ಬೆಂಗಳೂರು: ಇಲ್ಲಿನ ಹೆಬ್ಬಾಳ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ನಂದನ್ (25) ಸಾವನ್ನಪ್ಪಿರುವ ಜಿಮ್ ಟ್ರೈನರ್. ಶನಿವಾರ ಜಿಮ್ ಮೊದಲ ವರ್ಷದ ಆ್ಯನಿವರ್ಸರಿ ಇತ್ತು. ತಡವಾದರೆ ಬೆಳಗ್ಗೆ ಬರುತ್ತೇನೆ ಅಂತ ಮನೆಯವರಿಗೆ ಹೇಳಿ ನಂದನ್ ತೆರಳಿದ್ದರು. ಆ್ಯನಿವರ್ಸರಿ ಮುಗಿಸಿ ಇತರೆ ಸಿಬ್ಬಂದಿ ಜೊತೆ ಪರಿಚಿತರ ಅಪಾರ್ಟ್ಮೆಂಟ್‌ಗೆ ಹೋಗಿದ್ದರು.