ಚನ್ನೈ: ಅಧಿಕಾರಕ್ಕೆ ಬಂದ ಮೊದಲ ದಿನವೇ ತಾವು ನೀಡಿರುವ ಭರವಸೆಗಳ ಹಲವು ಅಂಶಗಳಿಗೆ ಸಹಿ ಹಾಕಿದ್ದ ಮುಖ್ಯಮಂತ್ರಿ ವಿಜಯ್ ಅವರು ಇದೀಗ ರಾಜ್ಯದಲ್ಲಿ 717 ಮದ್ಯದಂಗಡಿ ಬಂದ್ ಮಾಡಲು ಆದೇಶಿಸಿದ್ದಾರೆ.
ಶಾಲೆ, ಬಸ್ ನಿಲ್ದಾಣ ಹಾಗೂ ಧಾರ್ಮಿಕ ಕೇಂದ್ರಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ಎರಡುವಾರದೊಳಗಾಗಿ ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಶಾಲಾ ಪ್ರದೇಶದ ಬಳಿಯ 186 ಬಸ್ ನಿಲ್ದಾಣ ವ್ಯಾಪ್ತಿಯ 355, ಧಾರ್ಮಿಕ ಕೇಂದ್ರಗಳ ವ್ಯಾಪ್ತಿಯ 176 ಅಂಗಡಿಗಳನ್ನು ಮುಚ್ಚುವಂತೆ ಅವರು ಸೂಚನೆ ನೀಡಿದ್ದಾರೆ.
ತಮಿಳುನಾಡಿನಲ್ಲಿ 717 ಮದ್ಯದಂಗಡಿಗಳ ಬಂದ್ಗೆ ಆದೇಶ



