ಕೆ.ಆರ್.ನಗರ: ಈ ದೇಶದ ಬೆನ್ನಲುಬು ರೈತನಾದರೆ ರೈತನ ಉಸಿರು ಜಾನುವಾರುಗಳಾಗಿದ್ದು 12ನೇ ಶತಮಾನದ ಬಸವಣ್ಣನವರು ಜನ್ಮದಿನಾಚರಣೆಯನ್ನು ಬಸವ ಜಯಂತಿ ಎಂದು ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಧ್ಯಕ್ಷ ರಾಘವೇಂದ್ರ ಹೇಳಿದರು. ಪಟ್ಟಣದ ಆಂಜನೇಯ ಬಡಾವಣೆಯ ಶ್ರೀ ಆಂಜನೇಯಸ್ವಾಮಿ ಆವರಣದಲ್ಲಿರುವ ಶ್ರೀ ಬಸವೇಶ್ವರ ರೈತ ಗಾಡಿ ಸಂಘದ ವತಿಯಿಂದ 48ನೇ ವರ್ಷದ ಬಸವ ಜಯಂತಿ ಆಚರಣೆ ರಾಸುಗಳ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ರೈತ ರಾಸುಗಳಿಗೆ ಮೇವು ಸಿಗುತ್ತಿಲ್ಲ, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಲುಕ್ಕಿ ಆತ್ಮಹತ್ಯೆಗೆ ಶರಣಾಗುತ್ತಿರವುದು ಬೇಸರ ತಂದಿದ್ದು ಇದರ ಜತೆಗೆ ರೈತ ಬೆಳೆ ಸಾಲ ನೀಡುವಲ್ಲಿ ಸಹಕಾರಿ ಬ್ಯಾಂಕ್ಗಳು ಸರಿಯಾಗಿ ಸ್ಪಂದಿಸದಿರುವುದು ಮತ್ತು ಇಂದಿನ ಆಧುನಿಕ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ರೈತ ತೊಡಗಿಸಿಕೊಳ್ಳುತ್ತಿರುವುದರಿಂದ ಇಂದು ರೈತನ ಪರಿಸ್ಥಿತಿ ತೀರ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಸಂಘದ ವತಿಯಿಂದ ಪ್ರತಿ ವರ್ಷ ಬಸವ ಜಯಂತಿ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುವುತ್ತಿರುವುದಾಗಿ ಕಾರ್ಯದರ್ಶಿ ಅಶ್ವಥ್ನಾರಾಯಣ್ ತಿಳಿಸಿದರು. ಬಸವ ಜಯಂತಿಯ ದಿನದಂದು ಬೆಳಿಗ್ಗೆ ಆಂಜನೇಯಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಮತ್ತು ಬೆಣ್ಣೆ ಅಲಂಕಾರ ಮಾಡಿ ಆಂಜನೇಯ ಸ್ವಾಮಿ ದೇವರಿಗೆ ವಿಶೇಷ ಪೂಜೆಯೊಂದಿಗೆ ಮಧ್ಯಾಹ್ನ 3.00 ಗಂಟೆಗೆ ರಾಸುಗಳ ಮೆರವಣಿಯನ್ನು ನಗರದ ಬಜಾರ ರಸ್ತೆ, 7ನೇ ರಸ್ತೆಯ ಮೂಲಕ ಬಸವೇಶ್ವರ ಬ್ಲಾಕಿನಲ್ಲಿರುವ ಬಸವೇಶ್ವರ ಮತ್ತು ಮಹಾದೇಶ್ವರ ದೇವಸ್ಥಾನದ ಮೂಲಕ ಗರುಡಗಂಭ ವೃತ್ತ, ವಿ.ವಿ.ರಸ್ತೆ ಮೂಲಕ ಪುರಸಭಾ ವೃತ್ತ ದಿಂದ ಸಿ.ಎಂ. ರಸ್ತೆಯ ಮೂಲಕ ವಿವಿಧ ಜಾನಪದ ಕಲಾತಂಡಗಳು, ಡೊಳ್ಳುಕುಣಿತ, ವೀರಗಾಸೆ, ಮಂಗಳವಾದ್ಯದೊAದಿಗೆ ರಾಸುಗಳ ಮೆರವಣಿಗೆ ನಡೆಸಿ ಸಂಜೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಮಾಡಲಾಯಿತು ಎಂದರು. ಬಸವ ಜಯಂತಿಯ ಆಚರಣೆಯ ರಾಸುಗಳ ಮೆರವಣಗೆಯಲ್ಲಿ ರೈತ ಗಾಡಿ ಸಂಘದ ಪದಾಧಿಕಾರಿಗಳಾದ ಕೇಶವಮೂರ್ತಿ, ಗೋವಿಂದೇಗೌಡ, ನಾರಾಯಣ್ನಾಯಕ್, ಜಗದೀಶ್, ದೇವರಾಜು, ಶಂಕರ್, ಗಜೇಂದ್ರ, ಕುಳ್ಳೇಗೌಡ, ರವಿ, ರಮೇಶ್, ಅಶೋಕ್, ಕುಮಾರ, ರಾಮಿ, ಸಚ್ಚಿನ್, ವಿನಯ್ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.



