LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ದರೋಡೆ, ಶೂಟೌಂಟ್ ಪ್ರಕರಣ; ಜಾರ್ಖಂಡ್ ಮೂಲದ ಇಬ್ಬರು ಆರೋಪಿಗಳ ಬಂಧನ

ಕುಣಿಗಲ್: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಾಡು ಹಗಲೇ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಜಾರ್ಖಂಡ್ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕುಣಿಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದ ಶೂಟೌಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ರಾಜ್ಯದ ಎಜಾಜ್ ಮತ್ತು ಸಹೇಬ್‍ಉಲ್ಲಾನನ್ನು ಕುಣಿಗಲ್ ಪೊಲಿಸರು ಬಂಧಿಸಿದ್ದಾರೆ.ಘಟನೆ ವಿವರ: ಮಾ.26 ರಂದು ಆರೋಪಿಗಳು ಕುಡಿಯುವ ನೀರು ಕೇಳುವ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಸಮೀಪದ ಕುಣಿಗಲ್ ತಾಲ್ಲೂಕಿನ ಉರ್ಕೆಹಳ್ಳಿ ಗ್ರಾಮದ ತೋಟದ ಒಂಟಿ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲೀಕ ಗಂಗಯ್ಯ, ಅತನ ಹೆಂಡತಿ, ಗಂಗಮ್ಮ , ಮಗಳು ಪುಷ್ಪಲತಾ ಅವರನ್ನು ಬಂದೂಕಿನಿಂದ ಹೆದರಿಸಿ ಗಂಗಯ್ಯನ ಮೇಲೆ ಗುಂಡು ಹಾರಿಸಿ ಲ್ಯಾಪ್ ಟಾಪ್ ಬ್ಯಾಗ್‍ನಲ್ಲಿದ್ದ ನಗದು ದೋಚಿಕೊಂಡು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದರು.

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ: ಘಟನೆ ಸಂಬಂಧ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು. ಘಟನಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದರು.
ಪೊಲೀಸ್ ತಂಡ ರಚನೆ: ಘಟನೆಯನ್ನು ಗಂಭೀರವಾಗಿ ತಗೆದುಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕೇಂದ್ರ ವಲಯ, ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್.ಪಿ ಅಶೋಕ್, ಎಎಸ್‍ಪಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಓಂಪ್ರಕಾಶ್, ಸಿಪಿಐ ನವೀನ್ ಗೌಡ ನೇತೃತ್ವದಲ್ಲಿ ಪೊಲಿಸ್ ತಂಡವನ್ನು ರಚಿಸಿದರು.

ಅಣ್ಣನ ನೋಡಲು ಬಂದ ಆರೋಪಿ: ಆರೋಪಿ ಜಾರ್ಖಂಡ್ ರಾಜ್ಯದ ಮೂಲದ ಎಜಾಜ್ ತನ್ನ ಅಣ್ಣ ಕೆಲಸ ಮಾಡುತ್ತಿರುವ ಕರ್ನಾಟಕದ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿಗೆ ಹಲವು ಭಾರಿ ಬಂದು ಅಣ್ಣನನ್ನು ಬೇಟಿ ಮಾಡಿ ಹೋಗಿದನ್ನು ಎನ್ನಲಾಗಿದೆ.ಬೈಕ್ ಕಳ್ಳತನ !: ಅಣ್ಣನನ್ನು ನೋಡಲು ಬಂದ ಏಜಾಜ್ ಮತ್ತು ಸಹೇಬ್‍ಉಲ್ಲಾ ಜಾರ್ಖಂಡ್‍ನಿಂದ ಬಂದುಕು ತೆಗೆದುಕೊಂಡು ಬಂದು, ಬೆಂಗಳೂರಿನಲ್ಲಿ ಬೈಕ್ ಕದ್ದಿದರು ಎನ್ನಲಾಗಿದ್ದು ಕುಣಿಗಲ್ ಮಾರ್ಗವಾಗಿ ತುರುವೇಕೆರೆಗೆ ಹೊಗುತ್ತಿದ್ದ ವೇಳೆ ಉರ್ಕೆಹಳ್ಳಿ ಒಂಟಿ ಮನೆಯನ್ನು ಟಾರ್ಗೇಟ್ ಮಾಡಿ ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆ ಒಳಗೆ ನುಗ್ಗಿ ದರೋಡೆ ಮಾಡಿದ್ದಾರೆ. ಬಳಿಕ ಬೈಕ್ ನಲ್ಲಿ ಪರಾರಿಯಾಗಿದರು.

ಆರೋಪಿಗಳ ಎಡೆಮುಡಿ ಕಟ್ಟಿದ ಪೊಲೀಸರು; ಘಟನೆಯನ್ನು ಸವಾಲಾಗಿ ತೆಗೆದುಕೊಂಡ ಪೊಲೀಸರ ತಂಡವು ಆರೋಪಿಗಳ ಪತ್ತೆಗೆ ವಿವಿಧೆಡೆ ಕಾರ್ಯಚರಣೆ ನಡೆಸಿತು. ಬಳಿಕ ಆರೋಪಿಗಳಾದ ಎಜಾಜ್ ಮತ್ತು ಸಹೇಬ್‍ಉಲ್ಲಾ ಎಡೆಮುಡಿ ಕಟ್ಟಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗರೀಕರ ಪ್ರಶಂಸೆ: ಘಟನೆ ನಡೆದು ಕೇವಲ ಐದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಚರಣೆಗೆ ತಾಲ್ಲೂಕಿನ ನಾಗರೀಕರು ಪ್ರಶಂಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು