ದಾವಣಗೆರೆ: ಜಿಲ್ಲೆಯ ಹರಿಹರ ಹಾಗೂ ಜಗಳೂರು ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಎದುರಾಗಿರುವ ಬರದ ಪರಿಸ್ಥಿತಿ ಹಾಗೂ ಬಿತ್ತನೆ ವೈಫಲ್ಯಕ್ಕೆ ಸಂಬAಧಿಸಿದAತೆ ರೈತ ಮುಖಂಡರೊಂದಿಗೆ ಬುಧವಾರ ಸಭೆ ನಡೆಸಿ ವರದಿ ನೀಡುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯ ರೈತರೊಂದಿಗೆ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ವೈಫಲ್ಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ರೈತರಿಗೆ ನ್ಯಾಯಯುತವಾಗಿ ಬೆಳೆ ವಿಮೆ ಪರಿಹಾರ ದೊರೆಯಬೇಕು ಹಾಗೂ ಯೋಜನೆಯಲ್ಲಿ ಯಾವುದೇ ಲೋಪದೋಷಗಳು ಆಗಬಾರದು , ರೈತರಲ್ಲಿರುವ ಗೊಂದಲಗಳನ್ನು ನಿವಾರಿಸಲು ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ತಂಡವು ನಾಳೆ ಜಗಳೂರು ಮತ್ತು ಹರಿಹರ ಭಾಗಗಳಲ್ಲಿ ರೈತರೊಂದಿಗೆ ನೇರ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊAಡಲು ಅಧಿಕಾರಿಗಳಿಗೆ ತಿಳಿಸಿದರು.ಕೃಷಿ ಜಂಟಿ ನಿರ್ದೇಶಕರ ಜಿಯಾವುಲ್ಲಾ ಅವರು ಮಾತನಾಡಿ, ಚನ್ನಗಿರಿ ತಾಲ್ಲೂಕಿನಲ್ಲಿ 9,500 ಅರ್ಜಿಗಳಿಂದ 5,175 ಹೆಕ್ಟೇರ್, ದಾವಣಗೆರೆಯಲ್ಲಿ 13,164 ಅರ್ಜಿಗಳಿಂದ 8,398 ಹೆಕ್ಟೇರ್, ಹರಿಹರದಲ್ಲಿ 5,935 ಅರ್ಜಿಗಳಿಂದ 3,529 ಹೆಕ್ಟೇರ್, ಹೊನ್ನಾಳಿಯಲ್ಲಿ 12,069 ಅರ್ಜಿಗಳಿಂದ 5,395 ಹೆಕ್ಟೇರ್, ಜಗಳೂರಿನಲ್ಲಿ 34,431 ಅರ್ಜಿಗಳಿಂದ 28,792 ಹೆಕ್ಟೇರ್ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 15,631 ಅರ್ಜಿಗಳಿಂದ 6,707 ಹೆಕ್ಟೇರ್ ಪ್ರದೇಶ ನೋಂದಾಯಿಸಲ್ಪಟ್ಟಿದೆ. ಒಟ್ಟಾರೆಯಾಗಿ ಎಲ್ಲಾ ತಾಲ್ಲೂಕುಗಳಿಂದ
90,730 ಅರ್ಜಿಗಳು ಬಂದಿದ್ದು, ಒಟ್ಟು 57,998 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ
ನೋಂದಣಿಯಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಫಸಲ್ ಭೀಮಾ (ಬೆಳೆ ವಿಮೆ) ಯೋಜನೆಯಡಿ ರೈತರಿಗೆ ಲಭಿಸುವ ನಷ್ಟ ಪರಿಹಾರದ ಕುರಿತಂತೆ ಬಿತ್ತನೆ ವಿಫಲತೆ ಬೆಳೆ ವಿಮೆ ಯೋಜನೆಯಡಿ ಹವಾಮಾನ ವೈಪರೀತ್ಯದಿಂದಾಗಿ ಬಿತ್ತನೆ ಮಾಡಲು ಸಾಧ್ಯವಾಗದಿದ್ದರೆ, ವಿಮೆ ಮಾಡಿಸಿದ ರೈತರಿಗೆ ಶೇ. 25 ರಷ್ಟು ಪರಿಹಾರ ಮೊತ್ತ (ಹೆಕ್ಟೇರ್‌ಗೆ ಸುಮಾರು 6,750 ರಿಂದ 16,000 ವರೆಗೆ) ಸಿಗಲಿದೆ. ಈ ಹಂತದಪರಿಹಾರದನAತರ ಆ ಬೆಳೆಯವಿಮೆ ಕ್ಲೇಮ್‌ಮುಕ್ತಾಯಗೊಳ್ಳಲಿದ್ದು, ರೈತರುಬೇರೆಬೆಳೆಬೆಳೆಯಲು ಅವಕಾಶವಿರುತ್ತದೆ ಎಂದರು. ಮಧ್ಯಂತರ ವಿಪತ್ತು ಬೆಳೆ ವಿಮೆ ಯೋಜನೆಯಡಿ ಶೇ. 50 ಕ್ಕಿಂತ ಹೆಚ್ಚು ಬೆಳೆ ಹಾನಿಯಾದಲ್ಲಿ ಕಮಿಟಿ ವರದಿಯನ್ನಾಧರಿಸಿ ಶೇ. 25 ರಷ್ಟು ಪರಿಹಾರವನ್ನು ಅನುಪಾತದ ಆಧಾರದ ಮೇಲೆ ನೀಡಲಾಗುತ್ತದೆ. ಸ್ಥಳೀಯ ವಿಪತ್ತು ಬೆಳೆ ವಿಮೆ ಯೋಜನೆಯಡಿ ಅತಿವೃಷ್ಟಿ ಅಥವಾ ಪ್ರಾಕೃತಿಕ ವಿಕೋಪದಿಂದ ಬೆಳೆ ನಾಶವಾದರೆ, ರೈತರು 48 ರಿಂದ 72 ಗಂಟೆಗಳ ಒಳಗಾಗಿ ವಿಮಾ ಕಂಪನಿಗೆ ಮಾಹಿತಿ ನೀಡಬೇಕು. ನಂತರ ಜಂಟಿ ಪರಿಶೀಲನೆ ನಡೆಸಿ ಬೆಳೆ ನಷ್ಟದ ಆಧಾರದ ಮೇಲೆ ಪರಿಹಾರ ನಿರ್ಧರಿಸಲಾಗುತ್ತದೆ ಎಂದರು.
ಕೊಯ್ಲೋತ್ತರ ನಷ್ಟ ಹಾಗೂ ಬೆಳೆ ಕಟಾವು ಪ್ರಯೋಗಕ್ಕೆ ಸಂಬAಧಿಸಿದAತೆ ಬೆಳೆ ಕಟಾವು ಪ್ರಯೋಗ ಮತ್ತು ಕಳೆದ 7 ವರ್ಷಗಳ ಸರಾಸರಿ ಇಳುವರಿಯನ್ನು ಆಧರಿಸಿ ಆಯಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಹಾರ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ತಿಳಿಸಿದರು. ರೈತರು ಕೊನೆಯ ದಿನಾಂಕದ ಒಳಗಾಗಿ ತಮ್ಮ ಬೆಳೆ ವಿವರ ಹಾಗೂ ವಿಮೆ ಸ್ಥಿತಿಯನ್ನು ‘ಸಂರಕ್ಷಣೆ’ ಪೋರ್ಟಲ್‌ನಲ್ಲಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು. ಜಿಲ್ಲಾಧಿಕಾರಿಗಳು ಮಾತನಾಡಿ, ರೈತರು ತಮ್ಮ ವ್ಯಾಪ್ತಿಯ ಕೃಷಿ ವಿಮಾ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ವಿಮಾ ಕಚೇರಿಗೆ ಸ್ಥಳಾವಕಾಶ ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ , ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್, ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ರೈತ ಮುಖಂಡರುಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.