದ ಚಾರ್ಜ್ ಶೀಟ್ ಸಲ್ಲಿಸಿದ್ದು, ಇಂದು ಕೋರ್ಟ್ ಏನಾದರೂ ಜಾಮೀನು ರದ್ದು ಮಾಡಿದರೆ ವಚನಾನಂದ ಶ್ರೀಗಳಿಗೆ ಜೈಲು ಫಿಕ್ಸ್ ಆಗಲಿದೆ.